ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಆಸ್ತಿ ವಿಚಾರವಾಗಿ ಹಾಸನದ ದೇವರಾಜ್ ಹಾಗೂ ಯಶ್ ತಾಯಿ ಪುಷ್ಪ ಅರುಣ್ಕುಮಾರ್ ನಡುವೆ ವಿವಾದ ಏರ್ಪಟ್ಟಿದೆ. ಅವರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದೆ. ಆ ಬಗ್ಗೆ ದೇವರಾಜ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಹಾಸನದ ದೇವರಾಜ್ ಹಾಗೂ ಯಶ್ ತಾಯಿ (Yash Mother) ಪುಷ್ಪ ಅರುಣ್ಕುಮಾರ್ ನಡುವೆ ಆಸ್ತಿ ವಿಚಾರವಾಗಿ ವಿವಾದ ಏರ್ಪಟ್ಟಿದೆ. ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದೆ. ಆ ಬಗ್ಗೆ ದೇವರಾಜ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪುಷ್ಪಾ (Pushpa Arunkumar) ಮೇಡಂ ಹಾಗೂ ಅವರ ಪಕ್ಕದಲ್ಲಿ ಇರುವ ಒಬ್ಬ ವೆಯ್ಟ್ ಮೆಜರ್ಮೆಂಟ್ ಇನ್ಸ್ಪೆಕ್ಟರ್ ನಟರಾಜು ಹಾಗೂ ದುರ್ಗಾ ಪ್ರಸಾದ್ ಎಂಬುವವರು ನನ್ನ ಮೇಲೆ ಹಾಗೂ ನನ್ನ ಬೆಂಬಲಿಗರ ಮೇಲೆ ದೂರು ಕೊಟ್ಟಿದ್ದರು. ನಾವು ಅವರ ಮೇಲೆ ಬೆದರಿಕೆ ಹಾಕಿದ್ದೇವೆ ಅಂತ ದೂರು ಕೊಟ್ಟಿದ್ದಾರೆ. ನಾನು ಯಾವುದೇ ರೀತಿಯಲ್ಲೂ ಅವರಿಗೆ ಅಡ್ಡಿ ಮಾಡಿಲ್ಲ. ಅವರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಆ ಜಾಗಕ್ಕೆ ಹೋಗಿದ್ದಾರೆ. ಅದನ್ನು ನಾವು ಕೇಳಲು ಹೋದಾಗ ನಟರಾಜು ಹಾಗೂ ದುರ್ಗಾ ಪ್ರಸಾದ್ ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಅವರ ಮೇಲೆ ನಾನು ದೂರು ನೀಡುತ್ತೇನೆ’ ಎಂದು ದೇವರಾಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
