ಹಂಸಲೇಖ ಪರವಾಗಿ ಕನ್ನಡಪರ ಸಂಘಟನೆಗಳು, ವಿರುದ್ಧ ಭಜರಂಗದಳ ಘೋಷಣೆ; ಠಾಣೆಯ ಮುಂದೆ ಹೈಡ್ರಾಮಾ

ಹಂಸಲೇಖ ಪರವಾಗಿ ಕನ್ನಡಪರ ಸಂಘಟನೆಗಳು, ವಿರುದ್ಧ ಭಜರಂಗದಳ ಘೋಷಣೆ; ಠಾಣೆಯ ಮುಂದೆ ಹೈಡ್ರಾಮಾ

TV9 Web
| Updated By: shivaprasad.hs

Updated on:Nov 25, 2021 | 1:15 PM

ನಾದಬ್ರಹ್ಮ ಹಂಸಲೇಖ ಅವರ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಬಸವನಗುಡಿ ಠಾಣೆಗೆ ಅವರು ಹಾಜರಾಗಿದ್ದಾರೆ. ಭಜರಂಗದಳ ಕಾರ್ಯಕರ್ತರು ಈಗಾಗಲೇ ಅಲ್ಲಿ ನೆರೆದಿದ್ದು, ಹೈಡ್ರಾಮಾ ಸೃಷ್ಟಿಯಾಗಿದೆ.

ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಅವರಿಗೆ ನೋಟೀಸ್ ನೀಡಲಾಗಿತ್ತು. ಇಂದು ಅವರು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿ, ವಿಚಾರಣೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಅವರಿಗೆ ಬೆಂಬಲ ನೀಡುವ ಸಲುವಾಗಿ ನಟ ಚೇತನ್ ಅಹಿಂಸಾ, ತಾವೂ ಆಗಮಿಸುವುದಾಗಿ ತಿಳಿಸಿದ್ದರು. ಇದು ಹಿಂದೂ ಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದ್ದು, ಠಾಣೆಯ ಮುಂದೆ ಜಮಾಯಿಸಿದ್ದಾರೆ. ಹಂಸಲೇಖ ಅವರ ಪರ ಕನ್ನಡ ಪರ ಸಂಘಟನೆಗಳು ಆಗಮಿಸಿದ್ದು, ಹೈಡ್ರಾಮಾ ಸೃಷ್ಟಿಯಾಗಿದೆ.

ನಟ ಚೇತನ್ ಮಧ್ಯಪ್ರವೇಶಕ್ಕೆ ಭಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ನಟ ಚೇತನ್ ಮಧ್ಯಪ್ರವೇಶ ಅಗತ್ಯವಿಲ್ಲ ಎಂದಿದ್ದಾರೆ. ಚೇತನ್ ನಡೆಯನ್ನು ಟೀಕಿಸಿರುವ ಭಜರಂಗದಳವು, ‘‘ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರು ಈ ದೇಶದ ನಾಗರಿಕನೇ ಅಲ್ಲ. ಚೇತನ್‌ರನ್ನು ಠಾಣೆಯೊಳಗೆ ಬಿಟ್ಟುಕೊಳ್ಳಲೇಬಾರದು’’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ:

ಹಂಸಲೇಖ ಜತೆ ಠಾಣೆಗೆ ಆಗಮಿಸಲಿರುವ ಚೇತನ್; ‘ಅವರ ಮಧ್ಯಪ್ರವೇಶ ಅಗತ್ಯವಿಲ್ಲ’ ಎಂದ ಭಜರಂಗದಳ

ಸೆಲ್ಫಿ ಕೇಳಿ ನಟಿ ಕವಿತಾ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು!; ವೈರಲ್ ವಿಡಿಯೋದ ಅಸಲಿಯತ್ತೇನು?

Published on: Nov 25, 2021 01:09 PM