ಹಸಿದ ಹೊಟ್ಟೆಯಲ್ಲಿ ಕಾಡಿಂದ ರೋಡಿಗೆ ಬಂದ ಸಲಗನಿಗೆ ತನಗೆ ಬೇಕಾದ ತರಕಾರಿ ಟ್ರಕ್ ಗಳಲ್ಲಿ ಸಿಗಲಿಲ್ಲ!
ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಸಲಗ ತಮ್ಮಲ್ಲಿಗೆ ಬರೋದನ್ನು ನೋಡಿ ಟ್ರಕ್ ಗಳಲ್ಲಿದ್ದ ಜನ ಗಾಬರಿ, ಭೀತಿಗೊಳಗಾಗಲ್ಲ, ವಾಹನಗಳನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿ ಅವನಿಗೆ ದಾರಿ ಮಾಡಿಕೊಡುತ್ತಾರೆ. ಪ್ರಾಯಶಃ ಇಂಥದ್ದು ಆಗಾಗ ನಡೆಯುತ್ತಿರುತ್ತೆ.
ಚಾಮರಾಜನಗರ: ಹಸಿದಿರುವ ಗಜರಾಜನಿಗೆ (wild tusker) ಆಹಾರ ಬೇಕಿದೆ. ಅರಣ್ಯಪ್ರದೇಶಗಳಲ್ಲಿ ಕಾಡಾನೆಗಳಿಗೆ ಆಹಾರದ ಕೊರೆತೆಯಾಗಿದೆ ಅಂತ ಭಾವಿಸಬೇಡಿ. ಆದರೆ, ತಮಿಳುನಾಡಿನ ಗೇರುಮಾಳ ರಸ್ತೆಯಲ್ಲಿ (Gerumala road) ಕಾಡಿನಿಂದ ರೋಡಿಗೆ ಬಂದಿರುವ ಒಂಟಿ ಸಲಗನಿಗೆ ತಾಜಾ ತರಕಾರಿ (fresh vegetables) ಬೇಕಾಗಿದೆ. ತರಕಾರಿ ವ್ಯಾಪಾರಸ್ಥರು ಕಾಯಿಪಲ್ಲೆಗಳ ಮೂಟೆಗಳನ್ನು ಇದೇ ರಸ್ತೆಯ ಮೂಲಕ ವಾಹನಗಳಲ್ಲಿ ಸಾಗಿಸುವುದು ಸಲಗಕ್ಕೆ ಗೊತ್ತಿದ್ದಂತಿದೆ. ಹಾಗಾಗೇ, ಬೆಳಗಿನ ಸಮಯದಲ್ಲಿ ತರಕಾರಿ ವಾಹನಗಳನ್ನು ಅರಸಿಕೊಂಡು ರಸ್ತೆಗೆ ಬಂದಿದ್ದಾನೆ. ರಸ್ತೆಯಲ್ಲಿ ಮಿನಿಟ್ರಕ್ ಗಳೇ ಹೆಚ್ಚು ಕಾಣಿಸುತ್ತಿವೆ. ಆನೆ ತನ್ನ ಘನಗಾಂಭೀರ್ಯ ನಡಿಗೆಯಿಂದ ಟ್ರಕ್ ಗಳ ಬಳಿಗೆ ಬಂದು ಮೂಸುವುದನ್ನು ನೋಡಬಹುದು. ಅವನಿಗೆ ಇಷ್ಟವಾಗುವ ತರಕಾರಿ ಸಿಗುತ್ತಿಲ್ಲ, ಹಾಗಾಗೇ, ಎಲ್ಲ ಟ್ರಕ್ ಗಳ ಬಳಿ ಬಂದು ಪರಿಶೀಲನೆ ನಡೆಸುತ್ತಾನೆ. ಅಷ್ಟೆಲ್ಲ ಹುಡುಕಾಡಿ ತಡಕಾಡಿದರೂ ಅವನಿಗೆ ಬೇಕಾದ ಕಾಯಿಪಲ್ಲೆ ಸಿಗಲ್ಲ. ಹಾಗಂತ ಗಜರಾಜನಿಗೆ ಸಿಟ್ಟೇನೂ ಬರಲ್ಲ. ತನ್ನ ಪಾಡಿಗೆ ತಾನು ನಡೆದು ಹೋಗುತ್ತಾನೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಸಲಗ ತಮ್ಮಲ್ಲಿಗೆ ಬರೋದನ್ನು ನೋಡಿ ಟ್ರಕ್ ಗಳಲ್ಲಿದ್ದ ಜನ ಗಾಬರಿ, ಭೀತಿಗೊಳಗಾಗಲ್ಲ, ವಾಹನಗಳನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿ ಅವನಿಗೆ ದಾರಿ ಮಾಡಿಕೊಡುತ್ತಾರೆ. ಪ್ರಾಯಶಃ ಇಂಥದ್ದು ಆಗಾಗ ನಡೆಯುತ್ತಿರುತ್ತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ