ಮುಂಬೈನ ವಿಲೇ ಪಾರ್ಲೆಯಲ್ಲಿ ದಿಗಂಬರ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ

Updated on: Apr 19, 2025 | 5:11 PM

ಮುಂಬೈನ ವಿಲೇ ಪಾರ್ಲೆಯಲ್ಲಿರುವ 90 ವರ್ಷ ಹಳೆಯ ದಿಗಂಬರ ಜೈನ ದೇವಾಲಯವನ್ನು ಧ್ವಂಸ ಮಾಡಿದ್ದಕ್ಕಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಿರುದ್ಧ ಸಾವಿರಾರು ಜೈನರು ಪ್ರತಿಭಟನೆ ನಡೆಸಿದರು. ಬಿಎಂಸಿಯ ಕಚೇರಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಆ ದೇವಾಲಯದ ಪುನರ್ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಜೈನ ಸಮುದಾಯವು ಬಿಎಂಸಿಯ ಕೆ/ಪೂರ್ವ ವಾರ್ಡ್ ವಿಭಾಗದ ವಾರ್ಡ್ ಅಧಿಕಾರಿ ವನಂತ್ ಘಾಡ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಕೆಡವಲಾದ ದೇವಾಲಯವನ್ನು ಅದು ಇದ್ದ ಸ್ಥಳದಲ್ಲಿಯೇ ಪುನರ್ನಿರ್ಮಿಸಬೇಕೆಂದು ಆಗ್ರಹಿಸಿದರು.

ಮುಂಬೈ, ಏಪ್ರಿಲ್ 19: ಮಹಾರಾಷ್ಟ್ರದಲ್ಲಿ 90 ವರ್ಷ ಹಳೆಯ ದಿಗಂಬರ ಜೈನ ದೇವಾಲಯವನ್ನು (Jain Temple) ಧ್ವಂಸ ಮಾಡಿದ್ದಕ್ಕಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಿರುದ್ಧ ಇಂದು ಮುಂಬೈನ ವಿಲೇ ಪಾರ್ಲೆಯಲ್ಲಿ ಸಾವಿರಾರು ಜೈನರು ಪ್ರತಿಭಟನೆ ನಡೆಸಿದ್ದಾರೆ. ಜೈನ ಸಮುದಾಯವು ಬಿಎಂಸಿಯ ಕೆ/ಪೂರ್ವ ವಾರ್ಡ್ ವಿಭಾಗದ ವಾರ್ಡ್ ಅಧಿಕಾರಿ ವನಂತ್ ಘಾಡ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಕೆಡವಲಾದ ದೇವಾಲಯವನ್ನು ಅದು ಇದ್ದ ಸ್ಥಳದಲ್ಲಿಯೇ ಪುನರ್ನಿರ್ಮಿಸಬೇಕೆಂದು ಆಗ್ರಹಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 19, 2025 05:11 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More