ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಚರ್ಚೆ ಇಂದು; ಸೋನಿಯಾ ಮುಂದಾಳತ್ವದಲ್ಲಿ ಕಾಂಗ್ರೆಸ್ ಸಜ್ಜು; ಕೈ ಪಾಳಯದ ವಾದವೇನಿರಬಹುದು?

Women Reservation Bill Debate: ಮಹಿಳಾ ಮೀಸಲಾತಿ ಮಸೂದೆಗೆ ತಡೆ ಬೀಳುವ ಸಾಧ್ಯತೆ ಕಡಿಮೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಮಸೂದೆಗೆ ಅನುಮೋದನೆ ಸಿಗಬಹುದು. ಆದರೆ, ಕಾಂಗ್ರೆಸ್ ಪಕ್ಷ ಈ ಮಸೂದೆಯನ್ನು ಸರ್ಕಾರದ ಎಲೆಕ್ಷನ್ ಗಿಮಿಕ್ ಎಂದು ಬಿಂಬಿಸುವ ಪ್ರಯತ್ನ ಮಾಡಬಹುದು. ಯಾಕೆಂದರೆ, ಮಸೂದೆಗೆ ಅನುಮೋದನೆ ಸಿಕ್ಕರೂ ಅದು ಜಾರಿಯಾಗಲು ಐದಾರು ವರ್ಷಗಳಾದರೂ ಬೇಕಾಗಬಹುದು.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಚರ್ಚೆ ಇಂದು; ಸೋನಿಯಾ ಮುಂದಾಳತ್ವದಲ್ಲಿ ಕಾಂಗ್ರೆಸ್ ಸಜ್ಜು; ಕೈ ಪಾಳಯದ ವಾದವೇನಿರಬಹುದು?
ಸೋನಿಯಾ ಗಾಂಧಿ
Follow us
|

Updated on: Sep 20, 2023 | 10:09 AM

ನವದೆಹಲಿ, ಸೆಪ್ಟೆಂಬರ್ 20: ಸರ್ಕಾರ ನಿನ್ನೆ ಮಂಗಳವಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ (Women Reservation Bill) ಬಗ್ಗೆ ಲೋಕಸಭೆಯಲ್ಲಿ ಇಂದು ಚರ್ಚೆ ಆಗಲಿದೆ. ಸೋನಿಯಾ ಗಾಂಧಿ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಈ ಚರ್ಚೆಗೆ ಸಜ್ಜಾಗಿದೆ. ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆಯಾಗಿ (Congress Parliamentary Party Chairperson) ಲೋಕಸಭೆಯಲ್ಲಿ ಪಕ್ಷದ ಪರವಾಗಿ ಚರ್ಚೆ ಮುನ್ನಡೆಸಲಿದ್ದಾರೆ. ಇದು 15 ವರ್ಷದ ಹಿಂದೆ ಕಾಂಗ್ರೆಸ್ ಪಕ್ಷವೇ ತಂದ ಮಸೂದೆಯಾದ್ದರಿಂದ ಮಸೂಚೆ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬ ವಿಚಾರವೇ ಹೆಚ್ಚು ಚರ್ಚಿತವಾಗಬಹುದು.

ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗಲಿದ್ದು ಮಸೂದೆ ಚರ್ಚೆ ವಿಚಾರ ಮೊದಲಿಗೆ ಶುರುವಾಗಲಿದೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಭಾರ್ತಿ ಪವಾರ್, ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್ ಮತ್ತು ದಿಯಾ ಕುಮಾರಿ ಅವರು ಚರ್ಚೆಯಲ್ಲಿ ಮಾತನಾಡಲಿದ್ದಾರೆ.

ಲೋಕಸಭೆಯಲ್ಲಿ ಸರ್ಕಾರ ಮಂಡಿಸಿರುವ ನಾರಿ ಶಕ್ತಿ ವಂದನ್ ಅಧಿನಿಯಂ (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾದಲ್ಲಿ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಬೇಕಾಗುತ್ತದೆ. ನಿನ್ನೆ ಲೋಕಸಭೆಯಲ್ಲಿ ಮಸೂದೆ ಮಂಡನೆ ವೇಳೆ ಮಾತನಾಡಿದ್ದ ನರೇಂದ್ರ ಮೋದಿ, ಈ ಮಸೂದೆ ಮಂಡಿಸಲು ದೇವರೇ ತಮ್ಮನ್ನು ಆಯ್ಕೆ ಮಾಡಿದ್ದಾನೆ ಎಂದು ಭಾವೋದ್ವೇಗಗೊಂಡಿದ್ದರು.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೂ 2029ರ ಬಳಿಕವೇ ಜಾರಿ, ಕಾರಣವೇನು?

ಕಾಂಗ್ರೆಸ್ ಅವಧಿಯಲ್ಲಿ ಮೊದಲಿಗೆ ಮಂಡನೆಯಾಗಿದ್ದ ಮಸೂದೆ

ಶಾಸಕಾಂಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಕೂಗು ಬಹಳ ಹಿಂದಿನದ್ದು. ಹದಿನೈದು ವರ್ಷಗಳ ಹಿಂದೆಯೇ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಈ ಮಸೂದೆ ಜಾರಿಗೊಳಿಸುವ ಪ್ರಯತ್ನ ಮಾಡಿತ್ತು. ರಾಜ್ಯಸಭೆಯಲ್ಲಿ 2008ರಲ್ಲಿ ಮಸೂದೆ ಮಂಡಿಸಲಾಗಿತ್ತು. 2010ರಲ್ಲಿ ಅದಕ್ಕೆ ರಾಜ್ಯಸಭೆ ಅನುಮೋದನೆ ಕೂಡ ಕೊಟ್ಟಿತ್ತು. ಆದರೆ, ಮೈತ್ರಿಕೂಟದೊಳಗೆ ಈ ಮಸೂದೆ ಬಗ್ಗೆ ಭಿನ್ನಸ್ವರ ಬಂದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಮಸೂದೆ ಮಂಡನೆ ಆಗಲೇ ಇಲ್ಲ.

ಆದರೆ, ಎನ್​ಡಿಎ ಮೈತ್ರಿಕೂಟ 2014 ಮತ್ತು 2019ರ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ವಿಚಾರವನ್ನು ತನ್ನ ಒಂದು ಟ್ರಂಪ್ ಕಾರ್ಡ್ ಆಗಿ ಮಾಡಿಕೊಂಡಿತು. ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡುವುದಾಗಿ ಬಿಜೆಪಿ ನೀಡಿದ್ದ ವಾಗ್ದಾನವನ್ನು ಈಗ ಈಡೇರಿಸಲು ಹೊರಟಿದೆ.

ಚರ್ಚೆಯಲ್ಲಿ ಕಾಂಗ್ರೆಸ್ ದೃಷ್ಟಿ ಹೇಗಿರಬಹುದು?

ಈ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆಗೆ ತಡೆ ಬೀಳುವ ಸಾಧ್ಯತೆ ಕಡಿಮೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಮಸೂದೆಗೆ ಅನುಮೋದನೆ ಸಿಗಬಹುದು. ಆದರೆ, ಕಾಂಗ್ರೆಸ್ ಪಕ್ಷ ಈ ಮಸೂದೆಯನ್ನು ಎಲೆಕ್ಷನ್ ಗಿಮಿಕ್ ಎಂದು ಬಿಂಬಿಸುವ ಪ್ರಯತ್ನ ಮಾಡಬಹುದು. ಯಾಕೆಂದರೆ, ಮಸೂದೆಗೆ ಅನುಮೋದನೆ ಸಿಕ್ಕರೂ ಅದು ಜಾರಿಯಾಗಲು ಐದಾರು ವರ್ಷಗಳಾದರೂ ಬೇಕಾಗಬಹುದು. ಸೆನ್ಸಸ್ ನಡೆಯಬೇಕು, ಕ್ಷೇತ್ರ ಮರುವಿಂಗಡಣೆ ಇತ್ಯಾದಿ ಆಗಬೇಕು. ಹೀಗಾಗಿ, ಸರ್ಕಾರ ಯಾವ ತಯಾರಿ ಇಲ್ಲದೇ ಕಾಯ್ದೆ ತರುತ್ತಿದೆ ಎಂದು ವಿಪಕ್ಷಗಳು ವಾದಿಸಬಹುದು.

ಇದನ್ನೂ ಓದಿ: ಸಂಸತ್​​​ನಲ್ಲಿ ಪ್ರಧಾನಿ ಮೋದಿ ತೆಲಂಗಾಣವನ್ನು ಅವಮಾನಿಸಿದ್ದಾರೆ: ರಾಹುಲ್ ಗಾಂಧಿ

ಹಾಗೆಯೇ, ಮಹಿಳಾ ಮೀಸಲಾತಿ ಮಸೂದೆ ರೂಪಿಸಲಾಗಿದೆಯಾದರೂ ಅದರಲ್ಲಿ ಒಬಿಸಿ ವರ್ಗದ ಮಹಿಳೆಯರಿಗೆ ಮೀಸಲಾತಿ ನಮೂದಿಸಿಲ್ಲ ಎಂಬುದೂ ವಿಪಕ್ಷಗಳು ಎತ್ತಿರುವ ಚಕಾರಗಳಲ್ಲಿ ಒಂದು.

ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ವಿಚಾರದಲ್ಲಿ ಲೋಕಸಭೆಯಲ್ಲಿ ಇಂದು ನಡೆಯುವ ಚರ್ಚೆ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ