ಅಯ್ಯಪ್ಪನ ಸನ್ನಿಧಿಯಲ್ಲಿ ಅಪ್ಪು; ನಟ ಪುನೀತ್ ಭಾವಚಿತ್ರ ಹೊತ್ತು ಶಬರಿಮಲೆ ಹತ್ತಿದ ಅಭಿಮಾನಿ- ವಿಡಿಯೋ ನೋಡಿ

Puneeth Rajkumar: ನಟ ಪುನೀತ್ ರಾಜ್​ಕುಮಾರ್ ಅವರ ಭಾವಚಿತ್ರವನ್ನು ಹೊತ್ತು ಅಭಿಮಾನಿಯೋರ್ವರು ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಅಯ್ಯಪ್ಪನ ಸನ್ನಿಧಿಯಲ್ಲಿ ಅಪ್ಪು; ನಟ ಪುನೀತ್ ಭಾವಚಿತ್ರ ಹೊತ್ತು ಶಬರಿಮಲೆ ಹತ್ತಿದ ಅಭಿಮಾನಿ- ವಿಡಿಯೋ ನೋಡಿ
ಶಬರಿಮಲೆ ಮೆಟ್ಟಿಲು ಹತ್ತುತ್ತಿರುವ ಅಪ್ಪು ಅಭಿಮಾನಿ
Follow us
TV9 Web
| Updated By: shivaprasad.hs

Updated on: Nov 25, 2021 | 3:59 PM

‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ’ ಹಾಡಿನ ಸಾಲುಗಳನ್ನು ಪುನೀತ್ ಅಕ್ಷರಶಃ ನಿಜ ಜೀವನದಲ್ಲೂ ಜೀವಿಸಿದ್ದರು. ಮಕ್ಕಳು, ಮಹಿಳೆಯರು, ಮನೆಯ ಹಿರಿಯರು ಎಲ್ಲರೂ ಸೇರಿ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರಗಳನ್ನೇ ಪುನೀತ್ ತಮ್ಮ ವೃತ್ತಿ ಜೀವನದುದ್ದಕ್ಕೂ ಮಾಡುತ್ತಾ ಬಂದರು. ಬಹುಶಃ ಅದೇ ಕಾರಣಕ್ಕೆ ಅವರಿಗೆ ಮಹಿಳೆಯರು, ಮಕ್ಕಳ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ, ಅಪ್ಪು ತಮ್ಮ  ಸಮಾಜಮುಖಿ ಕಾರ್ಯಗಳ ಕುರಿತು ಹೊರಗೆಲ್ಲೂ ಹೇಳಿಕೊಂಡಿರಲಿಲ್ಲ. ಅಷ್ಟೇಕೆ, ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಕೂಡ ಅಪ್ಪು ಕುರಿತು ಮಾತನಾಡುವಾಗ ‘ಅವನು ಇಷ್ಟೆಲ್ಲಾ ಯಾವಾಗ ಮಾಡಿದ? ಎಷ್ಟು ಸಣ್ಣ ವಯಸ್ಸಿಗೆ ಎಲ್ಲವನ್ನೂ ಮಾಡಿ ಹೊರಟುಬಿಟ್ಟ’ ಎಂದು ಹೇಳಿದ್ದರು. ಅಷ್ಟರಮಟ್ಟಿಗೆ ಪುನೀತ್ ಜನೋಪಯೋಗಿ ಕಾರ್ಯಗಳನ್ನು ಎಲೆಮರೆ ಕಾಯಿಯಂತೆ ಇದ್ದುಕೊಂಡೇ ಮಾಡಿದರು. ಜನರು ಅವರನ್ನು ಪ್ರೀತಿಸಿದ್ದಕ್ಕೆ ಸಾಕ್ಷಿ ಎಂಬಂತೆ, ಕಂಠೀರವ ಸ್ಟುಡಿಯೋದಲ್ಲಿ ಈಗಲೂ ಅಭಿಮಾನಿಗಳ ಸಾಲು ಕಡಿಮೆಯಾಗಿಲ್ಲ. ಮಳೆ- ಬಿಸಿಲು ಯಾವುದನ್ನೂ ಲೆಕ್ಕಿಸದೆ, ರಾಜ್ಯದ ವಿವಿಧ ಭಾಗದಿಂದ ಬರುವ ಅಭಿಮಾನಿಗಳು ಪುನೀತ್​ಗೆ ತಲೆಬಾಗಿ ನಮಿಸುತ್ತಾರೆ. 

ಅಪ್ಪು ಅಭಿಮಾನಿಗಳು ಕೂಡ ಪುನೀತ್ ಕಾರ್ಯಗಳನ್ನು ಆದರ್ಶವಾಗಿ ಸ್ವೀಕರಿಸಿದ್ದು, ಬಹಳಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅಭಿಮಾನಿಗಳು ದೇಶದುದ್ದಕ್ಕೂ ತಾವು ಹೋಗುತ್ತಿರುವ ಸ್ಥಳಗಳಿಗೆ ಪುನೀತ್​ ಭಾವಚಿತ್ರಗಳನ್ನು ಕರೆದೊಯ್ದು ಗೌರವ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಅಭಿಮಾನಿಯೋರ್ವರು ಪುನೀತ್ ಭಾವಚಿತ್ರವನ್ನು ಹೊತ್ತು ಶಬರಿಮಲೆ ಬೆಟ್ಟವನ್ನೇರಿ, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಅವರು ದೇವಾಲಯದ ಮೆಟ್ಟಿಲುಗಳನ್ನು ಹತ್ತುತ್ತಿರುವ ದೃಶ್ಯಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅಭಿಮಾನಿಯ ಪ್ರೀತಿ ನೋಡುಗರ ಕಣ್ಣುಗಳನ್ನು ತೇವಗೊಳಿಸಿವೆ.

ಅಭಿಮಾನಿ ಅಪ್ಪು ಚಿತ್ರ ಹಿಡಿದು ದೇಗುಲ ಹತ್ತುತ್ತಿರುವ ವಿಡಿಯೋ ಇಲ್ಲಿದೆ:

ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿ, ಪುನೀತ್​ರ ಆದರ್ಶ ಜೀವನವನ್ನು ರೂಡಿಸಿಕೊಂಡಿರುವುದು ರಾಜ್ಯದ ಹಲವು ಜನರ ಬೆಳಕನ್ನು ಬೆಳಗಿಸಿದೆ. ಹೌದು, ಪುನೀತ್ ಪ್ರೇರಣೆಯಿಂದ ರಾಜ್ಯದೆಲ್ಲೆಡೆ ಅಭಿಮಾನಿಗಳು ನೇತ್ರದಾನಕ್ಕೆ, ದೇಹದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ. ಈಗಾಗಲೇ 73ಕ್ಕೂ ಹೆಚ್ಚು ಜನ ನೇತ್ರದಾನ ಮಾಡಿ, ಹಲವರ ಬದುಕಿಗೆ ಬೆಳಕಾಗಿದ್ದಾರೆ ಎಂದು ಇತ್ತೀಚೆಗೆ ವರದಿಗಳು ಹೇಳಿದ್ದವು. ಅಲ್ಲದೇ ಸುಮಾರು 6,000 ಕ್ಕೂ ಅಧಿಕ ಜನರು ನೋಂದಣಿ ಮಾಡಿಸಿದ್ದಾರೆ. ಇವುಗಳಲ್ಲದೇ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳ ಮುಖಾಂತರ ಅಭಿಮಾನಿಗಳು ಅಪ್ಪುವನ್ನು ಜೀವಂತವಾಗಿರಿಸುತ್ತಿದ್ದಾರೆ.

ಇದನ್ನೂ ಓದಿ:

ಪುನೀತ್ ಪ್ರೇರಣೆ, ರಾಜ್ಯದಲ್ಲಿ ದಾಖಲೆಯ ಮಟ್ಟದಲ್ಲಿ ನೇತ್ರದಾನ; ಇದುವರೆಗೆ ನೋಂದಣಿ ಮಾಡಿಸಿದವರು ಎಷ್ಟು? ಇಲ್ಲಿದೆ ಮಾಹಿತಿ

ಮಾಜಿ ಪತಿ ಬರ್ತ್​ಡೇ ಕಾರಣಕ್ಕೆ ಟೀಕೆ ಎದುರಿಸಿ, ಮರುದಿನವೇ ನಾಯಿ ಜನ್ಮದಿನ ಆಚರಿಸಿದ ಸಮಂತಾ

ಪುನೀತ್​ ಕನಸು ನನಸು ಮಾಡಲು ಮುಂದಾದ ಅಶ್ವಿನಿ; ಮಹತ್ವದ ಘೋಷಣೆ ಮಾಡಿದ ಅಪ್ಪು ಪತ್ನಿ