ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಉರುಳದಿರಲು ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ಮಾಡುತ್ತಿದ್ದಾರೆ: ಆರ್ ಅಶೋಕ, ಶಾಸಕ
ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಮತ್ತು ಎಂಪಿ ರೇಣುಕಾಚಾರ್ಯ ಅವರಿಗೆ ಕಾಂಗ್ರೆಸ್ ಗಾಳ ಹಾಕಿರುವ ಬಗ್ಗೆ ಕೇಳಿದಾಗ ಅಶೋಕ; ಪಕ್ಷನಿಷ್ಠೆ ಇರುವವರು, ನಾಯಕತ್ವದ ಮೇಲೆ ಪ್ರೀತಿ-ಅಭಿಮಾನ ಇರುವವರು ಪಕ್ಷ ಬಿಡೋದಿಲ್ಲ, ಸೋಮಶೇಖರ್ ಮತ್ತು ಇತರ ಎಲ್ಲ ನಾಯಕರೊಂದಿಗೆ ತಾನು ಮಾತಾಡಿರುವುನೆಂದು ಹೇಳಿ, ಯಾರೂ ಪಕ್ಷ ಬಿಡುತ್ತಿಲ್ಲ ಎಂದರು.
ಬೆಂಗಳೂರು: ಬಿಜೆಪಿ ನಾಯಕರು ಮೊದಲೆಲ್ಲ ಸಿದ್ದರಾಮಯ್ಯ ಸರ್ಕಾರ (Siddaramaiah government) 3 ತಿಂಗಳಲ್ಲಿ ಉರುಳುತ್ತೆ ಅನ್ನುತ್ತಿದ್ದ್ದರು, ನಂತರ ಉರುಳುವ ಆವಧಿಯನ್ನು ಡಿಸೆಂಬರ್ ಗೆ ವಿಸ್ತರಿಸಿದರು, ಈಗ ಲೋಕ ಸಭಾ ಚುನಾವಣೆಯ ನಂತರ ಅನ್ನುತ್ತಿದ್ದಾರೆ. ನಿನ್ನೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ಹಾಗೆ ಹೇಳಿದ್ದರು ಮತ್ತು ಇವತ್ತು ಬೆಂಗಳೂರಲ್ಲಿ ಪದ್ಮನಾಭನಗರ ಶಾಸಕ ಆರ್ ಅಶೋಕ (R Ashoka) ಅದನ್ನು ಪುನರಾವರ್ತಿಸಿದರು. ಇವರು ಯಾಕೆ ರಾಜ್ಯ ಸರ್ಕಾರದ ಆಯಷ್ಯವನ್ನು ಲೋಕಸಭಾ ಚುನಾವಣೆಯೊಂದಿಗೆ ಥಳುಕು ಹಾಕುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಅವರೆಡರ ನಡುವೆ ಏನು ಸಂಬಂಧ? ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ; ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಮತ್ತು ಎಂಪಿ ರೇಣುಕಾಚಾರ್ಯ ಅವರಿಗೆ ಕಾಂಗ್ರೆಸ್ ಗಾಳ ಹಾಕಿರುವ ಬಗ್ಗೆ ಕೇಳಿದಾಗ ಪಕ್ಷನಿಷ್ಠೆ ಇರುವವರು, ನಾಯಕತ್ವದ ಮೇಲೆ ಪ್ರೀತಿ-ಅಭಿಮಾನ ಇರುವವರು ಪಕ್ಷ ಬಿಡೋದಿಲ್ಲ, ಸೋಮಶೇಖರ್ ಮತ್ತು ಇತರ ಎಲ್ಲ ನಾಯಕರೊಂದಿಗೆ ತಾನು ಮಾತಾಡಿರುವುನೆಂದು ಹೇಳಿ, ಅವರು ಯಾರೂ ಪಕ್ಷ ಬಿಡುತ್ತಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ