ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು! ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ, ವಿಡಿಯೋ ವೈರಲ್
ಉಡುಪಿಯ ಮಲ್ಪೆ ಬೀಚ್ನ ಸೀವಾಕ್ ಬಳಿ ಮಂಗಳವಾರ ತಡರಾತ್ರಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಏಕಾಏಕಿ ಅಪ್ಪಳಿಸಿದ ಬೃಹದಾಕಾರದ ತೆರೆಯೊಂದಿಗೆ ಲಕ್ಷ ಲಕ್ಷ ಬಂಗುಡೆ, ಭೂತಾಯಿ ಮೀನುಗಳು ತೀರಕ್ಕೆ ಅಪ್ಪಳಿಸಿವೆ. ಇದು ಸ್ಥಳೀಯರನ್ನು ಚಕಿತರನ್ನಾಗಿಸಿದೆ. ಅಪರೂಪದ ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.
ಉಡುಪಿ, ನವೆಂಬರ್ 5: ಏಕಾಏಕಿ ದಡಕ್ಕಪ್ಪಳಿಸಿದ ಬೃಹತ್ ಅಲೆ. ಅದರೊಂದಿಗೆ ಬಂದು ಬಿದ್ದ ರಾಶಿ ರಾಶಿ ಮೀನುಗಳು. ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ ಮೀನುಗಳ ಸುಗ್ಗಿ. ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಉಡುಪಿಯ ಮಲ್ಪೆ ಕಡಲತೀರದ ಸೀವಾಕ್. ಮಂಗಳವಾರ ತಡರಾತ್ರಿ ನಡೆದ ಅಚ್ಚರಿಯ ಘಟನೆ ಸ್ಥಳೀಯರು ಮತ್ತು ಮೀನುಗಾರರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ. ಲಕ್ಷ ಲಕ್ಷ ಬಂಗುಡೆ, ಭೂತಾಯಿ ಮೀನುಗಳು ತೀರಕ್ಕೆ ಅಪ್ಪಳಿಸಿದ ವಿಡಿಯೋ ಈಗ ವೈರಲ್ ಆಗಿದೆ.
