ನಿರ್ಮಲಾ ಸೀತಾರಾಮನ್​ರನ್ನು ಕರ್ನಾಟಕದಿಂದ ಕಳಿಸಿದರೂ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ: ಪ್ರಿಯಾಂಕ್ ಖರ್ಗೆ

|

Updated on: Feb 01, 2024 | 1:34 PM

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು, ಅದರೆ ಅದು ಸಾಧ್ಯವಾಗಿಲ್ಲ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕಳೆದ 50 ವರ್ಷಗಳಲ್ಲಿ ಅತಿಹೆಚ್ಚು ಅಂತ ಹೇಳಲಾಗಿದೆ, ಯುದ್ಧಗ್ರಸ್ಥ ಇಸ್ರೇಲ್ ಗೆ ಉದ್ಯೋಗ ಅರಸಿಕೊಂಡು ನಮ್ಮ ದೇಶದ 10,000 ಯುವಕರು ಹೋಗುತ್ತಿದ್ದಾರೆಂದರೆ ನಿರುದ್ಯೋಗ ಸಮಸ್ಯೆ ಎಷ್ಟು ಗಂಭೀರವಾಗಿದೆ ಅನ್ನೋದು ಗೊತ್ತಾಗುತ್ತದೆ ಎಂದು ಖರ್ಗೆ ಹೇಳಿದರು.

ಬೆಂಗಳೂರು: ಸಂಪುಟ ಸಭೆಯಲ್ಲಿ ಭಾಗಿಯಾಗಲು ವಿಧಾನ ಸೌಧಕ್ಕೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ನೂತನ ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ 2024 (Union Budget 2024) ಕುರಿತು ಪ್ರತಿಕ್ರಿಯೆ ನೀಡಿದರು. ಕೇಂದ್ರದ ಬಜೆಟ್ ಮೇಲೆ ತಮಗೆ ಯಾವುದೇ ನಿರೀಕ್ಷೆ ಇಲ್ಲವೆಂದ ಅವರು ಕಳೆದ 10 ವರ್ಷಗಳಿಂದ ಕನ್ನಡಿಗರಿಗೆ ಕೇವಲ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು, ಅದರೆ ಅದು ಸಾಧ್ಯವಾಗಿಲ್ಲ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕಳೆದ 50 ವರ್ಷಗಳಲ್ಲಿ ಅತಿಹೆಚ್ಚು ಅಂತ ಹೇಳಲಾಗಿದೆ, ಯುದ್ಧಗ್ರಸ್ಥ ಇಸ್ರೇಲ್ ಗೆ ಉದ್ಯೋಗ ಅರಸಿಕೊಂಡು ನಮ್ಮ ದೇಶದ 10,000 ಯುವಕರು ಹೋಗುತ್ತಿದ್ದಾರೆಂದರೆ ನಿರುದ್ಯೋಗ ಸಮಸ್ಯೆ ಎಷ್ಟು ಗಂಭೀರವಾಗಿದೆ ಅನ್ನೋದು ಗೊತ್ತಾಗುತ್ತದೆ. ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುತ್ತದೆ, ರೈತರ ಆದಾಯ ದುಪ್ಪಟ್ಟು ಮಾಡೋದಾಗಿ ಹೇಳುತ್ತದೆ, ವಿದೇಶಿ ಬಂಡವಾಳ ಹೆಚ್ಚಿಸುವ ಬಗ್ಗೆ ಚರ್ಚೆಯಾಗುತ್ತದೆ, ಆದರೆ ವಾಸ್ತವದಲ್ಲಿ ಯಾವ ಯೋಜನೆಯೂ ಕರ್ನಾಟಕದಲ್ಲಿ ಜಾರಿಗೊಳ್ಳಲ್ಲ. ಕರ್ನಾಟಕದಿಂದಲೇ ರಾಜ್ಯಸಭೆಗೆ ಹೋಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಯಾದರೂ ಏನು ಅಂತ ಯೋಚಿಸಬೇಕಾದ ಅವಶ್ಯಕತೆಯಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ