AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಿಂದ ಡ್ರೋನ್​ನಲ್ಲಿ​ ಬಂದ 3 ಕೆಜಿ ಹೆರಾಯಿನ್​​ ವಶಪಡಿಸಿಕೊಂಡ ಬಿಎಸ್‌ಎಫ್

ಪಂಜಾಬ್​ನ ಅಮೃತಸರ ಜಿಲ್ಲೆಯ ಅಜ್ನಾಲಾ ಉಪ ವಿಭಾಗದ ಧನೋ ಕಲಾನ್ ಬಳಿ ಪಾಕಿಸ್ತಾನದಿಂದ ಬಂದಿರುವ ಡ್ರೋನ್​ನ್ನು ಹೊಡೆದುರುಳಿಸಿ 3 ಕೆಜಿ ಹೆರಾಯಿನ್​​ನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ​​ವಶಪಡಿಸಿಕೊಂಡಿದ್ದಾರೆ.

ಪಾಕಿಸ್ತಾನದಿಂದ ಡ್ರೋನ್​ನಲ್ಲಿ​ ಬಂದ 3 ಕೆಜಿ ಹೆರಾಯಿನ್​​ ವಶಪಡಿಸಿಕೊಂಡ ಬಿಎಸ್‌ಎಫ್
ಪಾಕಿಸ್ತಾನದಿಂದ ಬಂದಿರುವ ಡ್ರೋನ್​ನ್ನು ಹೊಡೆದುರುಳಿಸಿ 3 ಕೆಜಿ ಹೆರಾಯಿನ್ ವಶ
TV9 Web
| Edited By: |

Updated on:Mar 11, 2023 | 12:51 PM

Share

ಅಜ್ನಾಲಾ: ಇಂದು (ಮಾ.11) ಮುಂಜಾನೆ ಪಂಜಾಬ್​ನ ಅಮೃತಸರ (Amritsar) ಜಿಲ್ಲೆಯ ಅಜ್ನಾಲಾ ಉಪ ವಿಭಾಗದ ಧನೋ ಕಲಾನ್ ಬಳಿ ಪಾಕಿಸ್ತಾನದಿಂದ (Pakistan) ಬಂದಿರುವ ಡ್ರೋನ್​ನ್ನು ಹೊಡೆದುರುಳಿಸಿ 3 ಕೆಜಿ ಹೆರಾಯಿನ್​​ನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ​​ವಶಪಡಿಸಿಕೊಂಡಿದ್ದಾರೆ. ಬಿಎಸ್‌ಎಫ್ ಸಿಬ್ಬಂದಿ ಡ್ರೋನ್​ ಮೇಲೆ ಗುಂಡು ಹಾರಿಸಿದಾಗ ಡ್ರೋನ್​​ನಲ್ಲಿದ್ದ ಸರಕು ಕೆಳಗೆ ಬಿದ್ದಿದೆ.

ಬಿಎಸ್‌ಎಫ್ ಸಿಬ್ಬಂದಿಗೆ ಸುಮಾರು 3.12 ಮುಂಜಾನೆ ವೇಳೆ ಧನೋ ಕಲಾನ್ ಬಳಿ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸುವ ಶಂಕಿತ ಡ್ರೋನ್​​ನ ಶಬ್ದ ಕೇಳಿಸಿತು. ತಕ್ಷಣವೇ ಸಿಬ್ಬಂದಿಗಳು ಗುಂಡು ಹಾರಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಈ ಡ್ರೋನ್​ನಲ್ಲಿದ್ದ ವಸ್ತುಗಳು ನಿರ್ಜನ ಪ್ರದೇಶದಲ್ಲಿ ಹೊಡೆದುರುಳಿಸಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: 2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್

ತಾವು ಇರುವ ಸ್ಥಳದಿಂದ 3.055 ಕೆಜಿ ತೂಕದ ಮೂರು ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೊದಲು ಪಾಕಿಸ್ತಾನದಿಂದ ಬಂದೂಕುಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್​​ನ್ನು ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಬಿಎಸ್‌ಎಫ್ ಹೊಡೆದುರುಳಿಸಿದ ನಂತರ ಮತ್ತೊಂದು ಘಟನೆ ನಡೆದಿದೆ.

Published On - 12:51 pm, Sat, 11 March 23

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್