ಪುನೀತ್ ಕನಸು ನನಸು ಮಾಡಲು ಮುಂದಾದ ಅಶ್ವಿನಿ; ಮಹತ್ವದ ಘೋಷಣೆ ಮಾಡಿದ ಅಪ್ಪು ಪತ್ನಿ
ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಮಾಡಿದ್ದಾರೆ. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಇದರ ಟೀಸರ್ ನವೆಂಬರ್ 1ರಂದು ತೆರೆಗೆ ಬರಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು.
ಪುನೀತ್ ರಾಜ್ಕುಮಾರ್ ಅವರು ಅನೇಕ ಕನಸುಗಳನ್ನು ಕಂಡಿದ್ದರು. ಅದೆಲ್ಲವೂ ಪೂರ್ಣಗೊಳ್ಳುವ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದರು. ಈಗ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಹೆಗಲು ಏರಿದೆ. ಪಿಆರ್ಕೆ ಪ್ರೊಡಕ್ಷನ್ ಹೌಸ್ ಸೇರಿ ಎಲ್ಲ ಉದ್ಯಮಗಳನ್ನು ಅವರೇ ನೋಡಿಕೊಳ್ಳಬೇಕಿದೆ. ಈಗ ಅಶ್ವಿನಿ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಹಾಗಾದರೆ ಏನದು ವಿಚಾರ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ. ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದ್ದರು. ಈ ಕಾರಣಕ್ಕೆ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ರಿಲೀಸ್ ಮಾಡುವ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಚಿಂತನೆ ಮಾಡಿದ್ದಾರೆ.
‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು. ಆ ಸಮಯ ಈಗ ಬಂದಿದೆ.
ಘೋಷಣೆ | Announcement@PuneethRajkumar @amoghavarsha @AJANEESHB @PRK_Productions @PRKAudio #mudskipper pic.twitter.com/tpAUO61dR2
— Ashwini Puneeth Rajkumar (@ashwinipuneet) November 24, 2021
ಈ ವಿಚಾರದ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ ಜತೆ ವಿಶಾಲ್ ಚರ್ಚೆ; ಪುನೀತ್ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?
‘ಪುನೀತ್ ವಿದಾಯದ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ’; ಮೊದಲ ಬಾರಿಗೆ ಮೌನ ಮುರಿದ ಅಶ್ವಿನಿ
Published On - 6:45 pm, Wed, 24 November 21