AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದು ಬೆಕ್ಕೋ ಅಥವಾ ನಾಯಿಯೋ? ವಿಡಿಯೋ ಕಂಡು ಗೊಂದಲಕ್ಕೀಡಾದ ನೆಟ್ಟಿಗರು

ವೈರಲ್​ ಆದ ವಿಡಿಯೋವು ವಾಸ್ತವವಾಗಿ ನಾಯಿಯದ್ದಾಗಿದೆ. ಆದರೆ ಅದು ಬೆಕ್ಕಿನಂತೆ ಕಾಣುತ್ತದೆ. ನಾಯಿ ಹೆಚ್ಚು ಎತ್ತರವಾಗಿಯೂ ಇಲ್ಲ, ಮುಖದ ರಚನೆಯೂ ಬೆಕ್ಕಿನಂತಿದೆ. ಈ ಕಾರಣದಿಂದ ವಿಡಿಯೋ ನೋಡಿದ ಜನರು ಬೆಕ್ಕೋ ಅಥವಾ ನಾಯಿಯೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

Viral Video: ಇದು ಬೆಕ್ಕೋ ಅಥವಾ ನಾಯಿಯೋ? ವಿಡಿಯೋ ಕಂಡು ಗೊಂದಲಕ್ಕೀಡಾದ ನೆಟ್ಟಿಗರು
ಬೆಕ್ಕೋ ಅಥವಾ ನಾಯಿಯೋ ?
TV9 Web
| Edited By: |

Updated on:Jan 09, 2022 | 9:19 AM

Share

ಸಾಮಾಜಿಕ ಮಾಧ್ಯಮಗಳು ವಿವಿಧ ರೀತಿಯ ಪ್ರಾಣಿಗಳ ವಿಡಿಯೋಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಕೆಲವೊಮ್ಮೆ ಕುದುರೆ, ಕೆಲವೊಮ್ಮೆ ಆನೆ, ಕೆಲವೊಮ್ಮೆ ಸಿಂಹ ಮತ್ತು ಇನ್ನೂ ಕೆಲವೊಮ್ಮೆ ಹುಲಿ ಇತ್ಯಾದಿಗಳ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತವೆ. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿನ (Social media) ವಿಡಿಯೋಗಳಲ್ಲಿ ನಾಯಿಗಳು (Dog) ಮತ್ತು ಬೆಕ್ಕುಗಳು (Cat) ಸೇರಿವೆ. ಮುಖ್ಯವಾಗಿ ಇವು ಸಾಕುಪ್ರಾಣಿಗಳಾಗಿರುವುದರಿಂದ ಆಗಾಗ್ಗೆ ಕೆಲವರು ವಿಡಿಯೋ ಮಾಡಿ ಹಂಚಿಕೊಳ್ಳುತ್ತಾರೆ. ಕೆಲವು ವಿಡಿಯೋಗಳು ತಮಾಷೆಯಾಗಿದ್ದರೆ, ಮತ್ತೆ ಕೆಲವು ವಿಡಿಯೋಗಳು ಅಚ್ಚರಿ ಹುಟ್ಟಿಸುವಂತಿರುತ್ತದೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಈ ವಿಡಿಯೋ ಕಂಡು ಗೊಂದಲಕ್ಕೀಡಾಗಿದ್ದಾರೆ.

ವೈರಲ್​ ಆದ ವಿಡಿಯೋವು ವಾಸ್ತವವಾಗಿ ನಾಯಿಯದ್ದಾಗಿದೆ. ಆದರೆ ಅದು ಬೆಕ್ಕಿನಂತೆ ಕಾಣುತ್ತದೆ. ನಾಯಿ ಹೆಚ್ಚು ಎತ್ತರವಾಗಿಯೂ ಇಲ್ಲ, ಮುಖದ ರಚನೆಯೂ ಬೆಕ್ಕಿನಂತಿದೆ. ಈ ಕಾರಣದಿಂದ ವಿಡಿಯೋ ನೋಡಿದ ಜನರು ಬೆಕ್ಕೋ ಅಥವಾ ನಾಯಿಯೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಈ ತಿಳಿ ಗೆಂಪು ಬಣ್ಣದ ನಾಯಿ ನೋಡಲು ಬೆಕ್ಕಿನಂತೆ ಕಾಣುತ್ತದೆ.

ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ತಮಾಷೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದಾದ ಟ್ವೀಟರ್​ನಲ್ಲಿ @buitengebieden_ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಇಂದು ಬೆಕ್ಕು ಅಥವಾ ನಾಯಿ? ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ವೈರಲ್​ ಆದ ವಿಡಿಯೋಗೆ ಇದುವರೆಗೆ 2 ಲಕ್ಷದ 14 ಸಾವಿರಕ್ಕೂ ಹೆಚ್ಚು ವಿವ್ಸ್​ ಬಂದಿದ್ದು, 7 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಇದೇ ವೇಳೆ ಹಲವರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ನಾನು ನನ್ನ ಮನಸ್ಸನ್ನು ಬದಲಾಯಿಸುತ್ತಿದ್ದೇನೆ ಇದು ಬೆಕ್ಕು? ಎಂದು ಒಬ್ಬರು ಕಮೆಂಟ್​ ಮಾಡಿದರೆ, ಮತ್ತೊಬ್ಬರು ಇದು ನಾಯಿ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಬೆಕ್ಕು ಅಥವಾ ನಾಯಿ ಎಂಬ ಗೊಂದಲದಲ್ಲಿಯೇ ನೆಟ್ಟಿಗರು ಈ ವಿಡಿಯೋ ವಿಕ್ಷಿಸಿದ್ದಾರೆ.

ಇದನ್ನೂ ಓದಿ: Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

ಕೆಸರಿನಲ್ಲಿ ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ: ವೈರಲ್​ ಆದ ಫೋಟೋಗಳು

Published On - 9:18 am, Sun, 9 January 22

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು