ಒಡೆಯ ಆಡಿದ ಒಂದೇ ಒಂದು ಪದ ಕೇಳಿ ರೊಚ್ಚಿಗೆದ್ದ ಶ್ವಾನ; ಅಷ್ಟಕ್ಕೂ ಆತ ಹೇಳಿದ್ದೇನು? ಮಜವಾದ ವಿಡಿಯೋ ಇಲ್ಲಿದೆ

ಒಡೆಯ ಆಡಿದ ಒಂದೇ ಒಂದು ಪದ ಕೇಳಿ ರೊಚ್ಚಿಗೆದ್ದ ಶ್ವಾನ; ಅಷ್ಟಕ್ಕೂ ಆತ ಹೇಳಿದ್ದೇನು? ಮಜವಾದ ವಿಡಿಯೋ ಇಲ್ಲಿದೆ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ

Viral Video: ಅಂತರ್ಜಾಲದಲ್ಲಿ ಸಾಕು ಪ್ರಾಣಿಯ ವಿಡಿಯೋಗಳು ಮನಗೆಲ್ಲುತ್ತವೆ. ಕೆಲವು ಮನುಷ್ಯರಂತೆ ಪ್ರಾಣಿಗಳಿಗೂ ವೈದ್ಯರೆಂದರೆ ದೂರ. ಪ್ರಸ್ತುತ ಶ್ವಾನವೊಂದು ಪಶುವೈದ್ಯರ ಹೆಸರು ಕೇಳಿದ ತಕ್ಷಣ ಪ್ರತಿಕ್ರಿಯೆ ನೀಡುವುದು ನೆಟ್ಟಿಗರ ಮನಗೆದ್ದಿದೆ.

TV9kannada Web Team

| Edited By: shivaprasad.hs

Jan 08, 2022 | 2:46 PM


ಅಂತರ್ಜಾಲದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಸಾಕುಪ್ರಾಣಿಯ ವಿಡಿಯೋಗಳು ಜನರ ಮನಗೆಲ್ಲುತ್ತವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಹಲವರಿಗೆ ಪ್ರಾಣಿಗಳೆಂದರೆ ಪ್ರಿಯ. ಅಲ್ಲದೇ ಅವುಗಳ ತುಂಟಾಟ ನೋಡಿ ಖುಷಿಪಡುತ್ತಾರೆ. ಅಂತಹ ಪ್ರಾಣಿಗಳ ತುಂಟಾಟದ ವಿಡಿಯೋಗಳನ್ನು ನೋಡುವಾಗ ತಾವು ಸಾಕಿದ ಪ್ರಾಣಿಗಳೂ ನೆನಪಾಗುವುದುಂಟು. ಒಟ್ಟಿನಲ್ಲಿ ನೋಡಿ ಮನಸ್ಸು ಹಗುರಾಗಲು ವಿವಿಧ ಕಾರಣಗಳು. ಆದ್ದರಿಂದಲೇ ಇಂತಹ ವಿಡಿಯೋಗಳಿಗೆ ಬಹುದೊಡ್ಡ ಪ್ರೇಕ್ಷಕ ವರ್ಗ ಇದೆ. ಇತ್ತೀಚೆಗೆ ಪ್ರಾಣಿ ಪ್ರಿಯರ ಮನಸೆಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಟಿಕ್​ಟಾಕ್​ನಲ್ಲಿ ವೈರಲ್ ಆಗಿದ್ದ ವಿಡಿಯೋ ಈಗ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಶೇರ್ ಆಗುತ್ತಿದೆ. ಪ್ರಸ್ತುತ ರೆಡ್ಡಿಟ್​ನಲ್ಲಿ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದ್ದು, ಜನರ ಮೆಚ್ಚುಗೆ ಪಡೆಯುತ್ತಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎಂಬ ಕುತೂಹಲವೇ? ವಿಷಯ ಇಷ್ಟೇ. ಶ್ವಾನದ ಮಾಲಿಕ ಶೂ ತೆಗೆದುಕೊಂಡು ಅದನ್ನು ಮೊಬೈಲ್​ನಂತೆ ಕಿವಿಗಿಟ್ಟುಕೊಳ್ಳುತ್ತಾನೆ. ಆಗ ಶ್ವಾನ ಸುಮ್ಮನಿರುತ್ತದೆ. ಆದರೆ ನಂತರದಲ್ಲಿ ಆತ ಮಾತನಾಡುತ್ತಾ ‘ಪಶುವೈದ್ಯರ’ (ವೆಟ್) ಹೆಸರು ಹೇಳುತ್ತಾನೆ. ಅದನ್ನು ಕೇಳಿದ ನಾಯಿ ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡಿದೆ. ಅದು ಹೇಗೆ ಪ್ರತಿಕ್ರಿಯೆ ನೀಡಿದೆ? ಮಜವಾದ ವಿಡಿಯೋ ನೋಡಿ.

ವಿಡಿಯೋ ಇಲ್ಲಿದೆ:

ಶ್ವಾನವು ಒಡೆಯನ ಮಾತಿಗೆ ಪ್ರತಿಯಾಗಿ ಕೂಗುತ್ತಾ ಪ್ರತಿಕ್ರಿಯೆ ನೀಡಿದ್ದು ಎಲ್ಲರ ಮನಗೆದ್ದಿದೆ. ಅಲ್ಲದೇ ರೆಡ್ಡಿಟ್​ನಲ್ಲಿ ‘ಶ್ವಾನಕ್ಕೆ ಪಶುವೈದ್ಯರನ್ನು ಕಂಡರೆ ಬಹಳ ಸಿಟ್ಟಿರಬೇಕು’ ಎಂದು ಕ್ಯಾಪ್ಶನ್ ನೀಡಲಾಗಿದೆ. ನೆಟ್ಟಿಗರೂ ಇದಕ್ಕೆ ಬಹಳ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರಂತೂ ‘ಶ್ವಾನವು ಒಡೆಯ ಮೊಬೈಲ್ ಬದಲು ಶೂ ಇಟ್ಟುಕೊಂಡಿದ್ದಾನೆ ಎಂದು ಅವನನ್ನು ಎಚ್ಚರಿಸುತ್ತಿರಬಹುದು’ ಎಂದು ಕಾಲೆಳೆದಿದ್ದಾರೆ. ಮತ್ತೆ ಹಲವರು ಶ್ವಾನದ ಬುದ್ಧಿಮತ್ತೆಗೆ ಶಹಬ್ಬಾಸ್ ಎಂದಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​

ರಶ್ಮಿಕಾ ಮಂದಣ್ಣ ವಿಚಾರದಲ್ಲಿ ‘ಪುಷ್ಪ’ ಚಿತ್ರತಂಡದಿಂದ ದೊಡ್ಡ ಅಚಾತುರ್ಯ; ಹೆಸರನ್ನೇ ಬದಲಿಸಿದ ನಿರ್ದೇಶಕರು

Follow us on

Related Stories

Most Read Stories

Click on your DTH Provider to Add TV9 Kannada