Marakkar: Lion of the Arabian Sea: ‘ಮರಕ್ಕರ್’ ಚಿತ್ರತಂಡದಿಂದ ಬಹುದೊಡ್ಡ ನಿರ್ಧಾರ; ಮೋಹನ್​ಲಾಲ್ ಅಭಿಮಾನಿಗಳಿಗೆ ಖುಷಿ ಸುದ್ದಿ

Mohanlal: ಮೋಹನ್​ಲಾಲ್ ನಟನೆಯ ‘ಮರಕ್ಕರ್: ಅರಬ್ಬಿ ಕಡಲಿಂಟೆ ಸಿಂಹಮ್’ ಚಿತ್ರವು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ. ಈ ಹಿಂದೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು.

Marakkar: Lion of the Arabian Sea: ‘ಮರಕ್ಕರ್’ ಚಿತ್ರತಂಡದಿಂದ ಬಹುದೊಡ್ಡ ನಿರ್ಧಾರ; ಮೋಹನ್​ಲಾಲ್ ಅಭಿಮಾನಿಗಳಿಗೆ ಖುಷಿ ಸುದ್ದಿ
‘ಮರಕ್ಕರ್: ಅರಬ್ಬಿ ಕಡಲಿಂಟೆ ಸಿಂಹಮ್’ ಚಿತ್ರದಲ್ಲಿ ಮೋಹನ್ ಲಾಲ್
Follow us
TV9 Web
| Updated By: shivaprasad.hs

Updated on:Nov 12, 2021 | 9:31 AM

ಮೋಹನ್​ಲಾಲ್ ನಟನೆಯ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಮರಕ್ಕರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರವು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುವ ಕ್ರಾಂತಿಕಾರಕ  ನಿರ್ಧಾರವನ್ನು ಇತ್ತೀಚೆಗೆ ಕೈಗೊಂಡಿತ್ತು. ಬಹುದೊಡ್ಡ ತಾರಾಗಣದ, ಬಿಗ್ ಬಜೆಟ್ ಚಿತ್ರವಾದ ಇದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದಾಗ ಕೊರೊನಾದಿಂದ ನಲುಗಿದ್ದ ಚಿತ್ರಮಂದಿರಗಳ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಮಾಲಿವುಡ್ ಚಿತ್ರರಂಗಕ್ಕೆ ಭರವಸೆ ತುಂಬುವ ಬೆಳವಣಿಗೆಗಳು ನಡೆದಿದ್ದು, ನೇರವಾಗಿ ಒಟಿಟಿ ಬಿಡುಗಡೆಯಿಂದ ಚಿತ್ರತಂದ ಹಿಂದೆ ಸರಿದೆದೆ. ಇದನ್ನು ಕೇರಳ ಸರ್ಕಾರದ ಸಚಿವ ಸಜಿ ಶೆರಿಯನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಸರ್ಪ್ರೈಸ್ ಕೂಡ ನೀಡಿದ್ದು, ಡಿಸೆಂಬರ್ 2ರಂದು ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಒಟಿಟಿ ಬಿಡುಗಡೆಯ ಸುದ್ದಿ ಕೇಳಿ ಮಂಕಾಗಿದ್ದ ಅಭಿಮಾನಿಗಳಿಗೆ ಹಾಗೂ ಚಿತ್ರಮಂದಿರಗಳಿಗೆ ಏಕಾಏಕಿ ಹುರುಪು ತುಂಬುವ ಕೆಲಸವನ್ನು ಸಚಿವರು ಮಾಡಿದ್ದಾರೆ. ಇದನ್ನು ಚಿತ್ರತಂಡ ಕೂಡ ಸ್ಪಷ್ಟಪಡಿಸಿದೆ.

ಕೇರಳದ ಚಲನಚಿತ್ರ ಅಭಿವೃದ್ಧಿ ಮತ್ತು ಚಲನಚಿತ್ರ ಅಕಾಡೆಮಿ ಸಚಿವ ಸಜಿ ಶೆರಿಯನ್ ‘ಮರಕ್ಕರ್’ ಚಿತ್ರದ ನಿರ್ಮಾಪಕ ಆಂಟೊನಿ ಪೆರುವಾಂಬೂರ್ ಅವರೊಂದಿಗೆ ಮಾತುಕತೆ ನಡೆಸಿ, ನಂತರ ಮಾಹಿತಿ ನೀಡಿದ್ದಾರೆ. ‘‘ಚಲನಚಿತ್ರ ಪ್ರದರ್ಶನಕರು, ವಿತರಕರ ಹಿತದೃಷ್ಟಿಯಿಂದ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಡಿಸೆಂಬರ್ 2ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಬಹುದೊಡ್ಡ ನಿರ್ಧಾರಕ್ಕಾಗಿ ನಿರ್ಮಾಪಕರು ತ್ಯಾಗ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಸಜಿ ತಿಳಿಸಿದ್ದಾರೆ.

ಈ ಹಿಂದೆ ನಿರ್ಮಾಪಕರು, ಆರ್ಥಿಕ ಕಾರಣಗಳಿಂದಾಗಿ, ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಇದು ಇತರ ಚಿತ್ರರಂಗದಲ್ಲೂ ಸಂಚಲನ ಮೂಡಿಸಿತ್ತು. ಕಾರಣ, ಮೋಹನ್​ ಲಾಲ್ ಮಲಯಾಳಂನ ಸ್ಟಾರ್ ನಟ. ಅವರ ಅಭಿನಯದ ಬಿಗ್ ಬಜೆಟ್ ಚಿತ್ರವೊಂದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದಾಗ ಸಹಜವಾಗಿಯೇ ಇತರ ಭಾಷೆಗಳ ನಿರ್ಮಾಪಕರ ನಿರ್ಧಾರದಲ್ಲೂ ಬದಲಾವಣೆಗೆ ನಾಂದಿ ಹಾಡಬಹುದು ಎನ್ನಲಾಗಿತ್ತು. ಆದರೆ ಇದೀಗ ಚಿತ್ರ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ.

ಕೇರಳದಲ್ಲಿ ಚಿತ್ರಮಂದಿರಗಳು ಪ್ರಸ್ತುತ 50 ಪ್ರತಿಶತ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣದಿಂದ ಮರಕ್ಕರ್ ಚಿತ್ರದ ನಿರ್ಮಾಪಕರು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ನಿರ್ಧಾರ ತಳೆದಿದ್ದರು. ಈಗ ಸರ್ಕಾರದ ಮಧ್ಯ ಪ್ರವೇಶದಿಂದ ನಿರ್ಧಾರದಲ್ಲಿ ಬದಲಾವಣೆಯಾಗಿದೆ. ಇದು ಚಿತ್ರಮಂದಿರಗಳ ಭರ್ತಿಯಲ್ಲೂ ಬದಲಾಬವಣೆಗೆ ಕಾರಣವಾಗಬಹುದು, ಸರ್ಕಾರ ಕೊರೊನಾ ನಿಯಮಾವಳಿಗಳನ್ನು ಸಡಿಸಲಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ:

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

Mallika Sherawat: ನಟಿ ಹಾಟ್ ಎಂದು ತೋರಿಸಲು ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯದ ವಿಚಿತ್ರ ಐಡಿಯಾ ಹೇಳಿದ್ದ ನಿರ್ಮಾಪಕ

Published On - 9:31 am, Fri, 12 November 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ