ಪುನೀತ್ ಪ್ರೇರಣೆ, ರಾಜ್ಯದಲ್ಲಿ ದಾಖಲೆಯ ಮಟ್ಟದಲ್ಲಿ ನೇತ್ರದಾನ; ಇದುವರೆಗೆ ನೋಂದಣಿ ಮಾಡಿಸಿದವರು ಎಷ್ಟು? ಇಲ್ಲಿದೆ ಮಾಹಿತಿ
Puneeth Rajkumar: ನಟ ಪುನೀತ್ ರಾಜ್ಕುಮಾರ್ ಪ್ರೇರಣೆಯಿಂದ ರಾಜ್ಯದಲ್ಲಿ ದಾಖಲೆಯ ಮಟ್ಟದಲ್ಲಿ ನೇತ್ರದಾನ ಹೆಚ್ಚಾಗಿದೆ. ಈ ಕುರಿತ ವರದಿ ಇಲ್ಲಿದೆ.
ನಟ ಪುನೀತ್ ರಾಜ್ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದು ನೇತ್ರದಾನ ಮಾಡಿದ್ದರು. ಅವರಿಂದಾಗಿ ನಾಲ್ವರಿಗೆ ದೃಷ್ಟಿ ಬಂದಿತ್ತು. ಪುನೀತ್ ನಡೆ ರಾಜ್ಯದಲ್ಲಿ ಬಹುದೊಡ್ಡ ಪ್ರಭಾವ ಬೀರಿದ್ದು, ಹಲವರು ನೇತ್ರದಾನಕ್ಕೆ ನೋಂದಣಿ ಮಾಡುತ್ತಿದ್ದಾರೆ. ಕೇವಲ ಪುನೀತ್ ಅಭಿಮಾನಿಗಳಲ್ಲದೇ ಇತರರೂ ನೇತ್ರದಾನವನ್ನು ಮಾಡಲು ನೋಂದಣಿ ಮಾಡಿಕೊಳ್ಳುತ್ತಿದ್ದು, ದಾಖಲೆಯ ಮಟ್ಟದಲ್ಲಿ ರಾಜ್ಯದಲ್ಲಿ ನೇತ್ರದಾನದ ಪ್ರಮಾಣ ಹೆಚ್ಚಾಗಿದೆ. ಈ ಕುರಿತು ಅಂಕಿ ಅಂಶಗಳು ಬಿಡುಗಡೆಯಾಗಿದ್ದು, ಅಕ್ಟೋಬರ್ 29ರಿಂದ ಈವರೆಗೆ ಸುಮಾರು 78 ಜನರು ನೇತ್ರದಾನ ಮಾಡಿದ್ದಾರೆ. ಈ ಮೂಲಕ ದೃಷ್ಟಿ ಇಲ್ಲದವರಿಗೆ ಬೆಳಕಾಗಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ರಾಜ್ಯದ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ನೇತ್ರದಾನ ಮಾಡುವುದಾಗಿ ನೋಂದಣಿ ಮಾಡಿಸಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನೇತ್ರದಾನಕ್ಕೆ ಜನರು ಮುಂದಾಗಿದ್ದಾರೆ. ಇದಕ್ಕೆ ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್ ಮೊದಲಾದ ನಟರ ಪ್ರೇರಣೆ ಹೆಚ್ಚಿದೆ ಎಂದು ಇತ್ತೀಚೆಗೆ ಮಿಂಟೋ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದರು.
ರಾಜ್ಯದಲ್ಲಿ ವಿವಿಧ ಭಾಗದಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದ್ದು, ಅಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಅಭಿಮಾನಿಗಳು ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ತಂಡೋಪತಂಡವಾಗಿ ನೇತ್ರದಾನಕ್ಕೆ ಮುಂದಾಗುತ್ತಿರುವುದರಿಂದ ಇದು ಇನ್ನಷ್ಟು ಹೆಚ್ಚು ಜನರಿಗೆ ಪ್ರೇರಣೆ ನೀಡಲಿದ್ದು, ಮುಂದಿನ ದಿನಗಳಲ್ಲಿ ನೇತ್ರದಾನಕ್ಕೆ ಮುಂದಾಗುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ಕಣ್ಣಿನಿಂದ ಇನ್ನೂ ಹತ್ತು ಜನರಿಗೆ ದೃಷ್ಟಿ; ನಾರಾಯಣ ನೇತ್ರಾಲಯ ಮಾಹಿತಿ ನಟ ಪುನೀತ್ ರಾಜ್ಕುಮಾರ್ ಅವರ ನಿಧನದ ನಂತರ ನೇತ್ರದಾನ ಮಾಡಲಾಗಿತ್ತು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಪುನೀತ್ರಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ವೈದ್ಯರು ತಿಳಿಸಿದ್ದರು. ಇದೀಗ ನಾರಾಯಣ ನೇತ್ರಾಲಯವು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪುನೀತ್ ರಾಜ್ ಕುಮಾರ್ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯಾ ಕಾರ್ನಿಯಾ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದು, ಯಶಸ್ವಿಯಾದರೆ 10 ದಿನದಲ್ಲಿ 10 ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ಬರಲಿದೆ. ಸ್ಟೆಮ್ ಸೆಲ್ ಗಳಿಂದ ಸ್ಟೇಮ್ ಸೆಲ್ ಥರಫಿ ನಡೆಸಿದರೆ ಮತ್ತೆ ದೃಷ್ಟಿ ಬರಲಿದ್ದು, ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ.
ಇದನ್ನೂ ಓದಿ:
Rachita Ram: ವೇದಿಕೆ ಮೇಲೆ ಪುನೀತ್ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್ ಈಗ ನೀಡಿದ ಸಮಜಾಯಿಷಿ ಏನು?