Vasuki Vaibhav: ವಾಸುಕಿ ವೈಭವ್-ಬೃಂದಾ ವಿಕ್ರಮ್ ಮದುವೆ ವಿಡಿಯೋ; ಇಲ್ಲಿದೆ ತಾಳಿ ಕಟ್ಟಿದ ಖುಷಿಯ ಕ್ಷಣ..
Vasuki Vaibhav Wedding Video: ಬಹುಕಾಲದ ಗೆಳೆತಿ ಬೃಂದಾ ವಿಕ್ರಮ್ ಜೊತೆ ವಾಸುಕಿ ವೈಭವ್ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈ ಸೆಲೆಬ್ರಿಟಿ ವಿವಾಹಕ್ಕೆ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಹಾಜರಿ ಹಾಕಿದ್ದಾರೆ. ವಾಸುಕಿ ವೈಭವ್ ಅವರು ತಾಳಿ ಕಟ್ಟಿದ ಶುಭ ಸಂದರ್ಭದ ವಿಡಿಯೋ ಲಭ್ಯವಾಗಿದೆ. ನವ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸುಕಿ ವೈಭವ್ ಅವರ ಮದುವೆ (Vasuki Vaibhav Marriage) ಇಂದು (ನವೆಂಬರ್ 16) ನೆರವೇರಿದೆ. ಕನ್ನಡ ಚಿತ್ರರಂಗದಲ್ಲಿ ಗೀತ ಸಾಹಿತಿಯಾಗಿ, ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿ ಖ್ಯಾತಿ ಪಡೆದಿರುವ ಅವರು ಬಹುಕಾಲದ ಗೆಳೆತಿ ಬೃಂದಾ ವಿಕ್ರಮ್ (Brunda Vikram) ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈ ಸೆಲೆಬ್ರಿಟಿ ವಿವಾಹಕ್ಕೆ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಹಾಜರಿ ಹಾಕಿದ್ದಾರೆ. ಹಲವು ವರ್ಷಗಳಿಂದ ವಾಸುಕಿ ವೈಭವ್ (Vasuki Vaibhav) ಮತ್ತು ಬೃಂದಾ ವಿಕ್ರಮ್ ಅವರು ಪ್ರೀತಿಸುತ್ತಿದ್ದರು. ಈಗ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಹಸೆಮಣೆ ಏರಿದ ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ವಾಸುಕಿ ವೈಭವ್ ಅವರು ತಾಳಿ ಕಟ್ಟಿದ ಶುಭ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಆ ಖುಷಿಯ ಕ್ಷಣ ಹೇಗಿತ್ತು ನೋಡಿ..
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos