PM Narendra Modi in US; ಭಾರತದ ತ್ವರಿತಗತಿ ಅಭಿವೃದ್ಧಿ ಅರ್ಥಮಾಡಿಕೊಳ್ಳಲು ಇಡೀ ವಿಶ್ವ ಉತ್ಸುಕವಾಗಿದೆ: ಪ್ರಧಾನಿ ನರೇಂದ್ರ ಮೋದಿ

|

Updated on: Jun 23, 2023 | 11:58 AM

ಭಾರತ ಬಹಳ ವೇಗದಲ್ಲಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆಯತ್ತಿದೆ ಎಂದ ಪ್ರಧಾನಿ ಮೋದಿ, ಭಾರತದ ಆರ್ಥಿಕತೆ ಬೆಳೆದರೆ ವಿಶ್ವದ ಆರ್ಥಿಕತೆಯೂ ಬೆಳೆಯುತ್ತದೆ ಎಂದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ ಭಾಷಣದ ಮೂಲಕ ಯುಎಸ್ ಸೆನೆಟರ್ ಗಳ ಮನಸೂರೆಗೊಂಡರು. ವೈವಿಧ್ಯತೆಯಲ್ಲಿ ಏಕತೆಯನ್ನು (Unity in Diversity) ಮೂಲಮಂತ್ರವಾಗಿಸಿರುವ ಭಾರತದ ಅಭಿವೃದ್ಧಿಯ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಭಯಂಕರ ಕುತೂಹಲ ಮೂಡಿದೆ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಜನ ಕಾತುರರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ತಾವು ಪ್ರಧಾನ ಮಂತ್ರಿಯಾಗಿ ಮೊದಲ ಬಾರಿ ಯುಎಸ್​ಗೆ ಭೇಟಿ ನೀಡಿದಾಗ ಭಾರತ ವಿಶ್ವದ 10ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿತ್ತು ಮತ್ತು ಈಗ ಅದು 5ನೇ ಅತಿದೊಡ್ಡ ಎಕಾನಮಿ (5th biggest economy) ಆಗಿದೆ ಎಂದು ಮೋದಿ ಹೇಳಿದಾಗ ಸೆನೆಟರ್​ಗಳು ಜೋರಾಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಸ್ವಲ್ಪ ಸಮಯದಲ್ಲಿ ಭಾರತ ಮೂನೇ ಸ್ಥಾನಕ್ಕೇರಲಿದೆ ಅಂತ ಪ್ರಧಾನಿ ಹೇಳಿದಾಗ ಮತ್ತಷ್ಟು ಜೋರು ಚಪ್ಪಾಳೆ! ಭಾರತ ಬಹಳ ವೇಗದಲ್ಲಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆಯತ್ತಿದೆ ಎಂದ ಪ್ರಧಾನಿ ಮೋದಿ, ಭಾರತದ ಆರ್ಥಿಕತೆ ಬೆಳೆದರೆ ವಿಶ್ವದ ಆರ್ಥಿಕತೆಯೂ ಬೆಳೆಯುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on