Udupi News: ಕುಡಿತದ ಚಟ ಅಭ್ಯಾಸವಾದರೆ ಏನೆಲ್ಲ ಆಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ

Udupi News: ಕುಡಿತದ ಚಟ ಅಭ್ಯಾಸವಾದರೆ ಏನೆಲ್ಲ ಆಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ

ಕಿರಣ್ ಹನುಮಂತ್​ ಮಾದಾರ್
|

Updated on:Jun 14, 2023 | 2:42 PM

ಉಡುಪಿಯ ಕಾರ್ಕಳ ಬಸ್ ನಿಲ್ದಾಣದಲ್ಲಿ ಕುಡುಕನೊಬ್ಬ ಮದ್ಯವನ್ನ ಸೇವಿಸಿ, ಬಿದ್ದು ಕೆಸರಲ್ಲಿ ಹೊರಳಾಡಿದ ದೃಶ್ಯ ಮುಂಗಾರು ಮಳೆಗೆ ಸಖತ್ ಮನರಂಜನೆಯೊಂದಿಗೆ ವೈರಲ್ ಆಗುತ್ತಿದೆ.

ಉಡುಪಿ: ಕುಡಿತದ ಅಭ್ಯಾಸ, ಚಟವಾದರೆ ಏನೆಲ್ಲ ಅನಾಹುತ ಆಗಿ, ಮರ್ಯಾದೆ ಸಾರ್ವಜನಿಕ ಎದುರಿಗೆ ಹರಾಜು ಆಗುತ್ತದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಉಡುಪಿ(Udupi)ಯ ಕಾರ್ಕಳ ಬಸ್ ನಿಲ್ದಾಣದಲ್ಲಿ ಕುಡುಕನೊಬ್ಬ ಮದ್ಯವನ್ನ ಸೇವಿಸಿ, ಬಿದ್ದು ಕೆಸರಲ್ಲಿ ಹೊರಳಾಡಿದ ದೃಶ್ಯ ಮುಂಗಾರು ಮಳೆಗೆ ಸಖತ್ ಮನರಂಜನೆಯೊಂದಿಗೆ ವೈರಲ್ ಆಗುತ್ತಿದೆ. ಹೌದು ಕುಡಿದು ತೂರಾಡುತ್ತಾ ರಸ್ತೆ ಹೊಂಡಕ್ಕೆ ಬಿದ್ದ ಆತ, ಕೆಸರಲ್ಲಿ ಅಕ್ಷರಶಃ ಯೋಗಾಸನ ಮಾಡುತ್ತಿರುವಂತಿದೆ. ಈ ದೃಶ್ಯಕ್ಕೆ ಯಕ್ಷಗಾನ ಶೈಲಿಯ ಹಿನ್ನೆಲೆ ಹಾಡು ಅಳವಡಿಸಿ ಶೇರ್ ಮಾಡುತ್ತಿದ್ದು, ನೋಡುಗರು ತುಂಬ ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jun 14, 2023 02:42 PM