ಚಿಕ್ಕಮಗಳೂರು: ವಸತಿ ಶಾಲೆಯಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು; ಮುಂಜಾಗ್ರತಾ ಕ್ರಮವಾಗಿ 9 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ

ಹಾಸನ ಜಿಲ್ಲೆಯ ಜನರನ್ನ ನಿದ್ದೆಗೆಡಿಸಿದ್ದ ಬೀಟಮ್ಮ ಗ್ಯಾಂಗ್ ಕಾಫಿನಾಡು ಚಿಕ್ಕಮಗಳೂರಿಗೆ ಎಂಟ್ರಿಯಾಗಿದೆ. ತನ್ನ 30 ಸದಸ್ಯರ ತಂಡದೊಂದಿಗೆ ಕಾಫಿನಾಡಿಗೆ ಎಂಟ್ರಿಯಾಗಿರುವ ಕಾಡಾನೆಗಳ ಗ್ಯಾಂಗ್​, ವಸತಿ ಶಾಲೆಗೆ ಎಂಟ್ರಿ ಕೊಟ್ಟು ಆತಂಕ ಸೃಷ್ಟಿ ಮಾಡಿದ್ದಾಳೆ. ಅಷ್ಟಕ್ಕೂ ಈ ಬೀಟಮ್ಮ ಯಾರು?, ಈ ಸ್ಟೋರಿ ಓದಿ.

ಚಿಕ್ಕಮಗಳೂರು: ವಸತಿ ಶಾಲೆಯಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು; ಮುಂಜಾಗ್ರತಾ ಕ್ರಮವಾಗಿ 9 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ
ಚಿಕ್ಕಮಗಳೂರಿಗೆ ಕಾಡಾನೆಗಳ ಹಿಂಡು ಎಂಟ್ರಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 29, 2024 | 6:31 PM

ಚಿಕ್ಕಮಗಳೂರು, ಜ.29: ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ 30 ಕಾಡಾನೆಗಳಿರುವ(Wild elephant) ಬೀಟಮ್ಮ ಗ್ಯಾಂಗ್ ಬೀಡು ಬಿಟ್ಟಿದ್ದು, ವಸತಿ ಶಾಲೆಯಲ್ಲಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಆತಂಕಗೊಂಡಿದ್ದು, ವಸತಿ ಶಾಲೆಯ ಹೊರಗೆ ಪೋಷಕರು ಕಂಗಾಲಾಗಿ ಹೋಗಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬೀಟಮ್ಮ ಗ್ಯಾಂಗ್ ನೋಡಿ ಶಾಕ್ ಆಗಿದ್ದಾರೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.

ನಾಳೆವರೆಗೂ ನಿಷೇಧಾಜ್ಞೆ ಜಾರಿ ಮಾಡಿರುವ ಚಿಕ್ಕಮಗಳೂರು ಜಿಲ್ಲಾಡಳಿತ

ಇದೀಗ ಕುಮ್ಕಿ ಆನೆಗಳನ್ನು ಬಳಸಿ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಲಿರುವ ಹಿನ್ನಲೆ ನಾಳೆ ವರೆಗೂ ಆ್ಯಂಬರ್ ವ್ಯಾಲಿ ಶಾಲೆ ಸುತ್ತಮುತ್ತಲಿನ ಮೂಗ್ತಿಹಳ್ಳಿ, ಕದ್ರಿಮಿದ್ರಿ, ರಾಂಪುರ, ನಲ್ಲೂರು ಸೇರಿದಂತೆ 9 ಗ್ರಾಮಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಬೀಟಮ್ಮ ಗ್ಯಾಂಗ್ ಕಾಡಿಗಟ್ಟುವ ಕಾರ್ಯಾಚರಣೆಯನ್ನು ದುಬಾರೆ, ನಾಗರಹೊಳೆಯಿಂದ ಅರಣ್ಯ ಇಲಾಖೆ ಆರಂಭಿಸಲಿದೆ.

ಇದನ್ನೂ ಓದಿ:ಚಿಕ್ಕಮಗಳೂರಿಗೆ ಎಂಟ್ರಿಕೊಟ್ಟ 30 ಕಾಡಾನೆಗಳ ಹಿಂಡು; ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

ಆ್ಯಂಬರ್ ವ್ಯಾಲಿ ವಸತಿ ಶಾಲೆಯ ಸುತ್ತಲೂ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಪಗಾವಲಿದ್ದಾರೆ. 30 ಕಾಡಾನೆಗಳ ತಂಡದಲ್ಲಿ ಐದಾರು ಮರಿಗಳು ಇದ್ದು, ಆನೆ ಓಡಿಸೋದಕ್ಕೆ ಅರಣ್ಯ ಇಲಾಖೆ ಕೂಡ ಹಿಂದೇಟು ಹಾಕುತ್ತಿದೆ. ಮರಿಗಳಿರೋದ್ರಿಂದ ಆನೆಗಳು ಗಾಬರಿಯಾಗಿ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾದರೆ ದೊಡ್ಡ ಅನಾಹುತವಾಗುತ್ತೆಂದು ಅಧಿಕಾರಿಗಳು ಕೂಡ ಸಂಜೆಯಾಗೋದನ್ನೆ ಕಾಯುತ್ತಿದ್ದಾರೆ. ಸಂಜೆ ಬಳಿಕ ಆನೆ ಹೋಗುವ ದಾರಿ ಬಿಟ್ಟು ಉಳಿದ ಕಡೆ ಬಂದ್ ಮಾಡಿ ಪಟಾಕಿ ಸಿಡಿಸೋದಕ್ಕೆ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಆದರೆ, ಬಿಸಿಲಿನ ಝಳಕ್ಕೆ ಆ್ಯಂಬರ್ ವ್ಯಾಲಿ ಖಾಸಗಿ ಒಳಭಾಗದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು ಯಾವ ಕಡೆಯೂ ಕದಲುತ್ತಿಲ್ಲ. ಮರದ ಕೆಳಗೆ ನಿಂತು ಕಾಲ ಕಳೆಯುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ