ಉಡುಪಿಯಲ್ಲಿ ಭೀಕರ ಅಪಘಾತ, ಗುದ್ದಿದ ರಭಸಕ್ಕೆ ಬಸ್ ಸ್ಥಿತಿ ಹೇಗಾಗಿದೆ ನೋಡಿ

Edited By:

Updated on: Nov 03, 2024 | 11:52 AM

ಟೂರಿಸ್ಟ್ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಬಳಿ ಟೂರಿಸ್ಟ್ ಬಸ್​ ಲಾರಿಗೆ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರವಾಸಿಗರ ಬಸ್ ನಜ್ಜುಗುಜ್ಜಾಗಿದೆ.

ಉಡುಪಿ, (ನವೆಂಬರ್ 03): ಟೂರಿಸ್ಟ್ ಬಸ್​ ಲಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಬಳಿ ನಡೆದಿದೆ. ಕೊಲ್ಲೂರು ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್, ಉದ್ಯಾವರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 17 ಪ್ರವಾಸಿಗರಿಗೆ ಗಾಯಗಳಾಗಿವೆ. ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಪ್ರವಾಸಿಗರ ಬಸ್ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.