ರಾಮನಗರ: ನಗರವನ್ನು ಕ್ಲೀನ್ ಮಾಡ್ತೀವಿ, ಪೌರುಷ ತೋರಿಸ್ತೀವಿ ಅಂತ ಹೇಳಿದವರು ಎಲ್ಲಿದ್ದಾರೆ ಎಂದರು ಸಂಸದ ಡಿಕೆ ಸುರೇಶ್
ರಾಮನಗರದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತಾಡುವಾಗ ಪಟ್ಟಣದಲ್ಲಿ ಮಳೆಯಿಂದಾಗಿ ಜನರು ಬೀದಿಗೆ ಬರುವಂತಾಗಿದ್ದರೂ ಗಂಡಸ್ತನ ತೋರಿಸುತ್ತೇನೆ ಅಂತ ಹೇಳಿದವರು ಪತ್ತೆಯಿಲ್ಲ ಎಂದು ವ್ಯಂಗ್ಯವಾಡಿದರು.
ರಾಮನಗರ: ಸಂಸದ ಡಿಕೆ ಸುರೇಶ್ (DK Suresh) ಮತ್ತು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಕೆಲ ತಿಂಗಳ ಹಿಂದೆ ರಾಮನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ತೋಳೇರಿಸಿಕೊಂಡು ಹೋಗಿದ್ದು ನಾವು ನೀವೆಲ್ಲ ಮರೆತಿರಬಹುದು. ಆದರೆ ಸಂಸದರು ಮರೆತಿಲ್ಲ. ರಾಮನಗರದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತಾಡುವಾಗ ಪಟ್ಟಣದಲ್ಲಿ ಮಳೆಯಿಂದಾಗಿ ಜನರು ಬೀದಿಗೆ ಬರುವಂತಾಗಿದ್ದರೂ ಗಂಡಸ್ತನ ತೋರಿಸುತ್ತೇನೆ ಅಂತ ಹೇಳಿದವರು ಪತ್ತೆಯಿಲ್ಲ ಎಂದು ವ್ಯಂಗ್ಯವಾಡಿದರು.
Published on: Aug 30, 2022 04:16 PM