ಪ್ರೀತಿಗಾಗಿ ಬಾಗೇಪಲ್ಲಿ ಯುವತಿಯ ಬೆನ್ನು ಬಿದ್ದಿದ್ದ, ನಿರಾಕರಿಸಿದಾಗ ಚಾಕುವಿನಿಂದ ಕುತ್ತಿಗೆಗೆ ಇರಿದ, ರಕ್ಷಣೆಗೆ ಮುಂದಾದವರ ಮೇಲೆಯೂ ಹುಚ್ಚಾಟ ಮೆರೆದ

ಪಾಗಲ್ ಪ್ರೇಮಿ ಯುವತಿಯ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಿದ್ದಂತೆ ಕಿರುಚಾಡಿದ್ದಾಳೆ. ರಸ್ತೆಯಲ್ಲಿ ಯುವತಿಯನ್ನ ಕೆಡವಿ ಮೂರ್ನಾಲ್ಕು ಬಾರಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಅಷ್ಟೊತ್ತಿಗೆ ಅಲ್ಲಿಯೇ ಇದ್ದ ಹೊಟೇಲ್ ಮಾಲೀಕ ನವೀನ್ ಹಾಗೂ ಅತ್ತಿಬೆಲೆ ಪೋಲೀಸ್ ಸಿಬ್ಬಂದಿ ಬೀರಪ್ಪ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಪಾಗಲ್ ಪ್ರೇಮಿ ಶ್ರೀನಿವಾಸ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಪ್ರೀತಿಗಾಗಿ ಬಾಗೇಪಲ್ಲಿ ಯುವತಿಯ ಬೆನ್ನು ಬಿದ್ದಿದ್ದ, ನಿರಾಕರಿಸಿದಾಗ ಚಾಕುವಿನಿಂದ ಕುತ್ತಿಗೆಗೆ ಇರಿದ, ರಕ್ಷಣೆಗೆ ಮುಂದಾದವರ ಮೇಲೆಯೂ ಹುಚ್ಚಾಟ ಮೆರೆದ
ಪ್ರೀತಿಗಾಗಿ ಬಾಗೇಪಲ್ಲಿ ಯುವತಿಯ ಬೆನ್ನು ಬಿದ್ದಿದ್ದ, ನಿರಾಕರಿಸಿದಾಗ ಯುವತಿಯ ಕುತ್ತಿಗೆಗೆ ಚಾಕುವಿನಿಂದ ಇರಿದ
Follow us
ರಾಮು, ಆನೇಕಲ್​
| Updated By: ಸಾಧು ಶ್ರೀನಾಥ್​

Updated on: Sep 13, 2023 | 9:40 PM

ಅವನೊಬ್ಬ ಪಾಗಲ್ ಪ್ರೇಮಿ, ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದ ಬೇತಾಳನಂತೆ ಹುಡುಗಿಯ ಹಿಂದೆ ಬಿದ್ದಿದ್ದ. ಪ್ರೀತಿಯನ್ನ ನಿರಾಕರಣೆ ಮಾಡುತ್ತಿದ್ದಂತೆ ಪಾಗಲ್ ಪ್ರೇಮಿ ನಡುರಸ್ತೆಯಲ್ಲಿ ಅಟ್ಟಹಾಸ ತೋರಿದ್ದಾನೆ. ನಡೆದು ಹೋಗುತ್ತಿದ್ದ ಯುವತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯನ್ನ ರಕ್ಷಣೆಗೆ ಮಾಡಲು ಮುಂದಾದವರ ಮೇಲೆಯೂ ಪಾಗಲ್ ಪ್ರೇಮಿ ಚಾಕು ಹಾಕಿ ಹುಚ್ಚಾಟ ನಡೆಸಿದ್ದಾನೆ.. ಅಷ್ಟಕ್ಕೂ ಈ ಘಟನೆ ನಡೆದಿದಾದ್ರು ಎಲ್ಲಿ ಅಂತೀರಾ ನೋಡಿ ಈ ಕಂಪ್ಲೀಟ್ ರಿಪೋರ್ಟ್ ನಲ್ಲಿ.. ಆಸ್ಪತ್ರೆ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡಿಯುತ್ತಿರೋ ಯುವತಿ.. ಈಕೆ ಅತ್ತಿಬೆಲೆ ಬಸ್ ನಿಲ್ದಾಣದ ಬಳಿ ನಡೆದು ಹೋಗುವಾಗ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಕುತ್ತಿಗೆಗೆ ಇರಿದು ತಾನು ಆತ್ಮಹತ್ಯೆಗೆ ಮಾಡಿಕೊಳ್ಳಲು ಯತ್ನ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ..

ಹೌದು ಬಾಗೇಪಲ್ಲಿ ಮೂಲದ ಯುವತಿಯ ಹಿಂದೆ, ಅದೇ ಗ್ರಾಮದ ಶ್ರೀನಿವಾಸ್ ಎಂಬ ಪಾಗಲ್ ಪ್ರೇಮಿ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ. ಯುವತಿ ಕೆಲಸ ಮಾಡೋ ಜಾಗ, ಯುವತಿ ಇದ್ದ ರೂಮ್ನ ಬಳಿಯೂ ಹೋಗಿ ಗಲಾಟೆ ಮಾಡಿದ್ದ. ಇದರಿಂದ ಬೇಸತ್ತ ಯುವತಿ ಅತ್ತಿಬೆಲೆ ಪೊಲೀಸರಿಗೆ ದೂರು ನೀಡೋದಾಗಿ ಹೇಳಿ ಪೋಲೀಸ್ ಠಾಣೆಯ ಕಡೆಗೆ ನಡೆದು ಹೊರಟಿದ್ಲು. ಯುವತಿಯನ್ನ ಹಿಂಬಾಲಿಸಿ ಬಂದ ಪಾಗಲ್ ಪ್ರೇಮಿ ಶ್ರೀನಿವಾಸ ಅತ್ತಿಬೆಲೆ ಸರ್ಕಲ್ ನಲ್ಲಿ 40 ರೂಪಾಯಿ ಹಣ ನೀಡಿ ಹೊಸ ಚಾಕುವೊಂದನ್ನ ಖರೀದಿ ಮಾಡಿದ್ದಾನೆ. ಪೊಲೀಸ್ ಠಾಣೆ ಸಮೀಪವೇ ಯುವತಿಯನ್ನ ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಇನ್ನು ಪಾಗಲ್ ಪ್ರೇಮಿಯ ಹುಚ್ಚಾಟ ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.

ಪಾಗಲ್ ಪ್ರೇಮಿ ಯುವತಿಯ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಿದ್ದಂತೆ ಕಿರುಚಾಡಿದ್ದಾಳೆ. ರಸ್ತೆಯಲ್ಲಿ ಯುವತಿಯನ್ನ ಕೆಡವಿ ಮೂರ್ನಾಲ್ಕು ಬಾರಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಅಷ್ಟೊತ್ತಿಗೆ ಅಲ್ಲಿಯೇ ಇದ್ದ ಹೊಟೇಲ್ ಮಾಲೀಕ ನವೀನ್ ಹಾಗೂ ಅತ್ತಿಬೆಲೆ ಪೋಲೀಸ್ ಸಿಬ್ಬಂದಿ ಬೀರಪ್ಪ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಪಾಗಲ್ ಪ್ರೇಮಿ ಶ್ರೀನಿವಾಸ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಹೊಟೇಲ್ ಮಾಲೀಕ ನವೀನ್ ಪಾಗಲ್ ಶ್ರೀನಿವಾಸ್ನ ಕೈನಲ್ಲಿದ್ದ ಚಾಕುವನ್ನ ಕಸಿದು ರಸ್ತೆಗೆ ಕೆಡವಿಕೊಂಡಿದ್ದರು.

Also Read: ಆ ಸಭ್ಯಸ್ಥ ಯುವಕನನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ, ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿ ಹತ್ಯೆಗೈದರು: ಕಾರಣವೇನು? 

ಅಷ್ಟರಲ್ಲಿ ಸ್ಥಳಕ್ಕೆ ಬಂದ ಅತ್ತಿಬೆಲೆ ಪೊಲೀಸರು ಆರೋಪಿ ಶ್ರೀನಿವಾಸನನ್ನು ವಶಕ್ಕೆ ಪಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಆಕ್ಸ್ಫಾರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತ ಹೊಟೇಲ್ ಮಾಲೀಕ ನವೀನ್ ತನ್ನ ಪ್ರಾಣವನ್ನು ಲೆಕ್ಕಿಸದೆ ಯುವತಿಯನ್ನ ರಕ್ಷಣೆ ಮಾಡಿದ್ದು, ಆತನ ಕೈಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಪಾಗಲ್ ಪ್ರೇಮಿ ಶ್ರೀನಿವಾಸ್ ಬಾಗೇಪಲ್ಲಿಯಲ್ಲಿ ಯುವತಿಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನಂತೆ. ಇನ್ನೂ ಇವನ ಕಾಟ ತಾಳಲಾರದೆ ಬಾಗೇಪಲ್ಲಿಯಿಂದ ಯುವತಿ ಅತ್ತಿಬೆಲೆಗೆ ಬಂದು ಖಾಸಗಿ ಹೋಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದ್ರೆ ಯುವತಿಯ ವಿಳಾಸ ಪತ್ತೆ ಹಚ್ಚಿದ್ದ ಶ್ರೀನಿವಾಸ ಎರಡು ದಿನಗಳ ಹಿಂದೆ ಬಾಗೇಪಲ್ಲಿಯಿಂದ ಅತ್ತಿಬೆಲೆಗೆ ಯುವತಿಯನ್ನ ಹುಡುಕಿಕೊಂಡು ಬಂದಿದ್ದ. ಯುವತಿ ಕೆಲಸ ಮಾಡುತ್ತಿದ್ದ ಹೋಟೇಲ್ ಹಾಗೂ ರೂಮ್ ಬಳಿ ಹೋಗಿ ಯುವತಿಗೆ ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಯುವತಿ ಪ್ರೀತಿಗೆ ನಿರಾಕರಣೆ ಮಾಡಿದ್ದಕ್ಕಾಗಿಯೇ ಚಾಕು ಇರಿದು ದುಷ್ಕೃತ್ಯ ಮೆರದಿದ್ದಾನೆ.

ಒಟ್ಟಿನಲ್ಲಿ ಯುವತಿಯ ಹಿಂದೆ ಬಿದ್ದ ಪಾಗಲ್ ಪ್ರೇಮಿ ಪ್ರೀತಿ ನಿರಾಕರಣೆ ಮಾಡುತ್ತಿದ್ದಂತೆ ಚಾಕು ಇರಿದಿದ್ದು, ಯುವತಿ ಸಾವು ಬದುಕಿನ ನಡುವೇ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ರೆ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ ಪೋಲೀಸರ ಅತಿಥಿಯಾಗಿದ್ದು, ಪೋಲೀಸರ ಸಂಪೂರ್ಣ ತನಿಖೆಯ ಬಳಿಕ ಘಟನೆಗೆ ನಿಖರ ಮಾಹಿತಿ ಏನು ಎಂಬುದು ತಿಳಿದು ಬರಬೇಕಿದೆ.

ಆನೇಕಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ