ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಸಾವಿರಾರು ಮುಸ್ಲಿಮರಿಂದ ಬೃಹತ್ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ

Edited By:

Updated on: Mar 04, 2026 | 8:24 PM

ಬಸವಕಲ್ಯಾಣದಲ್ಲಿ ಮಾರ್ಚ್ 03ರ ತಡರಾತ್ರಿ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಶಗೊಂಡ ಸಾವಿರಾರು ಮುಸ್ಲಿಂ ಸಮುದಾಯದ ಜನರು ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದು, ಮೌಲ್ವಿಗಳ ಮೇಲೆ ಹಲ್ಲೆ ಮಾಡಿದ ಹಿಂದೂ ಯುವಕರನ್ನು ನಮ್ಮ ವಶಕ್ಕೆ ಕೊಡುವಂತೆ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಗದ್ದಲ ಗಲಾಟೆ ಮಾಡಬೇಡಿ ಎಂದು ಪೊಲೀಸರು ಮೈಕ್​​ನಲ್ಲಿ ಅನೌನ್ಸ್ ಮಾಡಿದರೂ ಸಹ ಕ್ಯಾರೇ ಎನ್ನದೇ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದ್ದಾರೆ. ಬಸವಕಲ್ಯಾಣ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಬೀದರ್ (ಮಾರ್ಚ್ 04): ಜಿಲ್ಲೆಯ ಬಸವಕಲ್ಯಾಣದಲ್ಲಿ (basavakalyana) ಮಾರ್ಚ್ 03ರ ತಡರಾತ್ರಿ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಶಗೊಂಡ ಸಾವಿರಾರು ಮುಸ್ಲಿಂ ಸಮುದಾಯದ ಜನರು ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಮುಂದೆ ಬೃಹತ್ ಪ್ರತಿಭಟನೆ (Muslims Protest) ನಡೆಸಿದ್ದು, ಮೌಲ್ವಿಗಳ ಮೇಲೆ ಹಲ್ಲೆ ಮಾಡಿದ ಹಿಂದೂ ಯುವಕರನ್ನು ನಮ್ಮ ವಶಕ್ಕೆ ಕೊಡುವಂತೆ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಗದ್ದಲ ಗಲಾಟೆ ಮಾಡಬೇಡಿ ಎಂದು ಪೊಲೀಸರು ಮೈಕ್​​ನಲ್ಲಿ ಅನೌನ್ಸ್ ಮಾಡಿದರೂ ಸಹ ಕ್ಯಾರೇ ಎನ್ನದೇ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದ್ದಾರೆ.

ಮಾಹಿತಿಯ ಪ್ರಕಾರ, ಕೆಲವು ಹಿಂದೂ ಯುವಕರು ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಚಾರ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಿಂದ ಕೆರಳಿದ ಮುಸ್ಲಿಂ ಸಮುದಾಯದ ಸಾವಿರಾರು ಯುವಕರು ಮತ್ತು ಮುಖಂಡರು ನಗರದ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆಯತ್ತ ಧಾವಿಸಿದ್ದಾರೆ. ‘ಹಲ್ಲೆ ನಡೆಸಿದವರ ವಿರುದ್ಧ ಎಫ್​​​ಐಆರ್ ದಾಖಲಾಗಬೇಕು. ಇಲ್ಲ ಅವರನ್ನು ನಮ್ಮ ವಶಕ್ಕೆ ವಶಕ್ಕೆ ನೀಡಬೇಕು’ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಠಾಣೆಯ ಮುಂಭಾಗದಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದಾರೆ.  ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಮುಸ್ಲಿಮರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಇನ್ನು ಏಕಾಏಕಿ ಪ್ರತಿಭಟನೆ ಮಾಡಿದ್ದವರ ಪೈಕಿ  49 ಮುಸ್ಲಿಮರ ವಿರುದ್ಧವೂ ಸಹ ಪ್ರಕರಣ ದಾಖಲಲಾಗಿದೆ. ಈ ಪ್ರತಿಭಟನೆ ಹಿನ್ನೆಲೆ ಬಸವಕಲ್ಯಾಣ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 04, 2026 08:21 PM
Follow Us