ಧಾರವಾಡದಲ್ಲಿ ಹೆಚ್ ಡಿ ಕುಮಾರಸ್ವಾಮಿ ಗೋ ಬ್ಯಾಕ್ ಅಂತ ಪ್ರತಿಭಟನೆ ನಡೆಸಿದ್ದು ಬಿಜೆಪಿಯ ಮೂವರು ಕಾರ್ಯಕರ್ತರು!

|

Updated on: Feb 14, 2023 | 2:39 PM

ಕುಮಾರಸ್ವಾಮಿಯವರು ಮುಂದೆ ಸಾಗಿದಾಗ, ಬಿಜೆಪಿಯ ಮೂವರು ಕಾರ್ಯಕರ್ತರು ಕುಮಾರಸ್ವಾಮಿ ಗೋ ಬ್ಯಾಕ್ ಗೋ ಬ್ಯಾಕ್ ಅಂತ ಪ್ರತಿಭಟನೆ ನಡೆಸುವುದು ಕಾಣಿಸುತ್ತದೆ.

ಧಾರವಾಡ: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನಡುವೆ ಬ್ರಾಹ್ಮಣ್ಯಕ್ಕೆ ಸಂಬಂಧಿಸಿದ ಜಗಳ ನಿಂತು ಹೋಗಿದೆ. ಆದರೆ ಅವರಿಬ್ಬರ ಅಭಿಮಾನಿಗಳು ಮಾತ್ರ ಅದನ್ನು ಜಾರಿಯಲ್ಲಿಟ್ಟಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ (Pancharatna Yatre) ಇಂದು ಜೋಶಿಯವರ ತವರು ಧಾರವಾಡ ಪ್ರವೇಶಿಸಿದೆ. ಮಾಜಿ ಮುಖ್ಯಮಂತ್ರಿಗಳು ಧಾರವಾಡ ನಗರಕ್ಕೆ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು ಕಾರಲ್ಲೇ ಅವರಿಗೆ ಹೂಮಾಲೆ ಹಾಕಿ ಶಾಲು ಹೊದೆಸಿ ಸತ್ಕರಿಸುತ್ತಾರೆ. ಕುಮಾರಸ್ವಾಮಿಯವರು ಮುಂದೆ ಸಾಗಿದಾಗ, ಬಿಜೆಪಿಯ ಮೂವರು ಕಾರ್ಯಕರ್ತರು ಕುಮಾರಸ್ವಾಮಿ ಗೋ ಬ್ಯಾಕ್ ಗೋ ಬ್ಯಾಕ್ ಅಂತ ಪ್ರತಿಭಟನೆ ನಡೆಸುವುದು ಕಾಣಿಸುತ್ತದೆ. ಈ ಮೂರು ಜನವಾದರೂ ಯಾಕೆ ಪ್ರತಿಭಟಿಸುತ್ತಿದ್ದಾರೋ, ಉಳಿದವರ ಹಾಗೆ ಮನೆಯಲ್ಲಿ ಕೂತಿದ್ದರೆ ಚೆನ್ನಾಗಿರುತಿತ್ತು!

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 14, 2023 02:34 PM