ಕಾರ್ಯಾಚರಣೆ ವೇಳೆ ಮೈ ಮೇಲೆ ಎಗರಿದ ಹುಲಿ, ಹೊರಬಂದವು ರೈತನ ಕಣ್ಣು ಗುಡ್ಡೆಗಳು
ಮೈಸೂರು ಬಳಿ ನಡೆದ ಹುಲಿ ಕಾರ್ಯಾಚರಣೆ ವೇಳೆ ಮಹಾದೇವಗೌಡ ಎಂಬ ರೈತನ ಮೇಲೆ ಹುಲಿ ದಾಳಿ ಮಾಡಿದೆ. ಅರಣ್ಯ ಇಲಾಖೆ ಎಚ್ಚರಿಕೆ ನೀಡದ ಕಾರಣ ಈ ಘಟನೆ ನಡೆದಿದೆ. ಪ್ರಸ್ತುತ ಗಂಭೀರ ಸ್ಥಿತಿಯಲ್ಲಿರುವ ಮಹಾದೇವಗೌಡರಿಗೆ ಮುಖ್ಯಮಂತ್ರಿಗಳು 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕುಟುಂಬದವರು ಹೆಚ್ಚಿನ ರಕ್ಷಣೆ ಮತ್ತು ಉದ್ಯೋಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಮೈಸೂರು, ಅ.17: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮೈಸೂರು ಬಳಿ ನಡೆದ ಹುಲಿ ಕಾರ್ಯಾಚರಣೆ ವೇಳೆ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ತಿ ಬಿಡಿಸುತ್ತಿದ್ದ ಮಹಾದೇವಗೌಡ ಎಂಬುವವರ ಮೇಲೆ ಹುಲಿ ದಾಳಿ ಮಾಡಿದ್ದು, ಅವರ ಮುಖ ಮತ್ತು ಕಣ್ಣುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಪ್ರತ್ಯಕ್ಷದರ್ಶಿಯ ಪ್ರಕಾರ, ಅರಣ್ಯ ಇಲಾಖೆ ಹುಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜನರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ. ಇದರ ಪರಿಣಾಮ ಮಹಾದೇವಗೌಡರಿಗೆ ಹುಲಿ ಇರುವ ಬಗ್ಗೆ ಅರಿವಿಲ್ಲದೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹುಲಿ ದಾಳಿ ಮಾಡಿದೆ, ದಾಳಿಯಿಂದ ಅವರ ಎರಡು ಕಣ್ಣುಗಳು ಮಸುಕಾಗಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ. ವೈದ್ಯರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಗ್ಗೆ ಪರಿಶೀಲನೆ ನಡೆಸಿ, ಗಾಯಗೊಂಡವರಿಗೆ ಕೂಡಲೇ 20 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ನ

