Women’s Reservation Bill: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ

ಮತದಾನ ಮೂಲಕ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲಾಗಿದೆ. ಮಹಿಳಾ ಮೀಸಲಾತಿ ವಿಧೇಯಕ ಪರ 454 ಸಂಸದರು ಮತದಾನ ಮಾಡಿದ್ದು, ವಿಧೇಯಕದ ವಿರುದ್ಧ ಇಬ್ಬರು ಸಂಸದರಿಂದ ಮತ ಚಲಾಯಿಸಿದ್ದಾರೆ. ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆ ನಂತರ ಸ್ಪೀಕರ್ ಓಂಬಿರ್ಲಾ ಮತದಾನ ಮಾಡುವಂತೆ ಸಂಸದರಲ್ಲಿ ಮನವಿ ಮಾಡಿದ್ದಾರೆ.

Women's Reservation Bill: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ
ಸಾಂದರ್ಭಿಕ ಚಿತ್ರ
Follow us
|

Updated on:Sep 20, 2023 | 8:18 PM

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು(Women’s Reservation Bill) ಲೋಕಸಭೆ (Lok sabha) ಅಂಗೀಕರಿಸಿದೆ. ಮತದಾನ ಮೂಲಕ ಐತಿಹಾಸಿಕ ಮಸೂದೆ ನಾರಿ ಶಕ್ತಿ  ವಂದನಾ ಅಧಿನಿಯಮ ಅಂಗೀಕಾರದೊಂಡಿದೆ. ಮಹಿಳಾ ಮೀಸಲಾತಿ ವಿಧೇಯಕ ಪರ 454 ಸಂಸದರು ಮತದಾನ ಮಾಡಿದ್ದು,ವಿಧೇಯಕದ ವಿರುದ್ಧ ಇಬ್ಬರು ಸಂಸದರಿಂದ ಮತ ಚಲಾಯಿಸಿದ್ದಾರೆ. ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆ ನಂತರ ಸ್ಪೀಕರ್ ಓಂಬಿರ್ಲಾ ಮತದಾನ ಮಾಡುವಂತೆ ಸಂಸದರಲ್ಲಿ ಮನವಿ ಮಾಡಿದ್ದಾರೆ. ಆನಂತರ ಮತ ಪತ್ರಗಳ ಮೂಲಕ ಸಂಸದರು ಮತ ಚಲಾಯಿಸಿದ್ದಾರೆ.ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲ ಅಗತ್ಯವಿತ್ತು.

ಮಹಿಳಾ ಮೀಸಲಾತಿ ಮಸೂದೆಯ ಮತದಾನಕ್ಕೆ  ಮುನ್ನ ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಆಗಮಿಸಿದ್ದರು.

ಮಸೂದೆ ಬಗ್ಗೆ ಅಮಿತ್ ಶಾ ಹೇಳಿದ್ದೇನು?

ಮಹಿಳಾ ಮೀಸಲಾತಿ ಮಸೂದೆಯನ್ನು ತರಲು ಇದು ಐದನೇ ಪ್ರಯತ್ನವಾಗಿದೆ. ದೇವೇಗೌಡರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ನಾಲ್ಕು ಬಾರಿ ಈ ಮಸೂದೆ ತರಲು ಪ್ರಯತ್ನಿಸಲಾಗಿತ್ತು. ಈ ಮಸೂದೆ ಅಂಗೀಕಾರವಾಗದಿರಲು ಕಾರಣವೇನು ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ. ಪ್ರಸ್ತುತ ಸಾಮಾನ್ಯ, SC, ST 3 ವರ್ಗಗಳಲ್ಲಿ ಚುನಾಯಿತರಾಗಿರುವ ಸಂಸದರು,  ಪ್ರತಿಯೊಂದರಲ್ಲೂ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಟ್ಟಿದ್ದೇವೆ. ಸಮಸ್ಯೆಯೆಂದರೆ ಅವರ ಬೇರುಗಳು ಭಾರತದಲ್ಲಿಲ್ಲ, ಅವರು ಎಲ್ಲಿದ್ದಾರೆ ಎಂದು ನಾನು ಹೇಳಲು ಬಯಸುವುದಿಲ್: ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು.

ಮಹಿಳಾ ಮೀಸಲಾತಿ ಮಸೂದೆ ಗೌರವದ ಸಂಕೇತ ಮತ್ತು ಹೊಸ ಯುಗದ ಆರಂಭ. ಮಹಿಳಾ ಮೀಸಲಾತಿ ಮಸೂದೆಯು ದೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಹಿಳಾ ಭದ್ರತೆ, ಗೌರವ, ಸಮಾನ ಭಾಗವಹಿಸುವಿಕೆ ಸರ್ಕಾರದ ಜೀವ ಶಕ್ತಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ, G20 ನಲ್ಲಿ ಮಹಿಳಾ ನೇತೃತ್ವದ ಪ್ರಗತಿಯ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಪ್ರಸ್ತುತಪಡಿಸಿದ್ದರು ಎಂದಿದ್ದಾರೆ ಶಾ.

ಕೆಲವು ಪಕ್ಷಗಳಿಗೆ, ಮಹಿಳಾ ಸಬಲೀಕರಣವು ರಾಜಕೀಯ ಅಜೆಂಡಾ ಮತ್ತು ಚುನಾವಣೆ ಗೆಲ್ಲಲು ರಾಜಕೀಯ ಸಾಧನವಾಗಬಹುದು, ಆದರೆ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಇದು ರಾಜಕೀಯ ವಿಷಯವಲ್ಲ. ಮಹಿಳಾ ಸಬಲೀಕರಣವು ಪ್ರತಿಪಕ್ಷಗಳ ರಾಜಕೀಯ ಸಾಧನವಲ್ಲದೆ ಬೇರೇನೂ ಅಲ್ಲ ಗೃಹ ಸಚಿವ ಅಮಿತ್ ಶಾ  ಹೇಳಿದ್ದಾರೆ.

ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಹೇಳಿದ್ದೇನು?

ಸಂಸತ್​​ನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಸೂದೆಯನ್ನು ಬೆಂಬಲಿಸುವುದಾಗಿ  ಹೇಳಿದ್ದಾರೆ.  ಆದರೆ ಇತರ ಹಿಂದುಳಿದ ವರ್ಗಗಳಿಗೆ ಕೋಟಾದ ಕೊರತೆಯಿಂದಾಗಿ ಈ ಕ್ರಮವು ‘ಅಪೂರ್ಣ’ ಎಂದು ಹೇಳಿದ್ದಾರೆ,.

ಇದು (ಮಹಿಳಾ ಮೀಸಲಾತಿ ಮಸೂದೆ) ಒಂದು ದೊಡ್ಡ ಹೆಜ್ಜೆ.  ನಮ್ಮ ದೇಶದ ಮಹಿಳೆಯರಿಗೆ ಇದು ಬಹಳ ಮುಖ್ಯವಾದ ಹೆಜ್ಜೆ ಎಂದು ಎಲ್ಲರೂ ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನ ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿಯನ್ನು ಸೇರಿಸುವುದನ್ನು ನಾನು ನೋಡಲು ಬಯಸುತ್ತೇನೆ. ಅದಿಲ್ಲದೇ ಇದು ಅಪೂರ್ಣ ಎಂದು ಅವರು ಹೇಳಿದ್ದಾರೆ.

“ಭಾರತ ಸರ್ಕಾರದ 90 ಕಾರ್ಯದರ್ಶಿಗಳಿದ್ದಾರೆ 90 ಜನರಲ್ಲಿ ಎಷ್ಟು ಜನರು ಒಬಿಸಿ ಸಮುದಾಯದಿಂದ ಬಂದಿದ್ದಾರೆ? ಉತ್ತರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ನಾನು ಇದಕ್ಕೆ ಉತ್ತರಿಸಲು ಬಯಸುತ್ತೇನೆ. ಕೇವಲ ಮೂವರು ಕಾರ್ಯದರ್ಶಿಗಳು ಮಾತ್ರ ಒಬಿಸಿ ಸಮುದಾಯದವರು.

ಇದನ್ನೂ ಓದಿ: ಶೇ33 ಮಹಿಳಾ ಮೀಸಲಾತಿಗೆ ನಿರ್ಣಯ ಅಂಗೀಕರಿಸಿದ ಮೊದಲ ಪಕ್ಷ ಬಿಜೆಪಿ: ಮೇಘವಾಲ್

ಮಸೂದೆಯನ್ನು ಬೆಂಬಲಿಸಿದ ರಾಹುಲ್ ಗಾಂಧಿ ಅವರು ಜಾತಿ ಗಣತಿಗಾಗಿ ಪಕ್ಷದ ಬೇಡಿಕೆಯನ್ನು ಪ್ರಸ್ತಾಪಿಸಿದರು ಮತ್ತು ದಲಿತರು, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಅದರ ಮೂಲಕ ಮಾತ್ರ ತಿಳಿಯಬಹುದು ಎಂದು ಹೇಳಿದರು.

“ನೀವು (ಸರ್ಕಾರ) ಈ ಮಸೂದೆಯನ್ನು ಜಾರಿಗೊಳಿಸಿ, ಡಿಲಿಮಿಟೇಶನ್ ಮತ್ತು ಜನಗಣತಿಯ ಅಗತ್ಯವಿಲ್ಲ, ಮಹಿಳೆಯರಿಗೆ ಕೇವಲ 33 ಪ್ರತಿಶತ ಮೀಸಲಾತಿ ನೀಡಿ. ಪ್ರತಿಪಕ್ಷಗಳು ಜಾತಿ ಗಣತಿಯನ್ನು ಪ್ರಸ್ತಾಪಿಸಿದ ಕ್ಷಣ ಬಿಜೆಪಿ ಹೊಸ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ,

ನೂತನ ಸಂಸತ್ ಭವನದ ಕುರಿತು ಮಾತನಾಡಿದ ರಾಹುಲ್, ರಾಷ್ಟ್ರಪತಿ ಬುಡಕಟ್ಟು ಸಮುದಾಯದ ಮಹಿಳೆಯಾಗಿದ್ದು, ಹೊಸ ಸಂಸತ್ ಭವನಕ್ಕೆ ವರ್ಗಾವಣೆ ಮಾಡುವಾಗ ಅವರು ಕಾಣಿಸಬೇಕಿತ್ತು. ಇದು ಸುಂದರವಾದ ಕಟ್ಟಡವಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ರಾಷ್ಟ್ರಪತಿಯನ್ನು ನೋಡಲು ಇಷ್ಟಪಡುತ್ತಿದ್ದೆ ಎಂದು ರಾಹುಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Wed, 20 September 23