ಪಾಕಿಸ್ತಾನಕ್ಕೆ ಭಾರತದಿಂದ ರಫ್ತಾಗುವ ವಸ್ತುಗಳಲ್ಲಿ ಕೋಲಾರದ ಟೊಮೆಟೊ ಕೂಡ ಸೇರಿದೆ: ಅರುಣ್, ವರ್ತಕ

ಅರುಣ್​ ಕುಮಾರ್​ ಬೆಳ್ಳಿ

Updated on: Apr 28, 2025 | 6:51 PM

ಪಾಕಿಸ್ತಾನ ತನ್ನ ಬಹಳಷ್ಟು ಅವಶ್ಯಕತೆಗಳಿಗೆ ಭಾರತದ ಮೇಲೆ ಅವಲಂಬಿತವಾಗಿದ್ದರೂ ಕೀಳುಮಟ್ಟದ ಕೃತ್ಯಗಳನ್ನು ನಿಲ್ಲಿಸಿಲ್ಲ, ಅದು ಪದೇಪದೆ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನುಗ್ಗಿ ಹೊಡೀತೀವಿ ಅಂತ ಹೇಳಿರುವಂತೆಯೇ ಎಲ್ಲ 140 ಕೋಟಿ ಭಾರತೀಯರ ಆಸೆ ಅದೇ ಆಗಿದೆ, ಪಾಕಿಸ್ತಾನಕ್ಕೆ ನುಗ್ಗಿ ವೈರಿಗಳನ್ನು ಸದೆಬಡಿಯಬೇಕು ಎಂದು ಅರುಣ್ ಹೇಳಿದರು.

ಬೆಂಗಳೂರು,  ಏಪ್ರಿಲ್ 28: ಜೈಸಿ ಕರ್ನಿ ವೈಸಿ ಭರ್ನಿ ಅಂತ ಹೇಳೋದನ್ನು ನೀವು ಕೇಳಿದ್ದೀರಿ, ಪಾಕಿಸ್ತಾನದ ಸ್ಥಿತಿ ಹಾಗಾಗಿದೆ. ಭಾರತದಿಂದ ರಫ್ತಾಗುತ್ತಿದ್ದ (exports from India) ಹೆಚ್ಚು ಕಡಿಮೆ ಎಲ್ಲ ವಸ್ತುಗಳನ್ನು ತಡೆಹಿಡಿಯಲಾಗಿದೆ ಎಂದು ಎಪಿಎಂಸಿ ಯಾರ್ಡ್ ವರ್ತಕ ಅರುಣ್ ಹೇಳುತ್ತಾರೆ. ಅವರು ಹೇಳುವ ಪ್ರಕಾರ ಪಾಕಿಸ್ತಾನಕ್ಕೆ ಶೇಕಡ 55 ರಷ್ಟು ತರಕಾರಿಗಳು ಭಾರತದಿಂದ ರಫ್ತಾಗುತ್ತವೆ ಮತ್ತು ಇದರಲ್ಲಿ ಕೋಲಾರದ ಟೊಮೆಟೊ ಕೂಡ ಸೇರಿದೆ. ಗುಜರಾತ್ ನಿಂದ ಬೆಳ್ಳುಳ್ಳಿ, ಇಂದೋರ್ ನಿಂದ ಆಲೂಗಡ್ಡೆ ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಮೊದಲಾದವುಗಳನ್ನು ಪಾಕಿಸ್ತಾನಕ್ಕೆ ಕಳಿಸುತ್ತಿಲ್ಲ, ಮುಂದಿನ ಕೆಲವೇ ದಿನಗಳಲ್ಲಿ ಪಾಕಿಸ್ತಾನಕ್ಕೆ ಇದರ ಬಿಸಿ ತಗುಲಲಿದೆ ಮತ್ತು ಜನ ಅಲ್ಲಿನ ಸರ್ಕಾರವನ್ನು ಉಗಿಯಲಾರಂಭಿಸುತ್ತಾರೆ ಎಂದು ಅರುಣ್ ಹೇಳುತ್ತಾರೆ.

ಇದನ್ನೂ ಓದಿ:    ಪಹಲ್ಗಾಮ್​ ದಾಳಿ: ಪಾಕ್​ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ, ಅಷ್ಟಕ್ಕೂ ಸುದ್ದಿಯಲ್ಲೇನಿದೆ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.