Election Commission Ambassador: ತೆಲಂಗಾಣ ಅಸೆಂಬ್ಲಿ ಎಲೆಕ್ಷನ್​ : ಚುನಾವಣೆ ಆಯೋಗದ ರಾಯಭಾರಿಯಾಗಿ ಪದವೀಧರೆ ಮಂಗಳಮುಖಿ ಆಯ್ಕೆ – ಇದೇ ಮೊದಲು

Transgender Election Commission Ambassador: ಆದಾಗ್ಯೂ, ಸಾಮಾನ್ಯವಾಗಿ ಈ ಪ್ರಚಾರಕ್ಕಾಗಿ ಚುನಾವಣಾ ಆಯೋಗವು ಪ್ರಸಿದ್ಧ ವ್ಯಕ್ತಿಗಳು, ನಟರು, ಸೆಲೆಬ್ರಿಟಿಗಳು ಮತ್ತು ಸಮಾಜವಾದಿಗಳನ್ನು ಪ್ರಚಾರಕರಾಗಿ ನೇಮಿಸುತ್ತದೆ. ಇದೀಗ ಪ್ರಥಮ ಬಾರಿಗೆ ತೃತೀಯಲಿಂಗಿಯೊಬ್ಬರು ಚುನಾವಣಾ ಪ್ರಚಾರಕರಾಗಿ ಆಯ್ಕೆಯಾಗಿದ್ದಾರೆ. ವಾರಂಗಲ್‌ನ ಲೈಲಾ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

Election Commission Ambassador: ತೆಲಂಗಾಣ ಅಸೆಂಬ್ಲಿ ಎಲೆಕ್ಷನ್​ : ಚುನಾವಣೆ ಆಯೋಗದ ರಾಯಭಾರಿಯಾಗಿ ಪದವೀಧರೆ ಮಂಗಳಮುಖಿ ಆಯ್ಕೆ - ಇದೇ ಮೊದಲು
ಚುನಾವಣೆ ಆಯೋಗದ ರಾಯಭಾರಿಯಾಗಿ ಸ್ನಾತಕೋತ್ತರ ಪದವೀಧರೆ ಮಂಗಳಮುಖಿ ಆಯ್ಕೆ
Follow us
|

Updated on: Sep 20, 2023 | 5:29 PM

ತೆಲಂಗಾಣ ಅಸೆಂಬ್ಲಿ ಚುನಾವಣಾ ಅಖಾಡ (Telangana Assembly Polls 2023) ರಂಗೇರುತ್ತಿದೆ, ರಾಜಕೀಯ ಬಿಸಿ ಏರುತ್ತಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಶುರುವಾಗಿದೆ. ಒಂದೆಡೆ ಎಲ್ಲ ಪ್ರಮುಖ ಪಕ್ಷಗಳು ಮತದಾರ ಪ್ರಭುಗಳನ್ನು ಒಲಿಸಿಕೊಳ್ಳಲು ಚುನಾವಣಾ ರಣತಂತ್ರಗಳನ್ನು ರಚಿಸುತ್ತಿವೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಎಲ್ಲಾ ಪಕ್ಷಗಳು ತಮ್ಮ ಕಾರ್ಯತಂತ್ರಗಳನ್ನು ಚುರುಕುಗೊಳಿಸುತ್ತಿದ್ದು, ವಿಶ್ವ ಪ್ರಯತ್ನ ಪಡುತ್ತಿವೆ. ಮತ್ತೊಂದೆಡೆ ಚುನಾವಣಾಧಿಕಾರಿಗಳು (Telangana Election Commission) ಮತದಾರರ ಪಟ್ಟಿ ಹಾಗೂ ಚುನಾವಣಾ ನಿರ್ವಹಣೆಗೆ ಕಸರತ್ತು ಆರಂಭಿಸಿದ್ದಾರೆ. ಇದರ ಅಂಗವಾಗಿ ಮತದಾರರ ಪಟ್ಟಿಗೆ ವಿಶೇಷ ಗಮನ ನೀಡಲಾಗಿದೆ. ತೆಲಂಗಾಣ ಚುನಾವಣಾ ಆಯೋಗವು ಈ ಬಾರಿ ಮತದಾರರಿಗೆ ಚುನಾವಣೆಯ ಬಗ್ಗೆ ತಿಳಿವಳಿಕೆ ನೀಡಲು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಚುನಾವಣಾ ಆಯೋಗದ ಪರವಾಗಿ ಪ್ರಚಾರ ಮಾಡಲು ಆಯೋಗದ ರಾಯಭಾರಿಯಾಗಿ ತೃತೀಯಲಿಂಗಿಯೊಬ್ಬರನ್ನು ಆಯ್ಕೆ ಮಾಡಲಾಗಿದೆ (Transgender election campaigner). ರಾಜ್ಯ ಚುನಾವಣಾ ಆಯೋಗವು ಪ್ರಥಮ ಬಾರಿಗೆ ತೃತೀಯಲಿಂಗಿ ಲೈಲಾ ಅವರನ್ನು ಪ್ರಚಾರಕರನ್ನಾಗಿ (ಚುನಾವಣಾ ರಾಯಭಾರಿಯಾಗಿ -Election Ambassador) ಆಯ್ಕೆ ಮಾಡಿದೆ.

ಮತದಾರರ ನೋಂದಣಿ, ತಿದ್ದುಪಡಿ, ಸೇರ್ಪಡೆ, ಮತದಾನದ ಪ್ರಯೋಜನಗಳು ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಮಂಗಳಮುಖಿ (ಟ್ರಾನ್ಸ್ಜೆಂಡರ್) ಅನ್ನು ಪ್ರಚಾರಕರನ್ನಾಗಿ (ಚುನಾವಣಾ ಆಯೋಗದ ರಾಯಭಾರಿ) ಬಳಸಲಾಗುತ್ತದೆ. ಮತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಹಲವು ಐಕಾನ್ ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿಕಾಸ್ ರಾಜ್ ತಿಳಿಸಿದರು.

ವಾರಂಗಲ್‌ನ ಓರುಗಂಟಿ ಲೈಲಾ (Oruganti Laila) ಅವರನ್ನು ಚುನಾವಣಾ ಆಯೋಗವು ರಾಜ್ಯ ಐಕಾನ್‌ಗಳಲ್ಲಿ ಒಬ್ಬರನ್ನಾಗಿ ಘೋಷಿಸಿದೆ. ಮತದಾರರ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ಜನರೊಂದಿಗೆ ಕೆಲಸ ಮಾಡುವುದಾಗಿ ಲೈಲಾ ಹೇಳಿದರು. ತೃತೀಯಲಿಂಗಿಗಳ ಹೆಸರನ್ನು ಮತದಾರರಾಗಿ ನೋಂದಾಯಿಸಿ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಕೆಲಸ ಮಾಡಲು ಆರಂಭಿಸಿರುವುದಾಗಿ ಅವರು ತಿಳಿಸಿದರು.

ಆದಾಗ್ಯೂ, ಸಾಮಾನ್ಯವಾಗಿ ಈ ಪ್ರಚಾರಕ್ಕಾಗಿ ಚುನಾವಣಾ ಆಯೋಗವು ಪ್ರಸಿದ್ಧ ವ್ಯಕ್ತಿಗಳು, ನಟರು, ಸೆಲೆಬ್ರಿಟಿಗಳು ಮತ್ತು ಸಮಾಜವಾದಿಗಳನ್ನು ಪ್ರಚಾರಕರಾಗಿ ನೇಮಿಸುತ್ತದೆ. ಇದೀಗ ಪ್ರಥಮ ಬಾರಿಗೆ ತೃತೀಯಲಿಂಗಿಯೊಬ್ಬರು ಚುನಾವಣಾ ಪ್ರಚಾರಕರಾಗಿ ಆಯ್ಕೆಯಾಗಿದ್ದಾರೆ. ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಲೈಲಾ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯಾದ್ಯಂತ ತೃತೀಯಲಿಂಗಿಗಳ ಹಕ್ಕುಗಳಿಗಾಗಿ ಹೋರಾಡಲು ಎನ್‌ಜಿಒ ಪ್ರಾರಂಭಿಸಲಾಗಿದೆ.

ಲೈಲಾ ಅವರು ತೃತೀಯಲಿಂಗಿಗಳ ಹಕ್ಕುಗಳಿಗಾಗಿ ಹೋರಾಡಿದ ಅನುಭವವನ್ನು ಹೊಂದಿದ್ದಾರೆ ಮತ್ತು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದರು. ಲೈಲಾ ಮಾತನಾಡಿ, ರಾಜ್ಯದಲ್ಲಿ ಅನೇಕ ತೃತೀಯಲಿಂಗಿಗಳು ತಮ್ಮ ಹೆಸರನ್ನು ಮತದಾರರಾಗಿ ನೋಂದಾಯಿಸಲು ಸಭೆ ನಡೆಸಿ ಜಾಗೃತಿ ಮೂಡಿಸಿದ್ದಾರೆ, ಸರ್ಕಾರವು ತೃತೀಯಲಿಂಗಿಗಳನ್ನು ನಾಗರಿಕರಾಗಿ ಗುರುತಿಸಲು ಮತ್ತು ಮತ ಚಲಾಯಿಸಲು ಅವಕಾಶವನ್ನು ನೀಡಿದೆ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಟ್ರಾನ್ಸ್‌ಜೆಂಡರ್‌ಗಳನ್ನು ಮತದಾರರಾಗಿಸಲು ಶ್ರಮಿಸುವುದಾಗಿ ಹೇಳಿದರು. ಚುನಾವಣಾ ಆಯೋಗದ ಐಕಾನ್ ಆಗಿ ಆಯ್ಕೆಯಾಗಿರುವುದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಲೈಲಾ ಹೇಳಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ತಮ್ಮ ಸಲಹೆಗಳನ್ನೂ ಅಧಿಕಾರಿಗಳು ಪರಿಗಣಿಸುತ್ತಾರೆ ಎಂದು ಲೈಲಾ ವಿವರಿಸಿದರು.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್