ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಮಹಿಳೆ
ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಮಹಿಳೆ ಬೆಂಗಳೂರು ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಯಾರಿಗೂ ಅನುಮಾನ ಬಾರದಂತೆ ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ವಿದೇಶದಿಂದ ಡ್ರಗ್ಸ್ ಸಾಗಿಸುತ್ತಿದ್ದಳು. ಇದೀಗ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ಆಕೆಯಿಂದ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 13): ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ (Drugs) ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ(Bengaluru Airport )ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕ್ಯಾಪ್ಸೂಲ್ ಮಾತ್ರೆ ರೂಪದಲ್ಲಿ ವಿದೇಶದಿಂದ ಡ್ರಗ್ ಸಾಗಿಸುತ್ತಿದ್ದ ಕೀನ್ಯಾ ಮೂಲದ ಮಹಿಳೆಯನ್ನು (Kinya Woman) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಬಳಿಕ NCB ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇನ್ನು ಮಹಿಳೆ ಬಳಿ ಇದ್ದ ಬರೋಬ್ಬರಿ 1 ಕೆಜಿ 144 ಗ್ರಾಂ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಅಥಿಸ್ ಅಬಬಾದಿಂದ ಬೆಂಗಳೂರಿಗೆ ಎಥಿಫಿಯನ್ ಏರ್ಲೈನ್ಸ್ನಲ್ಲಿ ಬಂದ ಮಹಿಳೆಯನ್ನು ತಡೆದು ಪರಿಶೀಲಿಸಿದಾಗ ಕ್ಯಾಪ್ಸೂಲ್ ಮಾತ್ರೆ ಪತ್ತೆಯಾಗಿದೆ. ಗುಪ್ತಾಂಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದಳು. ಬಳಿಕ ಎಲ್ಲಾ ಕ್ಯಾಪ್ಸೂಲ್ಸ್ ಹೊರತೆಗೆದು ಪರಿಶೀಲಿಸಿದಾಗ ಒಂದು ಕೆಜಿಗೂ ಅಧಿಕ ಡ್ರಗ್ಸ್ ಸಿಕ್ಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ