ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ

Updated on: Sep 02, 2026 | 6:24 AM

ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 2ರ ದೈನಂದಿನ ರಾಶಿ ಭವಿಷ್ಯವನ್ನು ವಿವರಿಸಿದ್ದಾರೆ. ಬುಧವಾರದ ಈ ದಿನ ಶುಕ್ರ ಗ್ರಹ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಸಂಚರಿಸಲಿದ್ದು, ಚಂದ್ರ ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿದ್ದಾನೆ. ಪ್ರತಿ ರಾಶಿಯವರಿಗೆ ಆರ್ಥಿಕ, ಆರೋಗ್ಯ, ವೃತ್ತಿ ಮತ್ತು ಕೌಟುಂಬಿಕ ವಿಷಯಗಳಲ್ಲಿನ ಶುಭ ಅಶುಭ ಫಲಗಳನ್ನು ವಿವರವಾಗಿ ತಿಳಿಸಲಾಗಿದೆ.

ಇಂದು 2026ರ ಸೆಪ್ಟೆಂಬರ್ 2, ಬುಧವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಭರಣಿ ನಕ್ಷತ್ರ, ಧ್ರುವ ಯೋಗ ಮತ್ತು ಗರಜ ಕರಣ ಇರಲಿದೆ. ಇಂದು (ಸೆಪ್ಟೆಂಬರ್ 2) ಮಧ್ಯಾಹ್ನ 1 ಗಂಟೆ 51 ನಿಮಿಷಕ್ಕೆ ಶುಕ್ರ ಗ್ರಹ ಕನ್ಯಾ ರಾಶಿಯಿಂದ ತನ್ನ ಸ್ವಕ್ಷೇತ್ರವಾದ ತುಲಾ ರಾಶಿಗೆ ಪ್ರವೇಶ ಮಾಡಲಿದೆ. ಸೂರ್ಯನು ಸಿಂಹ ರಾಶಿಯಲ್ಲಿದ್ದು, ಚಂದ್ರನು ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. ಬುಧವಾರವು ವಿಷ್ಣು, ವಿನಾಯಕ ಮತ್ತು ಕಾಲಭೈರವನಿಗೆ ಪ್ರಿಯವಾದ ದಿನವಾಗಿದೆ. ಇಂದು ವಿಶ್ವ ತೆಂಗಿನಕಾಯಿ ದಿನ ಕೂಡ ಹೌದು. ಈ ದಿನದ ರಾಹುಕಾಲವು ಮಧ್ಯಾಹ್ನ 12 ಗಂಟೆ 19 ನಿಮಿಷದಿಂದ 1 ಗಂಟೆ 54 ನಿಮಿಷದ ತನಕ ಇರಲಿದ್ದು, ಸಂಕಲ್ಪ ಕಾಲ ಅಥವಾ ಶುಭ ಕಾಲ ಮಧ್ಯಾಹ್ನ 4 ಗಂಟೆ 57 ನಿಮಿಷದಿಂದ 6 ಗಂಟೆ 30 ನಿಮಿಷದ ತನಕ ಇರುತ್ತದೆ. ಇಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More