ಹಂಸಲೇಖ ಜತೆ ಠಾಣೆಗೆ ಆಗಮಿಸಲಿರುವ ಚೇತನ್; ‘ಅವರ ಮಧ್ಯಪ್ರವೇಶ ಅಗತ್ಯವಿಲ್ಲ’ ಎಂದ ಭಜರಂಗದಳ

Hamsalekha | Chethan Ahimsa: ನಾದಬ್ರಹ್ಮ ಹಂಸಲೇಖ ಅವರಿಗೆ ನಟ ಚೇತನ್ ಅಹಿಂಸಾ ಬೆಂಬಲ ನೀಡಿದ್ದಾರೆ. ಆದರೆ ಚೇತನ್ ಮಧ್ಯಪ್ರವೇಶಕ್ಕೆ ಭಜರಂಗದಳ ಆಕ್ರೋಸ ವ್ಯಕ್ತಪಡಿಸಿದೆ.

ಹಂಸಲೇಖ ಜತೆ ಠಾಣೆಗೆ ಆಗಮಿಸಲಿರುವ ಚೇತನ್; ‘ಅವರ ಮಧ್ಯಪ್ರವೇಶ ಅಗತ್ಯವಿಲ್ಲ’ ಎಂದ ಭಜರಂಗದಳ
ಹಂಸಲೇಖ, ಚೇತನ್ ಅಹಿಂಸಾ


ಬೆಂಗಳೂರು: ನಾದಬ್ರಹ್ಮ ಹಂಸಲೇಖ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿ, ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕುರಿತು ನಟ ಚೇತನ್ ಅಹಿಂಸಾ ಹೇಳಿಕೆ ನೀಡಿದ್ದು, ಹಂಸಲೇಖ ಅವರೊಂದಿಗೆ ತಾವೂ ಆಗಮಿಸುವುದಾಗಿ ತಿಳಿಸಿದ್ದಾರೆ. ಟ್ವೀಟ್ ಮೂಲಕ ಮಾಹಿತಿ ತಿಳಿಸಿರುವ ಚೇತನ್, ‘ಇದು ವಾಕ್​ ಸ್ವತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಪರವಾದ ಹೋರಾಟವಾಗಿದ್ದು, ಸಂವಿಧಾನದ ವಿರೋಧಿಗಳು ಮತ್ತು ಬ್ರಾಹ್ಮಣ ಶಕ್ತಿಗಳು ಇವರನ್ನು ಅಪರಾಧೀಕರಿಸುತ್ತಿದ್ದಾರೆ. ನಿಮ್ಮನ್ನೆಲ್ಲಾ ಅಲ್ಲೇ ಭೇಟಿ ಆಗುತ್ತೇನೆ’ ಎಂದು ತಿಳಿಸಿದ್ದಾರೆ. ಇದೀಗ ಭಜರಂಗದಳ ಚೇತನ್ ಆಗಮಿಸುವ ಕುರಿತಂತೆ ಪ್ರತಿಕ್ರಿಯಿಸಿದ್ದು, ವಿರೋಧ ವ್ಯಕ್ತಪಡಿಸಿದೆ. ಚೇತನ್ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಭಜರಂಗದಳದ ಕಾರ್ಯಕರ್ತರು ಬಸವನಗುಡಿ ಠಾಣೆ ಬಳಿ ಜಮಾಯಿಸಿದ್ದಾರೆ.

ನಟ ಚೇತನ್ ಹಂಚಿಕೊಂಡಿರುವ ಟ್ವೀಟ್:

ಭಜರಂಗದಳ ಮುಖಂಡ ತೇಜಸ್ ಚೇತನ್ ಆಗಮನದ ಕುರಿತು ಮಾತನಾಡಿ, ‘‘ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ. ನಾದಬ್ರಹ್ಮ ಹಂಸಲೇಖ ಬೇಷರತ್​​ ಕ್ಷಮೆಯಾಚಿಸಬೇಕು. ಈ ವಿಚಾರದಲ್ಲಿ ನಟ ಚೇತನ್ ಮಧ್ಯಪ್ರವೇಶ ಅಗತ್ಯವಿಲ್ಲ’’ ಎಂದಿದ್ದಾರೆ. ಚೇತನ್ ನಡೆಯನ್ನು ಟೀಕಿಸಿರುವ ತೇಜಸ್, ‘‘ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರು ಈ ದೇಶದ ನಾಗರಿಕನೇ ಅಲ್ಲ. ಚೇತನ್‌ರನ್ನು ಠಾಣೆಯೊಳಗೆ ಬಿಟ್ಟುಕೊಳ್ಳಲೇಬಾರದು’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ; ಬಸವನಗುಡಿ ಠಾಣೆಗೆ ಇಂದು ಹಂಸಲೇಖ ಹಾಜರು ಸಾಧ್ಯತೆ

ಸೆಲ್ಫಿ ಕೇಳಿ ನಟಿ ಕವಿತಾ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು!; ವೈರಲ್ ವಿಡಿಯೋದ ಅಸಲಿಯತ್ತೇನು?

Click on your DTH Provider to Add TV9 Kannada