AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 9 ಪಂದ್ಯಗಳಲ್ಲಿ 6 ಸೋಲು: ಮಾಲ್ಡೀವ್ಸ್​ನಲ್ಲಿ SRH ಮೋಜು ಮಸ್ತಿ

IPL 2025 SRH: ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ 9 ಪಂದ್ಯಗಳನ್ನಾಡಿದೆ. ಈ ವೇಳೆ 3 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಉಳಿದ 6 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸೋಲಿನ ಹೊರತಾಗಿಯೂ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಎಸ್​ಆರ್​ಹೆಚ್ ಫ್ರಾಂಚೈಸಿ ಮಾಲ್ಡೀವ್ಸ್​ಗೆ ಕರೆದುಕೊಂಡು ಹೋಗಿದೆ.

IPL 2025: 9 ಪಂದ್ಯಗಳಲ್ಲಿ 6 ಸೋಲು: ಮಾಲ್ಡೀವ್ಸ್​ನಲ್ಲಿ SRH ಮೋಜು ಮಸ್ತಿ
Srh
ಝಾಹಿರ್ ಯೂಸುಫ್
|

Updated on:Apr 27, 2025 | 1:58 PM

Share

IPL 2025: ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH) ತಂಡವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿರುವ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಮ್ಯಾಚ್ ಮಾತ್ರ. ಅಂದರೆ 6 ಪಂದ್ಯಗಳಲ್ಲಿ ಮುಗ್ಗರಿಸಿದೆ. ಆದರೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ಈ ಗೆಲುವಿನ ಬೆನ್ನಲ್ಲೇ ಎಸ್​ಆರ್​ಹೆಚ್ ತಂಡ ಮಾಲ್ಡೀವ್ಸ್​ನತ್ತ ಮುಖ ಮಾಡಿದೆ. ಅದು ಕೂಡ ಮೋಜು ಮಸ್ತಿಗಾಗಿ ಎಂಬುದು ವಿಶೇಷ.

ಐಪಿಎಲ್ ಸೀಸನ್-18ರ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಬಾರಿಸಿ ಶುಭಾರಂಭ ಮಾಡಿದ್ದ ಎಸ್​ಆರ್​ಹೆಚ್ ತಂಡವು ಆ ಬಳಿಕ ಸತತ 4 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ 2 ಪಂದ್ಯಗಳಲ್ಲೂ ಪರಾಜಯಗೊಂಡಿತ್ತು.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಈ ಸೋಲಿನ ಸರಪಳಿಯಿಂದ ಕೊನೆಗೂ ಸನ್​ರೈಸರ್ಸ್ ಹೊರಬಂದಿದೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲುಣಿಸುವ ಮೂಲಕ ಎಂಬುದು ವಿಶೇಷ. ಗೆಲುವಿನ ಬೆನ್ನಲ್ಲೇ ಎಸ್​ಆರ್​ಹೆಚ್​ ತಂಡದ ಆಟಗಾರರು ಮಾಲ್ಡೀವ್ಸ್​ನತ್ತ ಪ್ರಯಾಣ ಬೆಳೆಸಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ತಂಡದ ಮುಂದಿನ ಪಂದ್ಯಕ್ಕೆ ಒಂದು ವಾರದ ಅಂತರವಿದೆ. ಹೀಗಾಗಿ ಎಸ್​ಆರ್​ಹೆಚ್ ಫ್ರಾಂಚೈಸಿ ಆಟಗಾರರನ್ನು ಮಾಲ್ಡೀವ್ಸ್​ಗೆ ವಿಶ್ರಾಂತಿಗಾಗಿ ಕರೆದುಕೊಂಡು ಹೋಗಿದೆ.

ಮಾಲ್ಡೀವ್ಸ್​ಗೆ ಹೋಗಲು ಕಾರಣವೇನು?

ಪ್ರವಾಸವು ಆಟಗಾರರಿಗೆ ವಿಶ್ರಾಂತಿ ನೀಡುತ್ತದೆ ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲೀಕರು ನಂಬಿದ್ದಾರೆ. ಹೀಗಾಗಿ ಆಟಗಾರರಿಗೆ ಅತ್ಯುತ್ತಮ ವಿಶ್ರಾಂತಿ ಒದಗಿಸಲು ಮುಂದಾಗಿದ್ದಾರೆ. ಈ ಮೂಲಕ ಮುಂದಿನ ಪಂದ್ಯಗಳ ಮೂಲಕ ಗೆಲುವಿನ ಲಯಕ್ಕೆ ಮರಳು ಪ್ಲ್ಯಾನ್ ರೂಪಿಸಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಸನ್​ರೈಸರ್ಸ್ ಪಡೆ:

ಸನ್​ರೈಸರ್ಸ್ ಹೈದರಾಬಾದ್ ತಂಡವು ಮುಂದಿನ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಹಂತಕ್ಕೇರಬಹುದು. ಏಕೆಂದರೆ ಎಸ್​ಆರ್​ಹೆಚ್ ತಂಡವು ಈವರೆಗೆ 9 ಪಂದ್ಯಗಳನ್ನಾಡಿದ್ದು, ಈ ವೇಳೆ 3 ಜಯ ಸಾಧಿಸಿ ಒಟ್ಟು 6 ಅಂಕಗಳನ್ನು ಪಡೆದುಕೊಂಡಿದೆ. ಮುಂದಿನ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಒಟ್ಟು ಅಂಕ 16 ಕ್ಕೇರಲಿದೆ.

ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?

ಈ ಮೂಲಕ ಪ್ಲೇಆಫ್ ಹಂತಕ್ಕೇರಲು ಸನ್​ರೈಸರ್ಸ್ ಹೈದರಾಬಾದ್ ತಂಡ ಪ್ಲ್ಯಾನ್ ರೂಪಿಸಿದೆ. ಅದರಂತೆ ಎಸ್​ಆರ್​ಹೆಚ್ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಸನ್​ರೈಸರ್ಸ್ ಹೈದರಾಬಾದ್ ಪ್ಲೇಆಫ್ ಹಂತಕ್ಕೇರಬಹುದು.

Published On - 1:57 pm, Sun, 27 April 25

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು