ಹುಷಾರು! ನಿಮ್ಮ ವಾಟ್ಸ್ಯಾಪ್ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿರಲಿಕ್ಕಿಲ್ಲ, ಅದಕ್ಕಾಗಿ 2023 ವರೆಗೆ ಕಾಯಬೇಕಂತೆ!
ನಮ್ಮ ಮೆಸೇಜುಗಳನ್ನು ಮೂರನೇಯವರ ಅಥವಾ ಖುದ್ದು ವಾಟ್ಸ್ಯಾಪ್ಗೆ ಓದುವುದು ಸಾಧ್ಯವಾಗುತ್ತದೆಯೇ, ಸಾಧ್ಯವಾಗಿದೆಯೇ ಎಂಬ ಸಂದೇಹ ಹುಟ್ಟುತ್ತದೆ. ಹಾಗಾದಲ್ಲಿ ಫೇಸ್ಬುಕ್ ಮಾಡಿರುವ ವಾಗ್ದಾನ ನಿಷ್ಪ್ರಯೋಜಕವೇ.
ನೀವು ವಾಟ್ಸ್ಯಾಪ್ ಓಪನ್ ಮಾಡಿದಾಗ ನಿಮಗೊಂದು ಸಂದೇಶ ಸಿಗುತ್ತದೆ: ಮೆಸೇಜಸ್ ಅಂಡ್ ಕಾಲ್ಸ್ ಆರ್ ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್, ಟ್ಯಾಪ್ ಟು ಲರ್ನ್ ಮೋರ್ ಅಂತ ಮತ್ತೊಂದು ಸಂದೇಶವೂ ಕಾಣುತ್ತದೆ. ನೀವು ಅದರೆ ಮೇಲೆ ಟ್ಯಾಪ್ ಮಾಡಿದರೆ, ಒಂದು ಸುದೀರ್ಘವಾದ ಸಂದೇಶ ಕಾಣಿಸುತ್ತದೆ. ಅದರಲ್ಲಿ ಹೀಗೆ ಹೇಳಲಾಗಿದೆ. ಗೌಪ್ಯತೆ ಮತ್ತು ಭದ್ರತೆ ನಮ್ಮ ನರನಾಡಿಗಳಲ್ಲಿ ಇದೆ. ಸ್ನೇಹಿತರೊಂದಿಗೆ ನೀವು ಸಂಪರ್ಕದಲ್ಲಿರಲು, ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲು, ಪ್ರತ್ಯೇಕಗೊಂಡ ಕುಟುಂಬವನ್ನು ಪುನಃ ಸಂಪರ್ಕಿಸಲು ಅಥವಾ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದಕ್ಕಾಗಿ ಸಹಾಯ ಮಾಡುವ ಉದ್ದೇಶದಿಂದಲೇ WhatsApp ಅನ್ನು ನಾವು ಮೊದಲಿನಿಂದಲೂ ರೂಪಿಸಿದ್ದೇವೆ. ನಿಮ್ಮ ಕೆಲವು ಅತ್ಯಂತ ವೈಯಕ್ತಿಕ ಕ್ಷಣಗಳನ್ನು WhatsApp ಮೂಲಕ ನೀವು ಹಂಚಿಕೊಳ್ಳುತ್ತೀರಿ. ಇದೇ ಕಾರಣಕ್ಕೆ ನಾವು ನಮ್ಮ ಆ್ಯಪ್‌ನಲ್ಲಿ ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್ ಅನ್ನು ರೂಪಿಸಿದ್ದೇವೆ. ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್ ಮಾಡಿದಾಗ, ನಿಮ್ಮ ಮೆಸೇಜ್‌ಗಳು, ಫೋಟೋಗಳು, ವೀಡಿಯೋಗಳು, ವಾಯ್ಸ್ ಮೆಸೇಜ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಕಾಲ್‌ಗಳು ಬೇಡದವರ ಕೈಗೆ ಸಿಗದಂತೆ ರಕ್ಷಣೆ ಪಡೆಯುತ್ತವೆ.
ಇದನ್ನು ಓದುತ್ತಾ ಹೋದರೆ, ವಾಟ್ಸ್ಯಾಪ್ ನ ಮಾತೃಸಂಸ್ಥೆ ಫೇಸ್ಬುಕ್ ಮಾಡಿರುವ ವಾಗ್ದಾನ ಅಥವಾ ನೀಡಿರುವ ಭರವಸೆಗಳ ಯಾದಿ ನಿಮಗೆ ಸಿಗುತ್ತದೆ. ಆದರೆ, ಈಗ ಸಂಸ್ಥೆಯು ನಮ್ಮ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡುವುದು 2023 ರವರೆಗೆ ಸಾಧ್ಯವಿಲ್ಲ ಅಂತ ಹೇಳುತ್ತಿದೆ.
ಅಂದರೆ, ನಮ್ಮ ಮೆಸೇಜುಗಳನ್ನು ಮೂರನೇಯವರ ಅಥವಾ ಖುದ್ದು ವಾಟ್ಸ್ಯಾಪ್ಗೆ ಓದುವುದು ಸಾಧ್ಯವಾಗುತ್ತದೆಯೇ, ಸಾಧ್ಯವಾಗಿದೆಯೇ ಎಂಬ ಸಂದೇಹ ಹುಟ್ಟುತ್ತದೆ. ಹಾಗಾದಲ್ಲಿ ಫೇಸ್ಬುಕ್ ಮಾಡಿರುವ ವಾಗ್ದಾನ ನಿಷ್ಪ್ರಯೋಜಕವೇ.
ಯಾವುದೇ ಪ್ಲಾಟ್ಫಾರ್ಮ್ ಮೂಲಕ ಸೆಂಡರ್ ಮತ್ತು ರಿಸೀವರ್ ನಡೆಯುವ ವಿನಿಮಯವಾಗುವ ಸಂದೇಶಗಳು ಗೌಪ್ಯ ಅಲ್ಲ ಅಂತಾದರೆ, ಜನ ಈ ವೇದಿಕೆಗಳನ್ನು ಉಪಯೋಗಿಸುವುದು ನಿಲ್ಲಿಸಿಬಿಡುತ್ತಾರೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ.
ಇದನ್ನೂ ಓದಿ: ತಿರುಮಲ ಪ್ರವಾಹದ ಹೆಸರಿನಲ್ಲಿ ಫೇಕ್ ವಿಡಿಯೋಗಳೂ ವೈರಲ್ ಆಗ್ತಿವೆ: ಟಿಟಿಡಿ ಇಒ ಹೇಳಿಕೆ