ಹೊಸ ವರ್ಷದ ಪಾರ್ಟಿಗಳಲ್ಲಿ ಬಾಲಿವುಡ್ ಲಾವಣ್ಯವತಿಯರು ಬಗೆಬಗೆಯ ಉಡುಪು ಧರಿಸಿ ಸಖತ್ತಾಗಿ ಮಿಂಚಿದರು!

| Updated By: shivaprasad.hs

Updated on: Jan 02, 2022 | 8:59 AM

ಅನುಷ್ಕಾ ಶರ್ಮ ಮಾಮ್ಸ್ ಜೀನ್ಸ್ ಧರಿಸಿ ರಸ್ತೆ ಮೇಲೆ ಕೆಮೆರಾಗೆ ಫೋಸ್ ನೀಡಿದ್ದಾರೆ. ‘ಶೇರ್ಷಾ’ ಚಿತ್ರದ ಪ್ರಚಂಡ ಯಶಸ್ಸು ಕಿಯಾರಾ ಅಡ್ವಾಣಿಯನ್ನು ಜನಪ್ರಿಯತೆಯಲ್ಲಿ ಮತ್ತೊಂದು ಹಂತ ಮೇಲಕ್ಕೇರಿಸಿದೆ. ಇಲ್ಲಿ ಅವರು ಹಸಿರು ಪ್ರಿಂಟೆಡ್ ಡ್ರೆಸ್​ನಲ್ಲಿ ಗ್ಲಾಮರ್ ಗೊಂಬೆ ಥರ ಕಾಣುತ್ತಿದ್ದಾರೆ.

ಗ್ಲಾಮರ್ ಲೋಕದ ಬೆಡಗಿಯರು ಯಾವುದೇ ಬಗೆಯ ಬಟ್ಟೆ ತೊಟ್ಟರೂ ಮುದ್ದುಮುದ್ದಾಗಿ ಕಾಣುತ್ತಾರೆ. ಅವರೆಲ್ಲ ಸಂದರ್ಭಕ್ಕೆ ಅನುಗುಣವಾಗಿ ಡ್ರೆಸ್ ಧರಿಸುತ್ತಾರೆ. ಹಬ್ಬ-ಹರಿದಿನ, ಪೂಜಾ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಜನರು ತಮ್ಮನ್ನು ಆರಾಧಿಸುಂಥ ಭಾವನೆ ಹುಟ್ಟಿಸುವ ಸುಂದರಿಗಳಾಗಿ ಕಂಡರೆ, ಪಾರ್ಟಿಗಳಲ್ಲಿ ಟ್ರೆಂಡಿ ಉಡುಗೆ ತೊಟ್ಟು ಮಿಂಚುತ್ತಿರುತ್ತಾರೆ. ಈ ವಿಡಿಯೋ ಹಲವು ಹಾಟ್ ಬೇಬ್ ಗಳಿದ್ದಾರೆ. ಎಲ್ಲರೂ ಮಾಡರ್ನ್ ಔಟ್ಫಿಟ್ ಗಳಲ್ಲಿ ಕಂಗೊಳಿಸುತ್ತಿದ್ದಾರೆ. ಕ್ರಿಸ್ಮಸ್ ಮತ್ತು ನ್ಯೂ ಈಯರ್ ಆಚರಿಸುವಾಗ ಅವರು ತೊಟ್ಟ ಉಡುಗೆಗಳಿವು.

ಕೆಲವೇ ತಿಂಗಳ ಹಿಂದೆ ಯೂರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರನ್ನು ಮದುವೆಯಾದ ಮತ್ತು ಅದೇ ಚಿತ್ರದಲ್ಲಿ ಫಿಮೇಲ್ ಲೀಡ್ ನಲ್ಲಿ ಉತ್ತಮ ಅಭಿನಯದ ಮೂಲಕ ಗಮನ ಸೆಳೆದ ಯಾಮಿ ಗೌತಮ್ ಧರ್ ಕಾಶ್ಮೀರಿ ಸೂಟ್ನಲ್ಲಿ ಮಿಂಚುತ್ತಿದ್ದಾರೆ. ಕನ್ನಡತಿ ದೀಪಿಕಾ ಪಡುಕೋಣೆ ತಿಳಿಗಪ್ಪು ಜೀನ್ಸ್ ಪ್ಯಾಂಟ್ ಮೇಲೆ ಕಡು ಕಪ್ಪು ಬಣ್ಣದ ಟಾಪ್ ಧರಿಸಿದ್ದಾರೆ.

ನೀಳಕಾಯದ ಬೆಡಗಿ ದೀಪು ಕೆಮೆರಾಗೆ ಪೋಸ್ ನೀಡಿರುವ ಭಂಗಿ ನೋಡಿ. ಕೆಮೆರಾಗಳನ್ನೊಳಗೊಂಡ ಮೊಬೈಲ್ ಫೋನ್ಗಳು ಬರುವ ಮುಂಚೆ ಮಕ್ಕಳು ಫೋಟೋ ತೆಗಿಸಿಕೊಳ್ಳುವಾಗ ಪೋಸ್ ಕೊಡುತ್ತಿದ್ದ ಹಾಗಿದೆ ದೀಪಿಕಾ ಭಂಗಿ.

ಅನುಷ್ಕಾ ಶರ್ಮ ಮಾಮ್ಸ್ ಜೀನ್ಸ್ ಧರಿಸಿ ರಸ್ತೆ ಮೇಲೆ ಕೆಮೆರಾಗೆ ಫೋಸ್ ನೀಡಿದ್ದಾರೆ. ‘ಶೇರ್ಷಾ’ ಚಿತ್ರದ ಪ್ರಚಂಡ ಯಶಸ್ಸು ಕಿಯಾರಾ ಅಡ್ವಾಣಿಯನ್ನು ಜನಪ್ರಿಯತೆಯಲ್ಲಿ ಮತ್ತೊಂದು ಹಂತ ಮೇಲಕ್ಕೇರಿಸಿದೆ. ಇಲ್ಲಿ ಅವರು ಹಸಿರು ಪ್ರಿಂಟೆಡ್ ಡ್ರೆಸ್​ನಲ್ಲಿ ಗ್ಲಾಮರ್ ಗೊಂಬೆ ಥರ ಕಾಣುತ್ತಿದ್ದಾರೆ.

ಮೊನ್ನೆಯಷ್ಟೇ ಮದುವೆಯಾದ ಕತ್ರೀನಾ ಕೈಫ್ ಆಗಸ ಬಣ್ಬದ ಪ್ಯಾಂಟ್ ಮತ್ತು ಅದೇ ಕಲರ್ ಟಾಪ್ ಧರಿಸಿದ್ದಾರೆ. ಲಾಂಗ್ ಕೋಟ್ ಮತ್ತು ಸೋನಮ್ ಕಪೂರ್ ಇನ್ಸಪರೇಬಲ್ ಕಂಪ್ಯಾನಿಯನ್ಸ್ ಅನಿಸುತ್ತೆ. ತಮ್ಮ ಹೆಚ್ಚಿನ ಪೋಟೋಗಳಲ್ಲಿ ಅವರು ಲಾಂಗ್ ಕೋಟ್ ಧರಿಸಿರುತ್ತಾರೆ.

ಈಗ ಹೆಚ್ಚು ಸುದ್ದಿಯಲ್ಲಿರುವ ನಟಿಯೆಂದರೆ ನಿಸ್ಸಂದೇಹವಾಗಿ ಆಲಿಯಾ ಭಟ್. ಅವರ ಮಲ್ಟಿ ಲಿಂಗ್ವಲ್ ಮೂವೀ ‘ಆರ್ ಆರ್ ಆರ್’ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇಷ್ಟರಲ್ಲೇ ಅವರ ಮದುವೆ ರಣಧೀರ್ ಕಪೂರ್ ನೊಂದಿಗೆ ನಡೆಯಲಿದೆ. ಹೊಸ ವರ್ಷದ ಈವೆಂಟ್ಗೆ ಅವರು ನೀಲಿ ಬಣ್ಣದ ಲೆದರ್ ಪ್ಯಾಂಟ್ ಅದಕ್ಕೊಪ್ಪುವ ಟಾಪ್ ಧರಿಸಿ ಹೊರಟಿದ್ದಾರೆ.

ಇದನ್ನೂ ಓದಿ:   Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್