ಮುಷ್ಕರವನ್ನು ನಿಲ್ಲಿಸುವಂತೆ ರೈತರಿಗೆ ಹೇಳಲು ಬಂದ ಪೊಲೀಸಪ್ಪನಿಗೆ ಗೂಳಿ ತಡೆಯುವ ಪ್ರಯತ್ನ ಮಾಡಿದ್ದು!

ಮುಷ್ಕರವನ್ನು ನಿಲ್ಲಿಸುವಂತೆ ರೈತರಿಗೆ ಹೇಳಲು ಬಂದ ಪೊಲೀಸಪ್ಪನಿಗೆ ಗೂಳಿ ತಡೆಯುವ ಪ್ರಯತ್ನ ಮಾಡಿದ್ದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 26, 2021 | 9:27 PM

ಈ ಹೋರಿಯ ಮುಂದೆ ಬೇರೆ ಸಾಕಷ್ಟು ಜನ ತಿರುಗಾಡಿದ್ದರು. ಅವರಿಗದು ಏನೆಂದರೆ ಏನೂ ಮಾಡಲಿಲ್ಲ. ಆದರೆ ಪೊಲೀಸಪ್ಪನನ್ನು ನೋಡಿದ ಕೂಡಲೇ ತಿವಿಯಲು ಹೋಗುತ್ತದೆ.

ಮೈಸೂರು ಭಾಗದ ರೈತರು ಶುಕ್ರವಾರದಂದು ಸಾಂಸ್ಕೃತಿಕ ನಗರಿಯ ಎ ಪಿ ಎಮ್ ಸಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಅವರ ಪ್ರತಿಭಟನೆಯ ಉದ್ದೇಶ ಯಾವುದೋ ಒಂದು ನಿರ್ದಿಷ್ಟವಾದ ಬೇಡಿಕೆಯಾಗಿರಲಿಲ್ಲ. ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅವರು ಮುಷ್ಕರ ನಡೆಸಿದರು. ತಮ್ಮ ಪ್ರತಿಭಟನೆಯ ಭಾಗವಾಗಿ ಅವರು ಮೈಸೂರು-ಊಟಿ ನಡುವಿನ ಹೆದ್ದಾರಿ ಮೇಲೆ ಚಲಿಸುತ್ತಿದ್ದ ವಾಹನಗಳನ್ನು ತಡೆದರು. ಸಂಯುಕ್ತ ಕಿಸಾನ್ ಮೋರ್ಚಾ, ರೈತ ಸಂಘ ಮತ್ತು ಬೆಳೆಗಾರರ ಸಂಘ ಮೊದಲಾದ ರೈತ ಸಂಘಟನೆಗಳನ್ನು ಪ್ರತಿನಿಧಿಸುತ್ತಿದ್ದ ಅನ್ನದಾತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ರೈತರು ಪ್ರತಿಭಟನೆಗೆ ತಮ್ಮ ದನಕರುಗಳನ್ನು ಜೊತೆಯಲ್ಲಿ ಕರೆತಂದಿದ್ದು ವಿಶೇಷವಾಗಿತ್ತು. ಈ ಮೂಕಪ್ರಾಣಿಗಳು ತಮ್ಮ ಯಜಮಾನರ ಮೇಲೆ ಎಷ್ಟು ಮಮತೆಯಿಟ್ಟುಕೊಂಡಿರುತ್ತವೆ ಅನ್ನೋದು ಪ್ರತಿಭಟನೆಯಲ್ಲಿ ಸಾಬೀತಾಯಿತು ಮಾರಾಯ್ರೇ. ಅದು ಹೇಗೆ ಅಂತ ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ.

ರೈತರಿಗೆ ಮುಷ್ಕರ ನಿಲ್ಲಿಸುವಂತೆ ಮನವಿ ಮಾಡಲು ಟ್ರಾಫಿಕ್ ಪೇದೆಯೊಬ್ಬರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ನಾಯಕರತ್ತ ಹೋಗುತ್ತಾರೆ. ಅದುವರೆಗೆ ಏನೂ ಮಾಡದೆ ಸುಮ್ಮನಿದ್ದ ಬಿಳಿ ಬಣ್ಣದ ಹೋರಿಯೊಂದು ಪೊಲೀಸ್ ಕಾಣಿಸಿದಾಕ್ಷಣ ಅವರನ್ನು ತಿವಿಯಲು ಮುಂದಾಗುತ್ತದೆ! ಅದೂ ಸಹ ಒಮ್ಮೆಯಲ್ಲ ಎರಡು ಬಾರಿ.

ನಿಮಗೆ ಇದು ಕೇಳಿ ಆಶ್ಚರ್ಯವಾಗಬಹುದು. ಈ ಹೋರಿಯ ಮುಂದೆ ಬೇರೆ ಸಾಕಷ್ಟು ಜನ ತಿರುಗಾಡಿದ್ದರು. ಅವರಿಗದು ಏನೆಂದರೆ ಏನೂ ಮಾಡಲಿಲ್ಲ. ಆದರೆ ಪೊಲೀಸಪ್ಪನನ್ನು ನೋಡಿದ ಕೂಡಲೇ ತಿವಿಯಲು ಹೋಗುತ್ತದೆ. ತನ್ನ ಯಜಮಾನರಿಗೆ ಅಲ್ಲಿಂದ ಓಡಿಸಲು ಪೊಲೀಸ್ ಬಂದಿದ್ದು ಅಂತ ಅದಕ್ಕೆ ಗೊತ್ತಾಗಿ ಅವರ ಬೆಂಬಲಕ್ಕೆ ನಿಂತಿತೇ? ಇರಬಹುದು ಮಾರಾಯ್ರೇ.

ಇದನ್ನೂ ಓದಿ:  ಅಯ್ಯಪ್ಪನ ಸನ್ನಿಧಿಯಲ್ಲಿ ಅಪ್ಪು; ನಟ ಪುನೀತ್ ಭಾವಚಿತ್ರ ಹೊತ್ತು ಶಬರಿಮಲೆ ಹತ್ತಿದ ಅಭಿಮಾನಿ- ವಿಡಿಯೋ ನೋಡಿ