CM Siddaramaiah’s brigade: ಸಿದ್ದರಾಮಯ್ಯ ಬ್ರಿಗೇಡ್ ಅನ್ನು ಒಟ್ಟಿಗೆ ನೋಡಿದ್ದೀರಾ? ರಾಜ್ಯಪಾಲರೊಂದಿಗೆ ಇಲ್ಲಿದೆ ಗ್ರೂಪ್ ಫೋಟೋ

Updated on: May 27, 2023 | 2:30 PM

ನೂತನ ಸಚಿವರು ರಾಜ್ಯಪಾಲ, ವಿಧಾನಸಭಾಧ್ಯಕ್ಷ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜೊತೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು.

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಇಂದು ಸೇರಿದ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿದ ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot), ಸ್ಪೀಕರ್ ಯುಟಿ ಖಾದರ್ (UT Khader), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜೊತೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು. ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ 8 ಸಚಿವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಾಸಕರು, ಚಿತ್ರನಟ ಶಿವರಾಜಕುಮಾರ್, ಅವರ ಪತ್ನಿ ಗೀತಾ ಮತ್ತು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳ ಕುಟುಂಬ ಸದಸ್ಯರು, ಬೆಂಬಲಿಗರು, ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ