ಮಹಿಳಾ ಮೀಸಲಾತಿ ಮಸೂದೆ ಚರ್ಚೆ: ಸೋನಿಯಾ ಗಾಂಧಿ, ಕನಿಮೊಳಿ, ಸುಪ್ರಿಯಾ ಸುಳೆ ಪ್ರಶ್ನೆಗೆ ಸ್ಮೃತಿ ಇರಾನಿ ಪ್ರತ್ಯುತ್ತರ

ನಾರಿ ಶಕ್ತಿ ವಂದನ್ ಅಧಿನಿಯಮ್‌ಗೆ ಬೆಂಬಲವಾಗಿ ನಾನು ಇಲ್ಲಿ ನಿಂತಿದ್ದೇನೆ. ಹೊಗೆಯಿಂದ ತುಂಬಿದ ಅಡುಗೆಮನೆಯಿಂದ ಫ್ಲಡ್-ಲೈಟ್ ಸ್ಟೇಡಿಯಂಗಳವರೆಗೆ, ಭಾರತೀಯ ಮಹಿಳೆಯ ಪ್ರಯಾಣವು ಸುದೀರ್ಘವಾಗಿದೆ ಸೋನಿಯಾ ಗಾಂಧಿ ತಮ್ಮ ಭಾಷಣ ಆರಂಭಿಸಿದ್ದಾರೆ.  ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮಂಡಿಸಿದ ಮಸೂದೆಯ 2010 ರ ಆವೃತ್ತಿಯನ್ನು ಪ್ರತಿಪಕ್ಷಗಳು ಸೂಚಿಸಿವೆ

ಮಹಿಳಾ ಮೀಸಲಾತಿ ಮಸೂದೆ ಚರ್ಚೆ: ಸೋನಿಯಾ ಗಾಂಧಿ, ಕನಿಮೊಳಿ, ಸುಪ್ರಿಯಾ ಸುಳೆ ಪ್ರಶ್ನೆಗೆ ಸ್ಮೃತಿ ಇರಾನಿ ಪ್ರತ್ಯುತ್ತರ
ಸ್ಮೃತಿ ಇರಾನಿ- ಸೋನಿಯಾ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 20, 2023 | 8:49 PM

ದೆಹಲಿ ಸೆಪ್ಟೆಂಬರ್ 20: ಮಹಿಳಾ ಮೀಸಲಾತಿ ಮಸೂದೆಯ (Women’s reservation bill )ಬಿಸಿಬಿಸಿ ಚರ್ಚೆಯ ವೇಳೆ ನೂತನ ಸಂಸತ್ ಬುಧವಾರ ಮಹಿಳಾ ಸಂಸದರ ಸ್ಫೋಟಕ ಭಾಷಣಗಳಿಂದ ಪ್ರತಿಧ್ವನಿಸಿತು. ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi), ಡಿಎಂಕೆ ಸಂಸದೆ ಕನಿಮೋಳಿ (Kanimozhi) ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ (Supriya Sule )ಅವರು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಮಹಿಳೆಯರನ್ನು ಗೌರವಿಸುವಲ್ಲಿ ವಿಫಲವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಹಿಳೆಯರನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಉತ್ತರಿಸಿದ್ದಾರೆ.

ಸೋನಿಯಾ ಗಾಂಧಿ ಹೇಳಿದ್ದೇನು?

ನಾರಿ ಶಕ್ತಿ ವಂದನ್ ಅಧಿನಿಯಮ್‌ಗೆ ಬೆಂಬಲವಾಗಿ ನಾನು ಇಲ್ಲಿ ನಿಂತಿದ್ದೇನೆ. ಹೊಗೆಯಿಂದ ತುಂಬಿದ ಅಡುಗೆಮನೆಯಿಂದ ಫ್ಲಡ್-ಲೈಟ್ ಸ್ಟೇಡಿಯಂಗಳವರೆಗೆ, ಭಾರತೀಯ ಮಹಿಳೆಯ ಪ್ರಯಾಣವು ಸುದೀರ್ಘವಾಗಿದೆ ಸೋನಿಯಾ ಗಾಂಧಿ ತಮ್ಮ ಭಾಷಣ ಆರಂಭಿಸಿದ್ದಾರೆ.  ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮಂಡಿಸಿದ ಮಸೂದೆಯ 2010 ರ ಆವೃತ್ತಿಯನ್ನು ಪ್ರತಿಪಕ್ಷಗಳು ಸೂಚಿಸಿವೆ. ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳದ ಪ್ರತಿಭಟನೆಯ ನಡುವೆ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು ಆದರೆ ಲೋಕಸಭೆಗೆ ಬರಲಿಲ್ಲ.

ಸೋನಿಯಾ ಗಾಂಧಿ ಅವರು ಮಸೂದೆಗೆ ತಮ್ಮ ಪಕ್ಷದ ಬೆಂಬಲವನ್ನು ಒತ್ತಿಹೇಳಿದರು. ಆದರೆ ಅದರ ಅನುಷ್ಠಾನವು ಡಿಲಿಮಿಟೇಶನ್ ಮತ್ತು ಜನಗಣತಿಯ ಮೇಲೆ ಅವಲಂಬಿತವಾಗಿದೆ, ಅಂದರೆ 2029 ರ ಚುನಾವಣೆಯ ಮೊದಲು ಯಾವುದೇ ಪರಿಣಾಮ ಬೀರುವುದಿಲ್ಲ. ಮಹಿಳೆಯರು ಎಷ್ಟು ವರ್ಷ ಕಾಯಬೇಕು … ಎರಡು … ನಾಲ್ಕು … ಎಂಟು? ಇದು ಸರಿಯೇ? ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಮಹಿಳೆಯರಿಗೆ ಮೀಸಲಾತಿಗಾಗಿ ಅವರು ಕರೆ ನೀಡಿದರು. ಇದನ್ನು ವಿಳಂಬ ಮಾಡಿದರೆ ಮಹಿಳೆಯರಿಗೆ ಘೋರ ಅನ್ಯಾಯವಾಗುತ್ತದೆ.

ಕನಿಮೊಳಿ ಹೇಳಿದ್ದೇನು?

ಡಿಎಂಕೆಯ ಕನಿಮೊಳಿ ಅವರು, ಸರ್ಕಾರ (ಮತ್ತು ಸಮಾಜ) ಮಹಿಳೆಯರಿಗೆ ವಂದನೆ ಮಾಡುವುದನ್ನು… ಪೂಜಿಸುವುದನ್ನು ನಿಲ್ಲಿಸಿ ಮತ್ತು ಅವರಿಗೆ “ಸಮಾನವಾಗಿ ನಡೆಯಲು” ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ನಾವು ತಾಯಿ, ಸಹೋದರಿ ಅಥವಾ ಹೆಂಡತಿ ಎಂದು ಕರೆಯಲು ಬಯಸುವುದಿಲ್ಲ, ನಾವು ಸಮಾನವಾಗಿ ಗೌರವಿಸಬೇಕೆಂದು ಬಯಸುತ್ತೇವೆ ಎಂದು ಅವರು ಹೇಳಿದರು.

ಕನಿಮೊಳಿ ಅವರು ಎಲ್ಲಾ ಸಂಬಂಧಿತ ಮಧ್ಯಸ್ಥಗಾರರನ್ನು ಸಮಾಲೋಚಿಸಿದ್ದೀರಾ ಎಂದು ಸರ್ಕಾರವನ್ನು ಕೇಳಿದ್ದು, ಇಲ್ಲವಾದಲ್ಲಿ ಅದನ್ನು ಮಾಡಿ ಎಂದು ಹೇಳಿದ್ದಾರೆ. ಯಾವ ಒಮ್ಮತವನ್ನು ನಿರ್ಮಿಸಲಾಗಿದೆ. ಯಾವ ಚರ್ಚೆಗಳು ನಡೆದಿವೆ ಎಂದು ತಿಳಿಯಲು ನಾನು ಬಯಸುತ್ತೇನೆ. ಈ ಮಸೂದೆಯನ್ನು ರಹಸ್ಯವಾಗಿಡಲಾಗಿದೆ. ನಮಗೆ ಹಕ್ಕಿದೆ. ಈ ದೇಶ ನಮ್ಮದು. ಸಂಸತ್ತು ನಮಗೆ ಸೇರಿದ್ದು ಎಂದು ಕನಿಮೊಳಿ ಗುಡುಗಿದ್ದಾರೆ.

ಇದನ್ನೂ ಓದಿ: Women’s Reservation Bill: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ

ಸುಪ್ರಿಯಾ ಸುಳೆ ಹೇಳಿದ್ದೇನು?

ಇಂಡಿಯಾ ಮೈತ್ರಿಕೂಟದ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಗೇಲಿಗೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿದ್ದಾರೆ. ಸುಪ್ರಿಯಾ ಸುಳೆ… ಘರ್ ಜಾವೋ, ಖಾನಾ ಬನಾವೋ. ದೇಶ್ ಕೋಯಿ ಔರ್ ಚಲಾ ಲೇಗಾ (ಸುಪ್ರಿಯಾ ಸುಳೆ… ಮನೆಗೆ ಹೋಗಿ, ಬೇರೊಬ್ಬರು ದೇಶವನ್ನು ನಡೆಸುತ್ತಾರೆ). ಇದು ಬಿಜೆಪಿಯ ಮನಸ್ಥಿತಿ ಎಂದು ಸುಳೆ ಹೇಳಿದ್ದಾರೆ.

ಯುಪಿಎ ಸರ್ಕಾರವು 2010 ರಲ್ಲಿ ಮಸೂದೆಯನ್ನು ಮಂಡಿಸಿದ್ದಕ್ಕಾಗಿ ಸೋನಿಯಾ ಗಾಂಧಿ (ಮಾಜಿ ಕಾಂಗ್ರೆಸ್ ಮುಖ್ಯಸ್ಥರನ್ನು ಹೆಸರಿಸದೆ) ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು. ಯಶಸ್ಸಿಗೆ ಅನೇಕ ಅಪ್ಪಂದಿರು ಮತ್ತು ವೈಫಲ್ಯ ಯಾರೂ ಇಲ್ಲ ಎಂದು ಹೇಳುತ್ತಾರೆ. ಆದ್ದರಿಂದ, ಮಸೂದೆ ಬಂದಾಗ, ಕೆಲವರು ಅದನ್ನು ‘ನಮ್ಮ ಮಸೂದೆ’ ಎಂದು ಕರೆದರು ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಮಂಗಳವಾರ ಸೋನಿಯಾ ಗಾಂಧಿ ಅವರು ಮಹಿಳಾ ಮಸೂದೆ “ಅಪ್ನಾ (ನಮ್ಮದು)” ಎಂದು ಹೇಳಿದ್ದಾರೆ.

2024 ರ ಚುನಾವಣೆಗೆ ಮುಂಚಿತವಾಗಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬರಲಿದೆ ಎಂದು ಪ್ರತಿಪಕ್ಷಗಳ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಇರಾನಿ ಅವರು (ಪ್ರತಿಪಕ್ಷಗಳು) “ನೀವು ಸಂವಿಧಾನವನ್ನು ಉಲ್ಲಂಘಿಸಲು ಬಯಸುತ್ತೀರಾ?” “ಧರ್ಮ ಆಧಾರಿತ ಕೋಟಾ” ಕೇಳುವ ಮೂಲಕ “ದೇಶವನ್ನು ದಾರಿತಪ್ಪಿಸಲು” ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ