Video: ಓಲಾ ಸ್ಕೂಟರ್ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ, ಸ್ವಲ್ಪದರಲ್ಲೇ ಪಾರಾದ ತಂದೆ-ಮಗ
ಓಲಾ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೋಲಾಪುರದಲ್ಲಿ ನಡೆದಿದೆ. ತಂದೆ ಮಗನನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಕುಳಿತು ಕಾಯುತ್ತಿರುತ್ತಾರೆ. ಮಗ ಬಂದು ಕುಳಿತ ತಕ್ಷಣ, ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್ನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಎಚ್ಚರಿಕೆ ಕೊಡುತ್ತಾರೆ, ಆಗ ಇಬ್ಬರೂ ಬೈಕ್ನಿಂದ ಇಳಿದು ದೂರ ಓಡುತ್ತಾರೆ.
ಸೋಲಾಪುರ, ಜನವರಿ 22: ಓಲಾ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೋಲಾಪುರದಲ್ಲಿ ನಡೆದಿದೆ. ತಂದೆ ಮಗನನ್ನು ಶಾಲೆಗೆ ಬಿಡಲು ಬೈಕ್ ಮೇಲೆ ಕುಳಿತು ಕಾಯುತ್ತಿರುತ್ತಾರೆ. ಮಗ ಬಂದು ಕುಳಿತ ತಕ್ಷಣ, ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್ನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಎಚ್ಚರಿಕೆ ಕೊಡುತ್ತಾರೆ, ಆಗ ಇಬ್ಬರೂ ಬೈಕ್ನಿಂದ ಇಳಿದು ದೂರ ಓಡುತ್ತಾರೆ. ಬೈಕ್ನಿಂದ ಬರುತ್ತಿದ್ದ ಹೊಗೆ ಮತ್ತಷ್ಟು ಹೆಚ್ಚಾಗುತ್ತದೆ. ಆಗ ಅಲ್ಲಿದ್ದವರು ಬೈಕ್ ಮೇಲೆ ನೀರು ಸುರಿಯುತ್ತಾರೆ. ಇದಿಷ್ಟು ಆ ವಿಡಿಯೋದಲ್ಲಿದೆ. ತಂದೆ ಮಗ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

