Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ನಿಯತ್ತು ಅಂದ್ರೆ ಇದು, ಮೂರು ಹೊತ್ತು ಊಟ ಹಾಕಿರುವ ಋಣ, ಮಾಲೀಕ ಸತ್ತರೂ ಒಂದಿಂಚೂ ಕದಲದೆ ನಾಯಿ ಕುಳಿತಲ್ಲೇ ಕುಳಿತು ಮೌನವಾಗಿ ರೋದಿಸುತ್ತಿದ್ದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಸಾಕು ನಾಯಿಯೊಂದು ರಾತ್ರಿಯಿಡೀ ತನ್ನ ಮಾಲೀಕನ ದೇಹದ ಪಕ್ಕದಲ್ಲಿ ಕುಳಿತುಕೊಂಡಿತ್ತು ಅಲ್ಲಿಂದ ಹೋಗಲು ನಿರಾಕರಿಸಿತ್ತು.
ಶಿವಪುರಿ, ಜನವರಿ 22: ನಿಯತ್ತು ಅಂದ್ರೆ ಇದು, ಮೂರು ಹೊತ್ತು ಊಟ ಹಾಕಿರುವ ಋಣ, ಮಾಲೀಕ ಸತ್ತರೂ ಒಂದಿಂಚೂ ಕದಲದೆ ನಾಯಿ ಕುಳಿತಲ್ಲೇ ಕುಳಿತು ಮೌನವಾಗಿ ರೋದಿಸುತ್ತಿದ್ದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಸಾಕು ನಾಯಿಯೊಂದು ರಾತ್ರಿಯಿಡೀ ತನ್ನ ಮಾಲೀಕರ ದೇಹದ ಪಕ್ಕದಲ್ಲಿ ಕುಳಿತುಕೊಂಡಿತ್ತು ಅಲ್ಲಿಂದ ಹೋಗಲು ನಿರಾಕರಿಸಿತ್ತು.
ನಂತರ ಬೆಳಗ್ಗೆ, ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಕೂಡ ನಾಯಿ ಶವದ ಪಕ್ಕದಲ್ಲೇ ಇತ್ತು. ನಾಯಿ ವಾಹನವನ್ನು ನೇರವಾಗಿ 4 ಕಿಲೋಮೀಟರ್ ಬೆನ್ನಟ್ಟಿತ್ತು. ಮರಣೋತ್ತರ ಪರೀಕ್ಷೆ ವೇಳೆಯೂ ಕೂಡ ನಾಯಿ ಅಲ್ಲಿಯೇ ಇತ್ತು. ಏನೂ ತಿನ್ನಲಿಲ್ಲ, ಏನೂ ಕುಡಿಯಲೂ ಇಲ್ಲ. ನಿಸ್ವಾರ್ಥ ಪ್ರೀತಿಗೆ ಇದೇ ಸಾಕ್ಷಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 22, 2026 09:47 AM