ಸೆಲ್ಫಿ ಕೇಳಿ ನಟಿ ಕವಿತಾ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು!; ವೈರಲ್ ವಿಡಿಯೋದ ಅಸಲಿಯತ್ತೇನು?
Kavitha Gowda: ಕಿರುತೆರೆ ಹಾಗೂ ಹಿರಿತೆರೆ ನಟಿ ಕವಿತಾ ಗೌಡ ಅವರ ಕಿಡ್ನ್ಯಾಪ್ ದೃಶ್ಯವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದರ ಅಸಲಿಯತ್ತೇನು? ಇಲ್ಲಿದೆ ಅಚ್ಚರಿಯ ಮಾಹಿತಿ.
ಕನ್ನಡ ಕಿರುತೆರೆಯಲ್ಲಿ ಪ್ರಸ್ತುತ ಸಖತ್ ಫೇಮಸ್ ನಟಿಯರಲ್ಲಿ ಒಬ್ಬರು ಕವಿತಾ ಗೌಡ. ಲಕ್ಷ್ಮಿ ಬಾರಮ್ಮ ಧಾರವಾಹಿಯ ಚಿನ್ನು ಪಾತ್ರಧಾರಿಯಾಗಿ ಅವರು ಅಪಾರ ಜನಪ್ರಸಿದ್ಧಿ ಗಳಿಸಿದವರು. ಇದೀಗ ಅವರು ಕಿಡ್ನ್ಯಾಪ್ ಆಗಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ. ಅಂಗಡಿಯೊಂದರ ಹೊರಗೆ ಫೋನ್ನಲ್ಲಿ ಮಾತನಾಡುತ್ತಾ ನಿಂತಿರುವಾಗ ಕವಿತಾ ಗೌಡ ಅವರನ್ನು ಸೆಲ್ಫಿ ಕೇಳುವ ನೆಪದಲ್ಲಿ ಮಾತನಾಡಿಸುವ ವ್ಯಕ್ತಿ, ನಂತರ ತನ್ನ ತಂಡದೊಡನೆ ಸೇರಿ ಅವರನ್ನು ಕಿಡ್ನ್ಯಾಪ್ ಮಾಡುತ್ತಾನೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವಿಡಿಯೋದ ಅಸಲಿಯತ್ತು ತಿಳಿದ ಮೇಲೆ, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಹೌದು, ಕವಿತಾ ಗೌಡ ಕಾಣಿಸಿಕೊಂಡಿರುವ ಹೊಸ ಚಿತ್ರ ‘ಗೋವಿಂದ ಗೋವಿಂದ’ ನಾಳೆ (ನವೆಂಬರ್ 26) ರಿಲೀಸ್ ಆಗುತ್ತಿದೆ. ಪ್ರಚಾರದ ದೃಷ್ಟಿಯಿಂದ ಚಿತ್ರತಂಡ ಚಿತ್ರದ ತುಣುಕೊಂದನ್ನು ರಿಲೀಸ್ ಮಾಡಿದ್ದು, ಅದು ವೈರಲ್ ಆಗಿದೆ.
ಮೊದಲಿಗೆ ಅಭಿಮಾನಿಗಳು ಕೇವಲ ಕಿಡ್ನ್ಯಾಪ್ ತುಣುಕನ್ನು ನೋಡಿ ತಲೆಕೆಡಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಹಲವರು ಗಾಬರಿಯೂ ಆಗಿದ್ದಾರೆ. ಆದರೆ ಇದು ಕೇವಲ ಚಿತ್ರದ ತುಣುಕೊಂದಷ್ಟೇ ಮತ್ತು ವಿಶೇಷ ರೀತಿಯಲ್ಲಿ ಪ್ರಚಾರ ಮಾಡಲು ಹೀಗೆ ಮಾಡಲಾಗಿದೆ ಎಂದು ತಿಳಿದ ಮೇಲೆ, ಜನರು ಸಮಾಧಾನ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಚಿತ್ರದಲ್ಲಿ ಕವಿತಾ ಗೌಡ ಅವರು ಎಂತಹ ಪಾತ್ರ ನಿರ್ವಹಿಸಿರಬಹುದು ಎಂದು ಕುತೂಹಲಗೊಂಡಿದ್ದಾರೆ. ಪ್ರೇಕ್ಷಕರ ಕುತೂಹಲಕ್ಕೆ ನವೆಂಬರ್ 26ರಂದು ತೆರೆ ಬೀಳಲಿದೆ. ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ, ಕುತೂಹಲ ತಣಿಸಿಕೊಳ್ಳಿ ಎಂದು ಚಿತ್ರತಂಡ ತಿಳಿಸಿದೆ.
ವೈರಲ್ ಆದ ವಿಡಿಯೋ ಇಲ್ಲಿದೆ:
‘ಗೋವಿಂದ ಗೋವಿಂದ’ ಚಿತ್ರದಲ್ಲಿ ಕವಿತಾ ಗೌಡ ಅವರೊಂದಿಗೆ ಸುಮಂತ್ ಶೈಲೇಂದ್ರ ಬಾಬು, ಭಾವನಾ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಥ್ರಿಲ್ಲರ್ ಚಿತ್ರವಾಗಿರುವ ಈ ಸಿನಿಮಾ, ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ನಂತರ ತಮಿಳು ಹಾಗೂ ಮಲಯಾಳಂನಲ್ಲೂ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದಲ್ಲಿ ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ವಿ.ಮನೋಹರ್, ಕೆ ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ದೇವ್ ರಂಗಭೂಮಿ ಕಥೆ-ಚಿತ್ರಕಥೆ- ಸಂಭಾಷಣೆ ಬರೆದಿದ್ದು, ಕೆ.ಎಸ್.ಚಂದ್ರಶೇಖರ್ ಛಾಯಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ:
ಕಾಲೇಜು ಶುಲ್ಕ ಭರಿಸಲಾಗದೇ ಕಷ್ಟದಲ್ಲಿದ್ದ ವಿದ್ಯಾರ್ಥಿ; ಸಹಾಯ ಮಾಡಿ ಆತಂಕ ದೂರ ಮಾಡಿದ ಸುದೀಪ್ ಚಾರಿಟೇಬಲ್ ಟ್ರಸ್ಟ್
Mohanlal: ‘ಮರಕ್ಕರ್’ ಚಿತ್ರದ ನೂತನ ಟೀಸರ್ ರಿಲೀಸ್; ಅದ್ದೂರಿ ದೃಶ್ಯ ವೈಭವಕ್ಕೆ ಮಾರುಹೋದ ಅಭಿಮಾನಿಗಳು