ನಾನು ಮತ್ತು ಯತೀಂದ್ರ ಮಾತಾಡಿದ್ದು ಶಾಲಾಕಟ್ಟಡಗಳ ರಿಪೇರಿಗೆ ಸಿಎಸ್ ಆರ್ ಫಂಡಿಂಗ್ ಬಗ್ಗೆ: ಸಿದ್ದರಾಮಯ್ಯ
ರಾಜಕೀಯ ಬದುಕಿನಲ್ಲಿ ತಾವು ಟ್ರಾನ್ಸ್ ಫರ್ ಧಂದೆ ಅಥವಾ ಭ್ರಷ್ಟಾಚಾರ ನಡೆಸಿದ್ದು ಸಾಬೀತಾದರೆ ರಾಜಕೀಯದಿಂದ ನಿವೃತ್ತನಾಗುವುದಾಗಿ ಸಿದ್ದರಾಮಯ್ಯ ಹೇಳಿದರು. ಯತೀಂದ್ರ 5 ಜನರ ಪ್ರಸ್ತಾಪ ಮಾಡುತ್ತಿದ್ದರಲ್ಲ ಅಂತ ಕೇಳಿದರೆ, ಸಿಡುಕುವ ಮುಖ್ಯಮಂತ್ರಿ 5 ಜನ ಅಂದರೆ ವರ್ಗಾವಣೆಯಾ ಅಥವಾ ಭ್ರಷ್ಟಾಚಾರನಾ ಅಂತ ಅಂತ ಮರುಸವಾಲು ಹಾಕಿದರು.
ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಮತ್ತು ತಮ್ಮ ನಡುವೆ ನಡೆದಿರುವ ಫೋನ್ ಸಂಭಾಷಣೆ ವರ್ಗಾವಣೆಗೆ ಧಂದೆಗೆ ಸಂಬಂಧಿಸಿದ್ದು ಎಂದು ಆರೋಪಿಸಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತಾಡಿದ ಅವರು, ವರ್ಗಾವಣೆ ಧಂದೆ ಆರೋಪವನ್ನು ಅಲ್ಲಗಳೆದು, ಮೈಸೂರು ಜಿಲ್ಲೆಯಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ, ಅದಕ್ಕಾಗಿ ಸಿಎಸ್ ಆರ್ (ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) (CSR-Corporate Social Responsibility) ಹಣ ಬಿಡುಗಡೆ ಮಾಡುವ ಬಗ್ಗೆ ಯತೀಂದ್ರ ಮಾತಾಡಿದ್ದು ಎಂದು ಹೇಳಿದರು. ರಾಜಕೀಯ ಬದುಕಿನಲ್ಲಿ ತಾವು ಟ್ರಾನ್ಸ್ ಫರ್ ಧಂದೆ ಅಥವಾ ಭ್ರಷ್ಟಾಚಾರ ನಡೆಸಿದ್ದು ಸಾಬೀತಾದರೆ ರಾಜಕೀಯದಿಂದ ನಿವೃತ್ತನಾಗುವುದಾಗಿ ಸಿದ್ದರಾಮಯ್ಯ ಹೇಳಿದರು. ಯತೀಂದ್ರ 5 ಜನರ ಪ್ರಸ್ತಾಪ ಮಾಡುತ್ತಿದ್ದರಲ್ಲ ಅಂತ ಕೇಳಿದರೆ, ಸಿಡುಕುವ ಮುಖ್ಯಮಂತ್ರಿ 5 ಜನ ಅಂದರೆ ವರ್ಗಾವಣೆಯಾ ಅಥವಾ ಭ್ರಷ್ಟಾಚಾರನಾ ಅಂತ ಅಂತ ಮರುಸವಾಲು ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ