Hamsalekha: ವಿಚಾರಣೆಗೆ ಹಾಜರಾದ ಹಂಸಲೇಖ, ಓಡೋಡಿ ಬಂದ ನಟ ಚೇತನ್; ಠಾಣೆಯ ಬಳಿ ಉದ್ವಿಗ್ನ ಪರಿಸ್ಥಿತಿ
Chethan Ahimsa: ನಾದಬ್ರಹ್ಮ ಹಂಸಲೇಖ ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸಂಘಟನೆಗಳು ಸ್ಥಳದಲ್ಲಿ ಜಮಾಯಿಸಿರುವುದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು: ನಾದಬ್ರಹ್ಮ ಹಂಸಲೇಖ ನೀಡಿದ್ದ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಅವರಿಗೆ ನೋಟೀಸ್ ನೀಡಲಾಗಿತ್ತು. ಇಂದು (ನವೆಂಬರ್ 25) ಅವರು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಈ ವೇಳೆ ಹಂಸಲೇಖ ಅವರೊಂದಿಗಿರುವುದಾಗಿ ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ಓಡೋಡಿ ಬಂದಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯ ಮುಂದೆ ಸೇರಿದ್ದ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಠಾಣೆಯ ಮುಂದೆ ಹಂಸಲೇಖ ಪರ- ವಿರೋಧ ಪ್ರತಿಭಟನೆ ನಡೆಯುತ್ತಿದೆ. ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಭಜರಂಗದಳವು ನಟ ಚೇತನ್ ಮಧ್ಯಪ್ರವೇಶಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಟ ಚೇತನ್ ಕನ್ನಡಪರ ಸಂಘಟನೆಗಳ ಸರ್ಪಗಾವಲಿನಲ್ಲಿ ಠಾಣೆಗೆ ಆಗಮಿಸಿದ್ದಾರೆ.
ಇದನ್ನೂ ಓದಿ:
ಹಂಸಲೇಖ ಪರವಾಗಿ ಕನ್ನಡಪರ ಸಂಘಟನೆಗಳು, ವಿರುದ್ಧ ಭಜರಂಗದಳ ಘೋಷಣೆ; ಠಾಣೆಯ ಮುಂದೆ ಹೈಡ್ರಾಮಾ
ಹಂಸಲೇಖ ಜತೆ ಠಾಣೆಗೆ ಆಗಮಿಸಲಿರುವ ಚೇತನ್; ‘ಅವರ ಮಧ್ಯಪ್ರವೇಶ ಅಗತ್ಯವಿಲ್ಲ’ ಎಂದ ಭಜರಂಗದಳ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

