AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್

ಕಳೆದ ಎರಡು ವಾರಗಳಲ್ಲಿ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದು, ಭಾರತಕ್ಕೆ ಹಾರುತ್ತಿದ್ದ ಕನಿಷ್ಠ 22 ಡ್ರೋನ್‌ಗಳನ್ನು ಕಳೆದ ವರ್ಷ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.

2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Mar 01, 2023 | 3:58 PM

Share

ಕಳೆದ ಡಿಸೆಂಬರ್‌ನಲ್ಲಿ ಪಂಜಾಬ್‌ನ (Punjab) ಅಮೃತಸರದಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ ಡ್ರೋನ್‌ನ (Drone) ಫೊರೆನ್ಸಿಕ್ ವಿಶ್ಲೇಷಣೆ ಪ್ರಕಾರ ಇಂಡೋ-ಪಾಕ್ ಗಡಿಯಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬಳಸುವ ಮೊದಲು ಅದನ್ನು ಚೀನಾದ ಕೆಲವು ಭಾಗಗಳಲ್ಲಿ ಮತ್ತು ನಂತರ ಪಾಕಿಸ್ತಾನಕ್ಕೆ (Pakistan) ಹಾರಿಸಲಾಗಿತ್ತು ಎಂದು ತೋರಿಸಿರುವುದಾಗಿ ವಿಷಯದ ಬಗ್ಗೆ ಅರಿವಿರುವ ಅಧಿಕಾರಿಗಳು ಹೇಳಿದ್ದಾರೆ.

ಡ್ರೋನ್‌ನ ಫೋರೆನ್ಸಿಕ್ ವಿಶ್ಲೇಷಣೆ ಹೇಳುವುದೇನೆಂದರೆ ಜುಲೈ 11, 2022 ರಂದು ಚೀನಾದ ಶಾಂಘೈನ ಫೆಂಗ್ ಕ್ಸಿಯಾನ್ ಜಿಲ್ಲೆಯಲ್ಲಿ ಅದನ್ನು ಹಾರಿಸಲಾಯಿತು ನಂತರ ಸೆಪ್ಟೆಂಬರ್ 24 ಮತ್ತು ಡಿಸೆಂಬರ್ 25, 2022 ರ ನಡುವೆ (ಅದನ್ನು ಹೊಡೆದುರುಳಿಸಿದ ದಿನ), ಇದನ್ನು ಪಾಕಿಸ್ತಾನದ ಖನೇವಾಲ್‌ನಲ್ಲಿ 28 ಬಾರಿ ಹಾರಿಸಲಾಯಿತು ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಯೊಬ್ಬರು ಹೇಳಿದರು.

ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್‌ಗಳು ಮತ್ತು ಕ್ವಾಡ್‌ಕಾಪ್ಟರ್‌ಗಳನ್ನು ಬಳಸುವ ಪಾಕಿಸ್ತಾನದ ಕಾರ್ಯ 2019 ರಿಂದ ಹೆಚ್ಚಾಗಿದೆ. ಭದ್ರತಾ ಸಿಬ್ಬಂದಿ ಸಾಮಾನ್ಯವಾಗಿ ಡ್ರೋನ್‌ಗಳಿಗೆ ಹೆರಾಯಿನ್ ಪ್ಯಾಕೆಟ್‌ಗಳನ್ನು ಲಗತ್ತಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಅವರು ಡ್ರೋನ್‌ಗಳಿಗೆ ಕಟ್ಟಲಾದ ಚೀನಾದ ಪಿಸ್ತೂಲ್‌ಗಳನ್ನು ಸಹ ಕಂಡುಕೊಂಡಿದ್ದಾರೆ. ಇದು ಭಾರತ-ಪಾಕ್ ಗಡಿಗೆ ಸೀಮಿತವಾದ ಸಮಸ್ಯೆಯಾಗಿದ್ದರೂ, ರಾಜಸ್ಥಾನದ ಗಡಿಯ ಬಳಿಯೂ ಭದ್ರತಾ ಸಿಬ್ಬಂದಿ ಡ್ರಗ್ಸ್ ಹೊಂದಿರುವ ಡ್ರೋನ್‌ಗಳನ್ನು ಗುರುತಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:Delhi cabinet: ದೆಹಲಿ ಸರ್ಕಾರದಲ್ಲಿ ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಸಚಿವ ಸ್ಥಾನ

ಕಳೆದ ಎರಡು ವಾರಗಳಲ್ಲಿ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದು, ಭಾರತಕ್ಕೆ ಹಾರುತ್ತಿದ್ದ ಕನಿಷ್ಠ 22 ಡ್ರೋನ್‌ಗಳನ್ನು ಕಳೆದ ವರ್ಷ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಮೇ 2019 ರಲ್ಲಿ, ಡ್ರಗ್ ಕ್ಯಾರಿಯರ್ ಸಾಧನವಾಗಿ ಡ್ರೋನ್ ಅನ್ನು ಬಳಸುತ್ತಿರುವ ಮೊದಲ ಪ್ರಕರಣವನ್ನು ಬಿಎಸ್ಎಫ್ ಗುರುತಿಸಿದೆ, ಅದು ಈಗ ಮತ್ತಷ್ಟು ಹೆಚ್ಚಾಗಿದೆ. ಈ ವರ್ಷ ಪುನರಾವರ್ತಿತ ಈ ಘಟನೆಗಳು ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲು ಬಿಎಸ್ಎಫ್ ಸಿಬ್ಬಂದಿಯನ್ನು ಪ್ರೇರೇಪಿಸಿದೆ.

ಇತ್ತೀಚಿನ ಪ್ರಕರಣದ ವಿವರಗಳನ್ನು ಹಂಚಿಕೊಂಡ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಕ್ತಾರರು, ಕಳೆದ ವರ್ಷ ಡಿಸೆಂಬರ್ 25 ರಂದು ಅಮೃತಸರದ ರಜತಾಲ್‌ನಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಡ್ರೋನ್ ಅನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ