ಇಂಧನ ಬೆಲೆ ಕೈಗೆಟುಕದಷ್ಟು ಮೇಲೇರಿದಾಗ ಹೆಚ್ಚು ಮೈಲೇಜ್ ನೀಡುವ ಬೈಕ್​ಗಳ ಬಗ್ಗೆ ಯೋಚಿಸುವುದು ಬುದ್ಧಿವಂತಿಕೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 08, 2022 | 5:49 PM

ಹಾಗೆ ನೋಡಿದರೆ 100 ಸಿಸಿ ಬೈಕ್ ಗಳು ಲಾಂಚ್ ಆದಾಗ ಆಗಿನ ಹೀರೋ ಹೊಂಡಾ ಬೈಕ್​ಗಳೇ ಮೈಲೇಜ್ ವಿಷಯದಲ್ಲಿ ಮುಂಚೂಣಿಯಲ್ಲಿದ್ದವು. ನಂತರ ದಿನಗಳಲ್ಲಿ ಈ ಕಂಪನಿ ಇಬ್ಭಾಗಗೊಂಡು ಹೀರೊ ಮತ್ತು ಹೊಂಡಾ ಬೇರೆಯಾದವು.

ಪೆಟ್ರೋಲ್ ಬೆಲೆ ಗಗನಕ್ಕೇರಿದಾಗ ಇಂಧನವನ್ನು ನಮ್ಮ ವಾಹನದ ಟ್ಯಾಂಕಿಗೆ ಇಳಿಸುವುದು ಹೊರೆಯಾಗಲಾರಂಭಿಸುತ್ತದೆ ಮಾರಾಯ್ರೇ. ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿ ಬಹಳ ದಿನಗಳಾಯಿತು. ಕೇಂದ್ರವು ಬೆಲೆಯನ್ನು ರೂ. 30 ಕ್ಕಿಂತ ಜಾಸ್ತಿ ಹೆಚ್ಚಿಸಿ ನಂತರ 10 ರೂ. ತಗ್ಗಿಸಿ ನಮ್ಮ ಕಣ್ಣೊರೆಸುವ ಪ್ರಯತ್ನ ಮಾಡಿತು. ಆ ವಿಷಯ ಬಿಡಿ, ಚರ್ಚಿಸಿ ಪ್ರಯೋಜನವಿಲ್ಲ. ಪರಿಸ್ಥಿತಿ ಹೀಗಿರುವಾಗ ವಾಹನಗಳಲ್ಲಿ ನಮ್ಮ ಓಡಾಟವನ್ನು ಮಿತವ್ಯಯಿ ಮಾಡಿಕೊಳ್ಳಲು ನಮ್ಮೆದಿರು ಮೂರು ಆಪ್ಷನ್ಗಳಿವೆ. ಮೊದಲನೆಯದ್ದು ನಮ್ಮ ವಾಹನಗಳನ್ನು (ಕಾರು-ಬೈಕ್-ಸ್ಕೂಟರ್) ಮನೆಯಲ್ಲಿ ಬಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೊರೆ ಹೋಗುವುದು. ಎರಡನೆಯದ್ದು ಮಾರ್ಕೆಟ್ನಲ್ಲಿ ಕ್ರಮೇಣವಾಗಿ ಲಭ್ಯವಾಗುತ್ತಿರುವ ಇಲೆಕ್ಟ್ರಿಕ್ ವಾಹನ ಖರೀದಿಸುವುದು ಮತ್ತು ಮೂರನೇ ಆಪ್ಷನ್ ಅಂದರೆ, ಪೆಟ್ರೋಲ್ ಗೆ ಹಣ ತೆತ್ತರೂ ಜಾಸ್ತಿ ಮೈಲೇಜ್ ನೀಡುವ ವಾಹನಗಳನ್ನು ಖರೀದಿಸುವುದು.

ಹೆಚ್ಚು ಮೈಲೇಜ್ ನೀಡುವ ಕೆಲವು ಬೈಕ್ ಗಳು ನಮ್ಮ ಗಮನಕ್ಕೆ ಬಂದಿವೆ ಕೇವಲ ಅವುಗಳ ಬಗ್ಗೆ ಮಾತ್ರ ನಾವು ಚರ್ಚಿಸುವ. ಬಜಾಜ್ ಮೋಟಾರ್ಸ್ ಕಂಪನಿಯ ಎರಡು ಬೈಕ್​ಗಳು ಭರ್ಜರಿ ಮೈಲೇಜ್ ನೀಡುತ್ತವೆ. ಬಜಾಜ್ ಪ್ಲಾಟಿನ ಒಂದು ಲೀಟರ್ ನಲ್ಲಿ 96 ಕಿಮೀ ಓಡುತ್ತದೆ ಮತ್ತು ಬಜಾಜ್ ಸಿಟಿ 90 ಕಿಮೀ! ಅದ್ಭುತ ತಾನೆ?

ಹಾಗೆ ನೋಡಿದರೆ 100 ಸಿಸಿ ಬೈಕ್ ಗಳು ಲಾಂಚ್ ಆದಾಗ ಆಗಿನ ಹೀರೋ ಹೊಂಡಾ ಬೈಕ್​ಗಳೇ ಮೈಲೇಜ್ ವಿಷಯದಲ್ಲಿ ಮುಂಚೂಣಿಯಲ್ಲಿದ್ದವು. ನಂತರ ದಿನಗಳಲ್ಲಿ ಈ ಕಂಪನಿ ಇಬ್ಭಾಗಗೊಂಡು ಹೀರೊ ಮತ್ತು ಹೊಂಡಾ ಬೇರೆಯಾದವು. ಹೀರೊ ಎಚ್ ಎಫ್ 100 ಈಗಲೂ ಪ್ರತಿ ಲೀಟರ್ ಗೆ 100 ಕಿಮೀ ಕ್ರಮಿಸಿದರೆ ಹೊಂಡಾ ಸಿಡಿ 100 ಬೈಕ್ 74 ಕಿಮೀ ಓಡುತ್ತದೆ.

ಅಂದಹಾಗೆ. ಈ ಬೈಕ್​ಗಳ ಎಕ್ಸ್ ಶೋರೂಮ್ ಬೆಲೆಯನ್ನು ಸಹ ತಿಳಿದುಕೊಂಡು ಬಿಡೋಣ. ಬಜಾಜ್ ಪ್ಲಾಟಿನ ಬೆಲೆ ರೂ. 59,040, ಬಜಾಜ್ ಸಿಟಿ ರೂ. 57,702. ಹೀರೊ ಎಚ್ ಎಫ್ 100 ಬೆಲೆ ರೂ. 53, 696 ಮತ್ತು ಹೊಂಡಾ ಸಿಡಿ 100 ಬೈಕ್ ಬೆಲೆ ರೂ. 66,000.

ಇದನ್ನೂ ಓದಿ:   ಒಡೆಯ ಆಡಿದ ಒಂದೇ ಒಂದು ಪದ ಕೇಳಿ ರೊಚ್ಚಿಗೆದ್ದ ಶ್ವಾನ; ಅಷ್ಟಕ್ಕೂ ಆತ ಹೇಳಿದ್ದೇನು? ಮಜವಾದ ವಿಡಿಯೋ ಇಲ್ಲಿದೆ

Published On - 5:49 pm, Sat, 8 January 22

Follow us on