AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohanlal: ‘ಮರಕ್ಕರ್’ ಚಿತ್ರದ ನೂತನ ಟೀಸರ್ ರಿಲೀಸ್; ಅದ್ದೂರಿ ದೃಶ್ಯ ವೈಭವಕ್ಕೆ ಮಾರುಹೋದ ಅಭಿಮಾನಿಗಳು

Marakkar: Lion of the Arabian sea: ನಟ ಮೋಹನ್​ಲಾಲ್ ಅಭಿನಯದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಹು ನಿರೀಕ್ಷಿತ ಚಿತ್ರ ‘ಮರಕ್ಕರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ದೃಶ್ಯವೈಭವ ಅಭಿಮಾನಿಗಳ ಮನಸೂರೆಗೊಂಡಿದೆ.

Mohanlal: ‘ಮರಕ್ಕರ್’ ಚಿತ್ರದ ನೂತನ ಟೀಸರ್ ರಿಲೀಸ್; ಅದ್ದೂರಿ ದೃಶ್ಯ ವೈಭವಕ್ಕೆ ಮಾರುಹೋದ ಅಭಿಮಾನಿಗಳು
‘ಮರಕ್ಕರ್​’ ಸಿನಿಮಾ ಪೋಸ್ಟರ್​
TV9 Web
| Edited By: |

Updated on:Nov 25, 2021 | 9:18 AM

Share

ಮೋಹನ್​ಲಾಲ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣಹಚ್ಚಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ‘ಮರಕ್ಕರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದೆ. ಮೋಹನ್ ಲಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಟೀಸರ್​ಅನ್ನು ಹಂಚಿಕೊಂಡಿದ್ದು, ಅದರ ಅದ್ದೂರಿ ದೃಶ್ಯ ವೈಭವಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿರುವ ಈ ಚಿತ್ರ ಡಿಸೆಂಬರ್ 2ರಂದು ದೇಶದೆಲ್ಲೆಡೆ ಬಿಡುಗಡೆಯಾಗಲಿದೆ. ಟೀಸರ್​ನಲ್ಲಿ ಬ್ರಿಟೀಷರ ವಿರುದ್ಧದ ಹೋರಾಟದ ಅದ್ದೂರಿ ದೃಶ್ಯಗಳಿವೆ. ಈ ಚಿತ್ರ ಕಳೆದ ಮಾರ್ಚ್​ನಲ್ಲಿಯೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನಂತರ ನೇರವಾಗಿ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಯಿತು. ಈ ಕುರಿತು ಕೇರಳ ಸರ್ಕಾರದ ಸಚಿವರು ಚಿತ್ರತಂಡದೊಂದಿಗೆ ಮಾತುಕತೆ ನಡೆಸಿದರು. ಅಂತಿಮವಾಗಿ ಚಿತ್ರತಂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಒಪ್ಪಿಕೊಂಡಿತು. ಇದೀಗ ಡಿಸೆಂಬರ್ 2ಕ್ಕೆ ಚಿತ್ರ ತೆರೆಕಾಣಲಿದೆ.

ಮೋಹನ್​ಲಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ಮರಕ್ಕರ್’ ಚಿತ್ರದ ಒಂದನೇ ಟೀಸರ್ ಎಂದು ಚಿತ್ರದ ಟೀಸರ್ ಲಿಂಕ್ ಹಂಚಿಕೊಂಡಿದ್ದಾರೆ. ‘ನೀವೆಲ್ಲರೂ ಯಾವುದಕ್ಕೆ ಕಾಯುತ್ತಿದ್ದಿರೋ ಅದು ಇಲ್ಲಿದೆ’ ಎಂದು ಬರೆದು, ಮೋಹನ್​ಲಾಲ್ ಲಿಂಕ್ ಹಂಚಿಕೊಂಡಿದ್ದಾರೆ.

ಮೋಹನ್​ಲಾಲ್ ಹಂಚಿಕೊಂಡ ಟ್ವೀಟ್:

‘ಮರಕ್ಕರ್’ ಚಿತ್ರದ ನೂತನ ಟೀಸರ್:

ಈಗಾಗಲೇ ಕೇರಳ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಗಳು ‘ಮರಕ್ಕರ್’ ಚಿತ್ರದ ಪಾಲಾಗಿವೆ. ಅದರಲ್ಲೂ 2021ರ ಸಾಲಿನಲ್ಲಿ ‘ಅತ್ಯುತ್ತಮ ಚಿತ್ರ’ ಸೇರಿದಂತೆ ಈ ಚಿತ್ರ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಳೆದ ವರ್ಷವೇ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿತ್ತು. ಅದು ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

‘ಮರಕ್ಕರ್’ ಚಿತ್ರದ ಟ್ರೈಲರ್:

ಆಂಟೋನಿ ಪೆರುಂಬವೂರ್ ನಿರ್ಮಾಣದ ‘ಮರಕ್ಕರ್’ ಚಿತ್ರದಲ್ಲಿ ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಕೀರ್ತಿ ಸುರೇಶ್, ಮಂಜು ವಾರಿಯರ್ ಮತ್ತು ಸಿದ್ದಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:

Marakkar: Lion of the Arabian Sea: ‘ಮರಕ್ಕರ್’ ಚಿತ್ರತಂಡದಿಂದ ಬಹುದೊಡ್ಡ ನಿರ್ಧಾರ; ಮೋಹನ್​ಲಾಲ್ ಅಭಿಮಾನಿಗಳಿಗೆ ಖುಷಿ ಸುದ್ದಿ

ಪುನೀತ್​ ಕನಸು ನನಸು ಮಾಡಲು ಮುಂದಾದ ಅಶ್ವಿನಿ; ಮಹತ್ವದ ಘೋಷಣೆ ಮಾಡಿದ ಅಪ್ಪು ಪತ್ನಿ

Published On - 9:16 am, Thu, 25 November 21

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?