Hosuru: ಸ್ಥಳೀಯರ ಚಾಣಕ್ಷತನದಿಂದ ಕಳ್ಳತನ ಮಾಡಲು ಬಂದಿದ್ದ ಮನೆಯಲ್ಲೇ ಕಳ್ಳರು ಲಾಕ್
ಕಳ್ಳತನ ಮಾಡಲು ಬಂದ ಮನೆಯಲ್ಲೇ ಕಳ್ಳರು ಲಾಕ್ ಆಗಿರುವ ಘಟನೆ ಕರ್ನಾಟಕ-ತಮಿಳುನಾಡಿನ ಗಡಿ ಹೊಸೂರಿನಲ್ಲಿ ನಡೆದಿದೆ.
ಹೊಸೂರು: ಮನೆ ಕಳ್ಳತನಕ್ಕೆ ಬಂದ ಕಳ್ಳರು ಮನೆ ದೋಚಿ ಕೈಗೆ ಸಿಗದೆ ಪರಾರಿಯಾಗಿದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಈ ಘಟನೆಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು ಮನೆಯಲ್ಲೇ ಲಾಕ್ ಆಗಿದ್ದಾರೆ. ಹೌದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್ ಎಂಬುವರು ಕರ್ನಾಟಕ-ತಮಿಳುನಾಡಿನ ಗಡಿ ಹೊಸೂರಿನಲ್ಲಿ ವಾಸವಾಗಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ಕುಟುಂಬ ಮನೆಗೆ ಬೀಗ ಹಾಕಿ ಊರಿಗೆ ಹೋಗಿತ್ತು. ಇದನ್ನು ಗಮನಿಸಿದ ಕಳ್ಳರು ಹೊಂಚು ಹಾಕಿ ಮನೆ ಕಳ್ಳತನಕ್ಕೆ ಬಂದಿದ್ದರು.
ಖದೀಮರು ಮನೆಯಲ್ಲಿ ಕಳ್ಳತನ ಮಾಡಲು ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿನ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಆಚೆ ಬಂದು ಕಳ್ಳರಿಗೆ ತಿಳಿಯದಂತೆ ಮನೆಯ ಬಾಗಿಲು ಮತ್ತು ಗ್ರಿಲ್ನ್ನು ಹಾಕಿದ್ದಾರೆ. ನಂತರ ಕಳ್ಳರು ಹೊರಗಡೆ ಹೋಗಲು ಯತ್ನಿಸಿದಾಗ ಸಾದ್ಯವಾಗಿಲ್ಲ. ಹೀಗಾಗಿ ಮನೆಯಲ್ಲೇ ಲಾಕ್ ಆಗಿದ್ದ್ದಾರೆ.
Loading...
Unable to load recommendations.
Follow Us
