ಯತೀಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಿಎಂ ಸಿದ್ದರಾಮಯ್ಯ ಒಂದು ನಿದರ್ಶನ ಮೆರೆಯಲಿ: ಡಾ ಸಿಎನ್ ಅಶ್ವಥ್ ನಾರಾಯಣ

|

Updated on: Nov 16, 2023 | 12:23 PM

ಈ ವಿಡಿಯೋ ತಾವು ಮಾಡಿದ; ವೈಎಸ್​ಟಿ, ಎಟಿಎಂ ಸರ್ಕಾರ, ಟ್ರಾನ್ಸ್​ಫರ್ ಧಂದೆ ಮೊದಲಾದ ಆರೋಪಗಳಿಗೆ ಸಾಕ್ಷಿಯಾಗಿ ಲಭ್ಯವಾಗಿದೆ. ಯಾವುದೇ ಸಂವೈಧಾನಿಕ ಹುದ್ದೆಯಲ್ಲಿರದ ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆಯೂ ಬಿಜೆಪಿ ಪ್ರಶ್ನಿಸಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯ ಅಂಡ್ ಸನ್ ಅಂಡರ್ ಪೈರ್! ಅದು ಸ್ವಾಭಾವಿಕ ಮತ್ತು ಸಹಜ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಮ್ಮ ತಂದೆ ಜೊತೆ ಫೋನಲ್ಲಿ ಮಾತಾಡಿದ್ದು ವೈರಲ್ ಆಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯರ ಆಡಳಿತ, ನಿಲುವು ಮತ್ತು ಧೋರಣೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಯತೀಂದ್ರ-ಸಿದ್ದರಾಮಯ್ಯ ವೈರಲ್ ವಿಡಿಯೋ ಕುರಿತು ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan), ಈ ವಿಡಿಯೋ ತಾವು ಮಾಡಿದ; ವೈಎಸ್ ಟಿ (YST), ಎಟಿಎಂ ಸರ್ಕಾರ, ಟ್ರಾನ್ಸ್ಫರ್ ಧಂದೆ ಮೊದಲಾದ ಆರೋಪಗಳಿಗೆ ಸಾಕ್ಷಿಯಾಗಿ ಲಭ್ಯವಾಗಿದೆ. ಯಾವುದೇ ಸಂವೈಧಾನಿಕ ಹುದ್ದೆಯಲ್ಲಿರದ ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆಯೂ ಬಿಜೆಪಿ ಪ್ರಶ್ನಿಸಿದೆ ಎಂದು ಹೇಳಿದರು. ಅಧಿಕಾರ ದುರ್ಬಳಕೆ ಸ್ಪಷ್ಟವಾಗಿ ಕಾಣುತ್ತಿದೆ, ಹಾಗಾಗಿ ಯತೀಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಹೇಳಿದ ಮಾಜಿ ಸಚಿವ, ಪಾರದರ್ಶಕತೆ, ಅಧಿಕಾರ ದುರುಪಯೋಗ, ಹೊಣೆಗಾರಿಕೆ ಬಗ್ಗೆ ಸುದೀರ್ಘವಾಗಿ ಮಾತಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯತೀಂದ್ರ ಮೇಲೆ ಕ್ರಮ ಜರುಗಿಸಿ ಒಂದು ನಿದರ್ಶನ ಮೆರೆಯಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 16, 2023 12:23 PM