ಪ್ರಾಣಿಗಳಂತೆ ಕಾಣುವ ಉಡುಪು ಧರಿಸಿ ಈ ರೂಪದರ್ಶಿಯರು ಮೋಜಿಗಾಗಿ, ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲಬೇಡಿ ಅನ್ನುತ್ತಾರೆ!
ಮಾಂಸಕ್ಕಾಗಿ, ಮೋಜಿಗಾಗಿ, ಚರ್ಮಕ್ಕಾಗಿ, ಮತ್ತು ವಸ್ತ್ರಕ್ಕಾಗಿ ಪ್ರಾಣಿಗಳನ್ನು ಕೊಲ್ಲಬೇಡಿ ಎಂಬ ಸಂದೇಶವನ್ನು ಈ ಫ್ಯಾಶನ್ ಶೋ ಮೂಲಕ ರವಾನಿಸಲಾಗುತ್ತದೆ.
ಗುರುವಾರದಂದು ನಾವು ಇಟಲಿಯ ಫ್ಯಾಶನ್ ಹೌಸೊಂದು ನಾಯಿಗಳಿಗೆ ವಸ್ತ್ರ ವಿನ್ಯಾಸಗೊಳಿಸಿ ಅವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೆವು. ಅದರೆ ಸಾಕು ಪ್ರಾಣಿ, ಕಾಡುಪ್ರಾಣಿ, ಪಕ್ಷಿ, ಕೀಟಗಳಂತೆ ಕಾಣುವ ಹಾಗೆ ಉಡುಪು ಧರಿಸಿ ರೂಪದರ್ಶಿಯರು ಱಂಪ್ ವಾಕ್ ಮಾಡುವುದನ್ನು ನೀವು ನೋಡಿದ್ದೀರಾ? ಹಾಗೊಂದು ಫ್ಯಾಶನ್ ಶೋ ನಡೆಯುತ್ತದೆ ಅಂತ ಬಹಳಷ್ಟು ಜನಕ್ಕೆ ಗೊತ್ತಿರಲಾರದು. ಹಾಗಿದ್ದಲ್ಲಿ ಈ ವಿಡಿಯೋ ನಿಮಗಾಗಿ. ಅಂದಹಾಗೆ ಈ ಬಗೆಯ ಫ್ಯಾಶನ್ ಶೋಗಳು ಪ್ರತಿ ವರ್ಷ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತವೆ. ನಮ್ಮಲ್ಲಿ ಅವುಗಳ ಬಗ್ಗೆ ಚರ್ಚೆ ಅಗುವುದಿಲ್ಲ. ಹಾಗಾಗೇ, ಜನರಿಗೆ ಮಾಹಿತಿ ಇಲ್ಲ,
ನೀವು ಇಲ್ಲಿ ನೋಡುತ್ತಿರುವ ಫ್ಯಾಸನ್ ಶೋ ಒಂದು ಥೀಮ್ ಆಧಾರಿತವಾಗಿದೆ. ಆ ಥೀಮ್ ಮಾರ್ಮಿಕವಾಗಿದೆ ಮತ್ತು ಅಷ್ಟೇ ಅರ್ಥಗರ್ಭಿತವಾಗಿದೆ. ಮಾಂಸಕ್ಕಾಗಿ, ಮೋಜಿಗಾಗಿ, ಚರ್ಮಕ್ಕಾಗಿ, ಮತ್ತು ವಸ್ತ್ರಕ್ಕಾಗಿ ಪ್ರಾಣಿಗಳನ್ನು ಕೊಲ್ಲಬೇಡಿ ಎಂಬ ಸಂದೇಶವನ್ನು ಈ ಫ್ಯಾಶನ್ ಶೋ ಮೂಲಕ ರವಾನಿಸಲಾಗುತ್ತದೆ. ಮಾಂಸಾಹಾರವೇ ಪ್ರಮುಖವಾಗಿರುವ ದೇಶಗಳಲ್ಲಿ ಇಂಥ ಥೀಮಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಸೋಜಿಗ ಹುಟ್ಟಿಸುವ ಸಂಗತಿಯೇ.
ಱಂಪ್ ವಾಕ್ ಮಾಡುತ್ತಿರುವ ರೂಪದರ್ಶಿಯರು ಧರಿಸಿರುವ ಉಡುಪುಗಳನ್ನು ಗಮನಿಸಿ. ಒಬ್ಬಾಕೆ, ಗಿಳಿಯ ಮೈಬಣ್ಣದಂಥ ಉಡುಗೆ ತೊಟ್ಟಿದ್ದರೆ ಮತ್ತೊಬ್ಬಾಕೆ ಗೂಬೆಯನ್ನು ಹೋಲುವ ವಸ್ತ್ರ ಧರಿಸಿದ್ದಾಳೆ. ಇನ್ನೂ ಕೆಲವರು ಕೊಕ್ಕರೆ, ನವಿಲು, ಗಿಡುಗ, ಬಾತು, ಆಸ್ಟ್ರಿಚ್ ಮೊದಲಾದ ಪ್ರಾಣಿಗಳಲ್ಲದೆ, ಚಿಟ್ಟೆ ಹಾಗೂ ಕೀಟಗಳ ಹಾಗೆ ಕಾಣುವಂತೆ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿದ್ದಾರೆ.
ಈ ಫ್ಯಾಶನ್ ಶೋನ ಥೀಮ್ ನಿಜಕ್ಕೂ ಅದ್ಭುತವಾಗಿದೆ.
ಇದನ್ನೂ ಓದಿ: ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ