Temple Tour: ಧನಲಕ್ಷ್ಮಿಯಾಗಿ ಕಂಗೊಳಿಸಿದ ಕನ್ನಿಕಾ ಪರಮೇಶ್ವರಿ ದೇವಿ
ಅರಿಶಿನ ಕುಂಕುಮ ಪೂಜೆ, ಮಂತ್ರಾಕ್ಷತೆ, ಮುತ್ತಿನ ಅಲಂಕಾರ, ಅನ್ನಪೂರ್ಣೆಶ್ವರಿ ಪೂಜೆ, ಸರಸ್ವತಿ ಪೂಜೆ, ವೀಳ್ಯದೆಲೆ ಪೂಜೆ, ರಾಜರಾಜೇಶ್ವರಿ ಪೂಜೆ, ದುರ್ಗಾ ಪೂಜೆ ಕೊನೆಯದಾಗಿ ಧನ ಲಕ್ಷ್ಮಿ ಪೂಜೆ ಅಂತಾ ಮಾಡುತ್ತಾರೆ.
ದೇವರ ಪೂಜೆ ಅಂದರೆ ಸಾಮಾನ್ಯವಾಗಿ ಹಣ್ಣು ಕಾಯಿ, ಅರಿಶಿನ ಕುಂಕುಮ ಹೀಗೆ ಹತ್ತು ಹಲವಾರು ಪೂಜಾ ಸಾಮಗ್ರಿಗಳಿರುವುದನ್ನ ನೋಡಿದ್ದೇವೆ. ಆದರೆ ಈ ದೇವಿಯ ವಿಶೇಷತೆಯೇ ಬೇರೆ. ದಾವಣಗೆರೆ ಹಳೇ ನಗರಕ್ಕೆ ಒಮ್ಮೆ ಹೋದರೆ ನಗರದ ಬಹುತೇಕ ಜನರು ಇಲ್ಲಿನ ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಾರಣ ಏನು ಗೊತ್ತಾ? ಇಲ್ಲಿ ವಿಶೇಷ ಪೂಜೆಗಳು ನಿರಂತರವಾಗಿ ನಡೆಯುತ್ತವೆ. ಅದರಲ್ಲೂ ವಿಶೇಷವಾಗಿ ದಸರಾ ಹಬ್ಬದಲ್ಲಿ ರಾಜ್ಯದ ಗಮನ ಸೆಳೆಯುವ ಪುಣ್ಯ ಕ್ಷೇತ್ರ ಇದು. ಒಂಬತ್ತು ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜೆ ನಡೆಯುತ್ತವೆ. ಅರಿಶಿನ ಕುಂಕುಮ ಪೂಜೆ, ಮಂತ್ರಾಕ್ಷತೆ, ಮುತ್ತಿನ ಅಲಂಕಾರ, ಅನ್ನಪೂರ್ಣೆಶ್ವರಿ ಪೂಜೆ, ಸರಸ್ವತಿ ಪೂಜೆ, ವೀಳ್ಯದೆಲೆ ಪೂಜೆ, ರಾಜರಾಜೇಶ್ವರಿ ಪೂಜೆ, ದುರ್ಗಾ ಪೂಜೆ ಕೊನೆಯದಾಗಿ ಧನ ಲಕ್ಷ್ಮಿ ಪೂಜೆ ಅಂತಾ ಮಾಡುತ್ತಾರೆ. ಇಲ್ಲಿನ ವಿಶೇಷವೆಂದರೆ ಧನ ಲಕ್ಷ್ಮಿ ಪೂಜೆಯಂದರೆ ಧನ ಕನಕ ಕಡ್ಡಾಯ. ಆದರೂ ಕನ್ನಿಕಾ ಪರಮೇಶ್ವರಿಯ ಪೂಜೆಗೆ ಯಾವುದೇ ಅಡ್ಡಿಯಾಗದಂತೆ ಇಲ್ಲಿನ ಭಕ್ತರು ನೋಡಿಕೊಳ್ಳುತ್ತಾರೆ.
Latest Videos