ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು? ಪತ್ತೆ ಹಚ್ಚಿದವರಿಗೆ ಎಷ್ಟು ಪಾಲು?
ಲಕ್ಕುಂಡಿಯಲ್ಲಿ ಸಿಕ್ಕ ಗುಪ್ತನಿಧಿಯನ್ನು ಕುಟುಂಬ ಜಿಲ್ಲಾಡಳಿತಕ್ಕೆ ಒಪ್ಪಿಸಿದೆ. ಮನೆಯ ಪಾಯಾ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕೂಡಲೇ ಕುಟುಂಬಸ್ಥರು ಅದನ್ನು ಸರ್ಕಾರಕ್ಕೆ ಒಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದೀಗ ಸಿಕ್ಕ ನಿಧಿ ಯಾರಿಗೆ ಸೇರುತ್ತೆ? ಅದರ ವಾರಸುದಾರರು ಯಾರಾಗಿರ್ತಾರೆ? ಇನ್ನು ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸಿಕ್ಕ ನಿಧಿಯನ್ನ ರಿತ್ತಿ ಕುಟುಂಬ ವಾಪಸ್ ಕೊಟ್ರೂ ಸಹ.. ಆ ನಿಧಿ ಬಗ್ಗೆ ಚರ್ಚೆ ಆಗೇ ಆಗುತ್ತೆ.. ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ? ನಿಧಿ ಕಾಯ್ದೆಯ ಪ್ರಕಾರ ಯಾರಿಗೆ ಆ ಚಿನ್ನಾಭಾರಣ ಸೇರ್ಬೇಕು? ಅನ್ನೋದು ಕಾನೂನಿನಲ್ಲಿದೆ.
ಗದಗ, (ಜನವರಿ 12): ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ಗುಪ್ತನಿಧಿಯನ್ನು (lakkundi Gold Treasure) ಕುಟುಂಬ ಜಿಲ್ಲಾಡಳಿತಕ್ಕೆ ಒಪ್ಪಿಸಿದೆ. ಮನೆಯ ಪಾಯಾ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕೂಡಲೇ ಕುಟುಂಬಸ್ಥರು ಅದನ್ನು ಸರ್ಕಾರಕ್ಕೆ ಒಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದೀಗ ಸಿಕ್ಕ ನಿಧಿ ಯಾರಿಗೆ ಸೇರುತ್ತೆ? ಅದರ ವಾರಸುದಾರರು ಯಾರಾಗಿರ್ತಾರೆ? ಇನ್ನು ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸಿಕ್ಕ ನಿಧಿಯನ್ನ ರಿತ್ತಿ ಕುಟುಂಬ ವಾಪಸ್ ಕೊಟ್ರೂ ಸಹ.. ಆ ನಿಧಿ ಬಗ್ಗೆ ಚರ್ಚೆ ಆಗೇ ಆಗುತ್ತೆ.. ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ? ನಿಧಿ ಕಾಯ್ದೆಯ ಪ್ರಕಾರ ಯಾರಿಗೆ ಆ ಚಿನ್ನಾಭಾರಣ ಸೇರ್ಬೇಕು? ಅನ್ನೋದು ಕಾನೂನಿನಲ್ಲಿದೆ.
.
ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ. 100 ವರ್ಷಕ್ಕಿಂತ ಹಳೆಯದಾದ ನಿಧಿ ಸರ್ಕಾರದ ಸ್ವತ್ತು ಆಗಲಿದೆ. ಆದ್ರೆ ಆ ನಿಧಿ ಸರ್ಕಾರದ ಸ್ವತ್ತಾದ್ರೂ ಕಂಡಿಷನ್ಸ್ ಅಪ್ಲೈ ಆಗುತ್ತೆ. ಕಾಯ್ದೆ ಪ್ರಕಾರ ನಿಧಿ ಇದ್ದ ಜಾಗದ ಮಾಲೀಕರಿಗೂ ಐದನೇ ಒಂದು ಭಾಗ ಕೊಡ್ಬೆಕಾಗುತ್ತಂತೆ. ಹಾಗೆ ನಿಧಿ ಪತ್ತೆ ಹಚ್ಚಿದವರಿಗೂ ನಿಧಿಯ ಮೌಲ್ಯ ಎಷ್ಟಿರುತ್ತೋ ಅದ್ರ ಒಂದು ಭಾಗ ಪಾಲು ಕೊಡ್ಬೆಕಾಗುತ್ತೆ. ಈಗ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಪತ್ತೆ ಹಚ್ಚಿದ್ದು ಪ್ರಜ್ವಲ್ ಅನ್ನೋ ಹುಡುಗ. ನಿಧಿ ಕಾಯ್ದೆ ಪ್ರಕಾರ ಇಡೀ ರಿತ್ತಿ ಕುಟುಂಬಕ್ಕೆ, ಪ್ರಜ್ವಲ್ಗೂ ನಿಧಿಯಲ್ಲಿ ಪಾಲು ಸಿಗಬೇಕಿದೆ. ಈ ಬಗ್ಗೆ ಪುರಾತತ್ವ ಇಲಾಖೆ ನಿರ್ದೇಶಕ ಶೆಜೇಶ್ವರ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.
